ಎಸ್ ಐ ಆರ್ ನಮೂನೆಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸಲು ಜಿಲ್ಲಾಧಿಕಾರಿ ಪೂವಿತಾ ಸೂಚನೆ
ಜಯ ಧ್ವಜ ನ್ಯೂಸ್ ,ರಾಯಚೂರು, ಜು.30- ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಯಚೂರು ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವು ವೇಗವಾಗಿ ಸಾಗುತ್ತಿದ್ದು, ಆಗಸ್ಟ್ 8ರವರೆಗೆ ಅಭಿಯಾನ ಮುಂದುವರಿಯಲಿದೆ. ಉಳಿದಿರುವ ಮತದಾರರು ತಮ್ಮ ಎಣಿಕೆ ನಮೂನೆಗಳನ್ನು ಕೂಡಲೇ ಭಾನುವಾರದೊಳಗೆ ಆನ್‌ಲೈನ್ ಅಥವಾ ಖುದ್ದಾಗಿ ಸಲ್ಲಿಸುವ ಮೂಲಕ ಅಭಿಯಾನದ ಯಶಸ್ವಿಗೆ ಸಹಕಾರಿಸಬೇಕೆಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಾದ ಪೂವಿತಾ ಎಸ್. ಅವರು ಹೇಳಿದರು.
ಜುಲೈ 30ರ ಗುರುವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಠರಣೆ ಕಾರ್ಯಕ್ರಮವು ರಾಯಚೂರು ಜಿಲ್ಲೆಯಲ್ಲಿ ನಿಗದಿತ ವೇಳಾಪಟ್ಟಿಯಂತೆ ಯಶಸ್ವಿಯಾಗಿ ಪ್ರಗತಿಯಲ್ಲಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ನೂಮರೇಷನ್ ಫಾರ್ಮ್ ವಿತರಣೆ ಹಾಗೂ ಸಂಗ್ರಹ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳುತಿದೆ. ಪ್ರಸ್ತುತ ಜಿಲೆಯಲ್ಲಿ ಒಟ್ಟು ಮತದಾರರು 17,14,559 ಇದ್ದು, ಅದರಲ್ಲಿ 15,84,491 ಡಿಜಿಟೈಸೇಶನ್ ಹಾಗೂ ಎಎಸ್‌ಡಿಡಿ ಅಡಿಯಲ್ಲಿ ಇಎಫ್ ಸಂಗ್ರಹವಾಗಿದ್ದು, ಎನ್ಯೂಮರೇಷನ್ ಫಾರ್ಮ್ಗಳು ಇನ್ನೂ ಸಂಗ್ರಹವಾಗಬೇಕಿದೆ. ಈಗಾಗಲೇ ಸ್ವೀಕರಿಸಿರುವ ಫಾರ್ಮ್ಗಳಲ್ಲಿ 1,30,068 ಎನ್ನೂಮರೇಷನ್ ಫಾರ್ಮ್ಗಳ ಡಿಜಿಟೈಸೇಶನ್ ಕಾರ್ಯ ಬಾಕಿಯಿದೆ. ಈ ಕಾರ್ಯವನ್ನು ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.
ಜುಲೈ 30ರ ಬೆಳಿಗ್ಗೆ 10 ಗಂಟೆಯ ವೇಳೆಗೆ ಶೇ.89.36ರಷ್ಟು ನಮೂನೆಗಳ ಡಿಜಿಟೈಸೇಶನ್ ಪೂರ್ಣಗೊಂಡಿದ್ದು, ಒಟ್ಟಾರೆ ಶೇ.92ಕ್ಕಿಂತ ಹೆಚ್ಚು ಎಣಿಕೆ ಹಾಗೂ ವರ್ಗೀಕರಣ ಕಾರ್ಯ ಪೂರ್ಣಗೊಂಡಿದೆ. ಉಳಿದ ಶೇ.7.5ರಷ್ಟು ಎಣಿಕೆ ನಮೂನೆಗಳ ಸಂಗ್ರಹಣೆ ಮಾತ್ರ ಬಾಕಿಯಿದ್ದು, ಸಾರ್ವಜನಿಕರು ತ್ವರಿತವಾಗಿ ನಮೂನೆ ಸಲ್ಲಿಸಿದರೆ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಅಬ್ಬೆಂಟ್, ಶಿಫ್ರೆಡ್, ಡೆತ್, ಡುಪ್ಲಿಕೇಶನ್ ಹಾಗೂ ಇತರೆ ವಿಭಾಗದಲ್ಲಿ ಒಟ್ಟು 2,23,737 (13.05%) ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 4,839 ಗೈರು ಹಾಜರಾತಿ ಮತದಾರರು ಇದ್ದಾರೆ. ಇವರು ಉದ್ಯೋಗ ಅಥವಾ ಇತರೆ ಕಾರಣಗಳಿಂದ ಜಿಲ್ಲೆ ಬಿಟ್ಟು ಹೊರಗಡೆ ಹೋಗಿದ್ದರೆ, ಆಗಸ್ಟ್ 8ರೊಳಗೆ ಅಥವಾ ಸಾಧ್ಯವಾದರೆ ಈ ಭಾನುವಾರದೊಳಗೆ ಆನ್‌ಲೈನ್ ಅಥವಾ ಖುದ್ದಾಗಿ ಬಂದು ಎಣಿಕೆ ನಮೂನೆ ಸಲ್ಲಿಸುವ ಅವಕಾಶವಿದೆ ಎಂದರು.
