ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ: ಪತ್ರಕರ್ತನ ಬೆನ್ನ ಹಿಂದಿನ ಒಳ್ಳೆ ಮಾತು ಪದ್ಮಶ್ರೀ ಪ್ರಶಸ್ತಿ ದೊರೆತಂತೆ- ಶಿವಾನಂದ ತಗಡೂರು. ಜಯ ಧ್ವಜ ನ್ಯೂಸ್, ರಾಯಚೂರು,ಜು.28- ಒಬ್ಬ ಪತ್ರಕರ್ತನ ಬೆನ್ನ ಹಿಂದೆ ಒಳ್ಳೆ ಮಾತುಗಳನ್ನಾಡಿದಾಗ ಅದು ಪದ್ಮಶ್ರೀ ಪ್ರಶಸ್ತಿ ಸಿಕ್ಕಂತಾಗುತ್ತದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಯ ಪಟ್ಟರು .
ಅವರಿಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ರಾಯಚೂರು ರಿಪೋರ್ಟ್ರರ್ಸ್ ಗಿಲ್ಡ್ ಮತ್ತು ಸಾರ್ವಜನಿಕ ವಾರ್ತಾ ಮತ್ತು ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ ನೆರವೇರಿಸಿ ಆಶಯ ನುಡಿಗಳನ್ನಾಡಿದರು.
ಪತ್ರಿಕಾ ಕ್ಷೇತ್ರಕ್ಕೆ ತನ್ನದೆಯಾದ ಘನತೆ ಗೌರವವಿದೆ ಪತ್ರಕರ್ತರ ಕಷ್ಟ ಸುಖಗಳಿಗೆ ಕೆಯುಡ್ಬ್ಲೂಜೆ ಸ್ಪಂದಿಸುತ್ತಿದೆ ಪತ್ರಕರ್ತರು ಬೇಡಿಕೆ ಅನುