ಫ್ಲೋರಿಡಾ ಯೋಗ ಸಂಸ್ಕೃತ ವಿವಿಯಿಂದ ಶ್ರೀ ಸುಬುಧೇಂದ್ರತೀರ್ಥರಿಗೆ ಪ್ರಶಸ್ತಿ: ರಾಜಾ.ಎಸ್ ಗಿರಿಯಾಚಾರ್ , ರಾಘವೇಂದ್ರ ರಾಜಕುಮಾರ್, ಶ್ರೀ ಷಾನಂದರವರಿಗೆ ಡಾಕ್ಟರೇಟ್ ಪದವಿ ಪ್ರದಾನ. ಜಯ ಧ್ವಜ ನ್ಯೂಸ್, ರಾಯಚೂರು, ಫೆ.24- ಮಂತ್ರಾಲಯದಲ್ಲಿ ಶ್ರೀ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ಅಮೇರಿಕಾದ ಫ್ಲೋರಿಡಾ ಯೋಗ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪ್ರಶಸ್ತಿ ಹಾಗೂ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ ನೆರವೇರಿತು.
ಸಾಯಿಂಕಾಲ ಯೋಗೀಂದ್ರ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ವೈದ್ಯ ದಾಸ ಯೋಗಿ ಪ್ರಶಸ್ತಿ ಪ್ರದಾನ ಹಾಗೂ
ರಾಜಾ.ಎಸ್.ಗಿರಿಯಾಚಾರ್ಯರಿಗೆ, ಹೈಕೋರ್ಟ್ ನ್ಯಾಯಾಧೀಶ ಶ್ರೀಷಾನಂದವರಿಗೆ ಹಾಗೂ ನಟ ರಾಘವೇಂದ್ರ ರಾಜಕುಮಾರರವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಇದೆ ಸಂದರ್ಭದಲ್ಲಿ ದಾನಿಗಳಿಗೆ ಪೀಠಾಧಿಪತಿಗಳು ಅನುಗ್ರಹ ಸನ್ಮಾನ ನೆರವೇರಿಸಿದರು.




Comments
Post a Comment