ಹೆಚ್ ಎ ಎಲ್ ನಿಂದ ಸಿ ಎಸ್ ಆರ್ ನಿಧಿಯಡಿ 50ಕೋಟಿ ರೂ. ವೆಚ್ಚದಲ್ಲಿ ಜಲಾಶಯ ನಿರ್ಮಾಣ ಭೂಮಿಪೂಜೆ :           ಮಂತ್ರಾಲಯದಲ್ಲಿ ಭಕ್ತರಿಗೆ ಬೇಸಿಗೆಯಲ್ಲಿ ನೀರಿನ ದಾಹ ನೀಗಿಸಲಿರುವ  ವ್ಯಾಸತೀರ್ಥ ಜಲಾಶಯ- ಶ್ರೀ  ಸುಬುಧೇಂದ್ರತೀರ್ಥರು                                                                                                                                ಜಯ ಧ್ವಜ ನ್ಯೂಸ್ , ರಾಯಚೂರು, ಜು.30- ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಬೇಸಿಗೆಯಲ್ಲಿ ನೀರಿನ ದಾಹ ನೀಗಿಸಲು ಮುಂದಿನ ಮೂವತ್ತು ವರ್ಷದ ಅವಧಿಗೆ ಶುದ್ಧ ಕುಡಿಯುವ ನೀರಿನ ಸೌಕರ್ಯ ಒದಗಿಸಲು ವ್ಯಾಸ ತೀರ್ಥ ಜಲಾಶಯ ನಿರ್ಮಾಣವಾಗಲಿದೆ ಎಂದು    ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು.

ಅವರಿಂದು ಮಂತ್ರಾಲಯದಲ್ಲಿ  ಗೋಶಾಲೆ ಪಕ್ಕದ ಶ್ರೀಮಠಕ್ಕೆ ಸೇರಿದ ಜಮೀನಿನಲ್ಲಿ ಭೂಮಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ರಾಮದೇವರು ಓಡಾಡಿದ ಈ ನೆಲದಲ್ಲಿ ರಾಘವೇಂದ್ರ ಸ್ವಾಮಿಗಳು ನೆಲೆಸಿದ್ದು ಪ್ರತಿ ವರ್ಷ ರಾಯರ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯ ಜನರು ಆಗಮಿಸುತ್ತಾರೆ ಅವರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಈ ಜಲಾಶಯ ನಿರ್ಮಾಣ ಸಹಕಾರಿಯಾಗಲಿದೆ ಎಂದರು.

ತುಂಗಭದ್ರಾ ನದಿ ಬೇಸಿಗೆಯಲ್ಲಿ ಒಣಗುತ್ತದೆ ಆದ್ದರಿಂದ ಜನರಿಗೆ ನೀರಿನ ಹಾಹಾಕಾರ ತಪ್ಪಿಸಲು ಹೆಚ್ ಎ ಎಲ್ ಸಂಸ್ಥೆ 50 ಕೋಟಿ ರೂ ವೆಚ್ಚದಲ್ಲಿ ಜಲಾಶಯ ನಿರ್ಮಿಸುತ್ತಿರುವದು ಸ್ತುತ್ಯಾರ್ಹ ಸಂಗತಿ ಎಂದರು.

40 ಎಕರೆ ಜಾಗದಲ್ಲಿ ವಿಶಾಲ ಜಲಾಶಯ ನಿರ್ಮಾಣ ನಡೆಯಲಿದ್ದು 18 ತಿಂಗಳಲ್ಲಿ ಜಲಾಶಯ ಪೂರ್ಣಗೊಳ್ಳಲಿದೆ ಎಂದರು . ಬೆಂಗಳೂರಿನ ಇಐ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಜವಾಬ್ದಾರಿ ಹೊತ್ತಿದೆ ಎಂದರು. ಹೆಚ್ ಎ ಎಲ್ ಸಂಸ್ಥೆಯ ಬಾಲಸುಬ್ರಹ್ಮಣ್ಯಂ ಮಾತನಾಡಿ   ನಮ್ಮ ಸಂಸ್ಥೆ ಲಘು ವಿಮಾನ, ಹೆಲಿಕಾಪ್ಟರ್ ನಿರ್ಮಾಣ ಮಾಡುವ ಸಂಸ್ಥಯಾಗಿದೆ ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಜಲಾಶಯ ನಿರ್ಮಾಣ ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯವೆಂದರು. ಇಐ ಟೆಕ್ನಾಲಜಿಯ ರಂಗನಾಥ್ ಮಾತನಾಡಿ ರಾಯರ ದಯೆಯಿಂದ ತಾಂತ್ರಾಕವಾಗಿ ಎಲ್ಲವು ಸಮಯೋಚಿತವಾಗಿ ನಡೆದಿದೆ ಗುರು ಪೂರ್ಣಿಮೆ ಮರುದಿನ ಭೂಮಿಪೂಜೆ ಹಿಂದಿನ ಮಹತ್ವವನ್ನು ವಿವರಿಸಿ ರಾಯರೇ ಸ್ವತ: ನಿಂತು ಜಲಾಶಯ ನಿರ್ಮಿಸುತ್ತಾರೆ ಎಂದು ರಾಯರ ಮೇಲಿನ ಅನನ್ಯ ಭಕ್ತಿ ವ್ಯಕ್ತಪಡಿಸಿದರು.


ಶ್ರೀನಿವಾಸ್ ರಾವ್ ಸ್ವಾಗತಿಸಿ ನಿರೂಪಿಸಿದರು. ವೇದಿಕೆ ಮೇಲೆ ಹೆಚ್ ಎ ಎಲ್ ಎಂಡಿ ಕೆ.ರವಿ ಇದ್ದರು. ಪಾಠಶಾಲೆ ವಿದ್ಯಾರ್ಥಿಗಳು ವೇದಘೋಷ ಮಾಡಿದರು.
 

ಮಂಜುನಾಥ, ರಮೇಶ ಸೇರಿದಂತೆ  ಪಂಡಿತರು, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು. ಇದಕ್ಕೂ ಪೂರ್ವ ಶ್ರೀ ಮಠದಲ್ಲಿ ಜಲಾಶಯ ನಿರ್ಮಾಣ ಒಪ್ಪಂದ ಪತ್ರಕ್ಕೆ ಉಭಯರಿಂದ ಸಹಿ ಹಾಕಲಾಯಿತು .

Comments

Popular posts from this blog