ಸಾರ್ವಜನಿಕ ಸ್ಥಳಗಳಲ್ಲಿ ಬಂದೂಕು ಪ್ರದರ್ಶನ ಪ್ರಕರಣಗಳು ವೈರಲ್   :     ಜಿಲ್ಲೆಯಲ್ಲಿ ಅಧಿಕೃತ ಬಂದೂಕು ಲೈಸೆನ್ಸ್ ದಾರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ ಪೊಲೀಸ್ ಇಲಾಖೆ.                                                                                                  ಜಯ ಧ್ವಜ ನ್ಯೂಸ್, ರಾಯಚೂರು, ಫೆ.20- ಸಾರ್ವಜನಿಕ ಸ್ಥಳಗಳಲ್ಲಿ ಬಂದೂಕು ಪ್ರದರ್ಶನ ಪ್ರಕರಣಗಳು ವೈರಲ್ ಆಗುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತು ಕೊಂಡಿದ್ದು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಧಿಕೃತ ಬಂದೂಕು ಲೈಸೆನ್ಸ್ ದಾರರ ಸಭೆ ನಡೆಸಿ ಕಟ್ಟು ನಿಟ್ಟಿನ ಸೂಚನೆ ನೀಡಿದೆ.   

   ಆಯಾ ಠಾಣಾ ವ್ಯಾಪ್ತಿಯಲ್ಲಿರುವ   ಗನ್  ಲೈಸೆನ್ಸ್ ದಾರರ ಸಭೆ ನಡೆಸಿ ತಿಳಿವಳಿಕೆ ನೀಡಿ ಅನಧಿಕೃತ ವ್ಯಕ್ತಿಗಳ ಕೈಯಲ್ಲಿ ಗನ್ ನೀಡುವುದು, ಪ್ರದರ್ಶನ ಮಾಡುವುದು ,ಉಪಯೋಗಿಸುವುದು ಶಸ್ತ್ರಾಸ್ತ್ರ ಕಾಯ್ದೆ  ಉಲ್ಲಂಘನೆಯಾಗಿದ್ದು ಗನ್ ಲೈಸೆನ್ಸ್ ದಾರರು ನಿಯಮ ಉಲ್ಲಂಘಿಸಿದ್ದಲ್ಲಿ ಲೈಸೆನ್ಸ್ ದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಸಾರ್ವಜನಿಕ ಸ್ಥಳಗಳು, ಜಾತ್ರೆ , ಮದುವೆ ಸಮಾರಂಭ ಮುಂತಾದವುಗಳಲ್ಲಿ ಬಂದೂಕು ಪ್ರದರ್ಶನ ಹಾಗೂ ಗಾಳಿಯಲ್ಲಿ ಗುಂಡು ಹಾರಿಸುವ ಪ್ರಕರಣಗಳು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದಲ್ಲಿ ವರದಿಯಾಗುತ್ತಿರುವ ಹಿನ್ನೆಲೆ ಪೊಲೀಸ್ ಇಲಾಖೆ ಜಾಗೃತಗೊಂಡಿದ್ದು ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವುದಾಗಿ ಲೈಸೆನ್ಸ್ ದಾರರಿಗೆ ಸೂಚನೆ ನೀಡಿದೆ
.

Comments

Popular posts from this blog