ರಕ್ತದಾನದಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ- ಡಾ.ನಂದಿತಾ   
                                                       ಜಯ‌ ಧ್ವಜ ನ್ಯೂಸ್ , ರಾಯಚೂರು, ಜು.22- ಆರೋಗ್ಯವಂತರಾಗಿರುವ ಪ್ರತಿಯೊಬ್ಬರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ಬಹಳಷ್ಟು ಒಳ್ಳೆಯದು ಇದರಿಂದ ನಮ್ಮ ಆರೋಗ್ಯವು ಸರಿಯಾಗಿರುವಂತೆ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ರಕ್ತದಾನದಿಂದ ಆರೋಗ್ಯಕ್ಕೆ ಯಾವುದೇ ಹಾನಿಯಲ್ಲವೆಂದು   ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ನಂದಿತಾ ಹೇಳಿದರು. ಅವರು ನಗರದ ಜಹಿರಾಬಾದ್ ಬಡಾವಣೆಯಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಮಹಾದಾನವಾಗಿದ್ದು ತುರ್ತು ಸಂದರ್ಭದಲ್ಲಿ ಮತ್ತೊಬ್ಬರಿಗೆ ಜೀವದಾನ ನೀಡುತ್ತದೆ ಎಂದರು.  ರಿಮ್ಸ್  ವೈದ್ಯಾಧಿಕಾರಿಗಳಾದ  ಅಹಮದ್  ಹುಸೇನ್ ಮಾತನಾಡಿ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವದರಿಂದ ಕ್ಯಾನ್ಸರ್ ರೋಗವನ್ನು ಸಹ ನಾವು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು. ಪ್ರತಿಯೊಬ್ಬರ ದೇಹದಲ್ಲಿ ರಕ್ತವು ಯಾವುದೇ ರೀತಿಯಿಂದ ಕೃತಕವಾಗಿ ತಯಾರಾಗುವುದಿಲ್ಲ ಅದನ್ನು ಒಬ್ಬ ವ್ಯಕ್ತಿಯಿಂದ ಒಬ್ಬ ವ್ಯಕ್ತಿಗೆ ಮಾತ್ರ ಪಡೆದುಕೊಳ್ಳಬಹುದು ಅದಕ್ಕಾಗಿ ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ರಕ್ತದಾನವು ಅತ್ಯಂತ ಮಹತ್ವದ್ದಾಗಿದೆ ಎಂದರು. 

ಮುಖಂಡರಾದ  ರವೀಂದ್ರ ಜಲ್ದಾರ್ ಮಾತನಾಡಿ  ನಮ್ಮ ಬಡಾವಣೆಯಲ್ಲಿ ಇಂತಹ ಕಾರ್ಯಕ್ರಮಗಳು ಸತತವಾಗಿ ನಡೆಯುತ್ತಿರಲಿ ಇದರಿಂದ ಗರ್ಭಿಣಿಯರಿಗೆ ಮಕ್ಕಳಿಗೆ ಅತ್ಯಂತ ಉಪಯುಕ್ತ ವಾಗಲು ಸಹಾಯವಾಗುತ್ತದೆ ನಾನು ಈಗಾಗಲೇ ಕ್ರೀಡಾಪಟು ಆಗಿದ್ದರು ಸಹ ಪ್ರತಿ ಬಾರಿಯೂ ನಾನು ರಕ್ತದಾನ ಮಾಡುವುದರ ಮೂಲಕ ನನ್ನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾ ಬಂದಿದ್ದೇನೆ ಆದಕಾರಣ ತಾವುಗಳು ರಕ್ತದಾನವನ್ನು ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಡಾವಣೆ ನಿವಾಸಿಗಳು ಭಾಗವಹಿಸಿದ್ದರು.

Comments

Popular posts from this blog