ಒಂದಕ್ಕಿAತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ತಾವು ಮತದಾನ ಮಾಡಲು ಬಯಸುವ ಸ್ಥಳದಲ್ಲಿ ಮಾತ್ರ ಹೆಸರು ಉಳಿಸಿಕೊಂಡು, ಉಳಿದ ಕಡೆ ಡುಪ್ಲಿಕೇಶನ್ ಕುರಿತು ಮಾಹಿತಿ ನೀಡಬೇಕು.
ಇದರಿಂದ ಮತದಾರರ ಪಟ್ಟಿಯನ್ನು ದೋಷರಹಿತವಾಗಿಸಲು ಸಹಕಾರಿಯಾಗಲಿದೆ. ಮತದಾರರು ಮನೆಗೆ ಬೀಗ ಹಾಕಿರುವುದು, ಉದ್ಯೋಗ, ಶಿಕ್ಷಣ, ವಲಸೆ ಅಥವಾ ಇತರ ಕಾರಣಗಳಿಂದ ತಾತ್ಕಾಲಿಕವಾಗಿ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಕೆಲವು ಎನ್ನೊಮರೇಷನ್ ಫಾರ್ಮ್ಗಳು ಇನ್ನೂ ಸಂಗ್ರಹವಾಗಿಲ್ಲ. ಇಂತಹ ಮತದಾರರನ್ನು ಗುರುತಿಸಿ ಬಿಎಲ್‌ಒಗಳ ಮೂಲಕ ಮರು ಮನೆ ಭೇಟಿ, ದೂರವಾಣಿ ಸಂಪರ್ಕ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಹಾಗೂ ಮತದಾರರ ಸಹಾಯ ಕೇಂದ್ರಗಳ ಮೂಲಕ ವಿಶೇಷ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಅರ್ಜಿ ನಮೂನೆಗಳನ್ನು ಸಲ್ಲಿಸಲು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ಕೊನೆಯ ದಿನಾಂಕ: 08-08-2026 ಆಗಿದೆ. ಆದ್ದರಿಂದ ಇನ್ನೂ ತಮ್ಮ ಎನ್ನೂಮರೇಷನ್ ಫಾರ್ಮ್ ಸಲ್ಲಿಸದಿರುವ ಎಲ್ಲಾ ಅರ್ಹ ಮತದಾರರು ವಿಳಂಬ ಮಾಡದೆ. ತಮ್ಮ ವ್ಯಾಪ್ತಿಯ ಬಿಎಲ್‌ಒ ಅಥವಾ ಸಮೀಪದ ಮತದಾರರ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ ನಿಗದಿತ ದಿನಾಂಕದೊಳಗೆ ಕಡ್ಡಾಯವಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕೋರಿದ್ದರು.
ಈ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೋಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಜಿಲ್ಲಾಧಿಕಾರಿಗಳ ಕಚೇರಿ ಚುನಾವಣೆ ಶಾಖೆಯ ಶಿರಸ್ತೆದಾರ ಋಷಿಕೇಶಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಸುರೇಶ ಸೇರಿದಂತೆ ಇತರರು ಇದ್ದರು.

Comments
Post a Comment