ನೇತಾಜಿ ನಗರ ಠಾಣೆ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ- ಚಿನ್ನ , ಬೆಳ್ಳಿ ಆಭರಣ ಜಪ್ತಿ.                                       ಜಯಧ್ವಜ ನ್ಯೂಸ್, ರಾಯಚೂರು, ಮೇ.14-  ನೇತಾಜಿ ನಗರ ಪೊಲೀಸ್ ಠಾಣೆ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆಸಿ 1.26ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಹನುಮಾನ್ ಟಾಕೀಸ್ ಬಳಿಯ  ಕೊತ್ತಪೇಟೆ ನಿವಾಸಿ ರಹೀಮ ತಂದೆ ಶೇಕ್ ನಜೀರ್ ಮನೆಯ ಬೀಗ ಮುರಿದು 1.49 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ, ನಗದು ದೋಚಿದ್ದ ಆರೋಪಿ  ರಹೀಮ್  ನನ್ನು ಬಂಧಿಸಿದ ಪೊಲೀಸರು ಚಿನ್ನ ಬೆಳ್ಳಿ ಆಭರಣ ವಶ ಪಡಿಸಿಕೊಂಡಿದ್ದಾರೆ.

ಪಶ್ಚಿಮ ವಲಯ ಸಿಪಿಐ, ನೇತಾಜಿ ನಗರ ಠಾಣೆ ಪಿಐಸ್ ಐ, ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ , ಎಎಸ್ಪಿ, ಡಿಎಸ್ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Comments

Popular posts from this blog