18 ನೇ ರೈಲ್ವೆ ಜೋನ್ ಅಸ್ತಿತ್ವಕ್ಕೆ- ಡಾ.ಬಾಬುರಾವ್


ಜಯ ಧ್ವಜ ನ್ಯೂಸ್ ರಾಯಚೂರು,ಮೇ.31- ರೈಲ್ವೆ ಇಲಾಖೆಯ 18 ನೇ ರೈಲ್ವೆ ಜೋನ್ ಅಸ್ತಿತ್ವಕ್ಕೆ ಬಂದಿದೆ ಎಂದು ರೈಲ್ವೆ ಸಲಹಾ ಸಮಿತಿಯ ಮಾಜಿ ಸದಸ್ಯ ಡಾ. ತಿಳಿಸಿದ್ದಾರೆ.


ದಕ್ಷಿಣ ಮಧ್ಯ ರೈಲ್ವೆ ಜೋನ್ ನಲ್ಲಿದ್ದ ವಿಜಯವಾಡ, ಗುಂಟೂರು, ಗುಂತಕಲ್,ವಿಶಾಖಪಟ್ಟಣಂ ವಿಭಾಗಗಳನ್ನು ಒಳಗೊಂಡಂತೆ ಹೊಸದಾಗಿ ಸೌತ್ ಕೋಸ್ಟ್ ರೈಲ್ವೆ ಜೋನ್ ಅಸ್ತಿತ್ವಕ್ಕೆ ಬಂದಿದ್ದು ಜೂನ್ ಒಂದರಂದು ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ರಾಯಚೂರು ಹಾಗೂ ಯಾದಗಿರಿಗಳು ಮೊದಲಿನಂತೆ ದಕ್ಷಿಣ ಮಧ್ಯೆ ರೈಲ್ವೆ ಜೋನ್ ನಲ್ಲಿ ಮುಂದುವರೆಯಲಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog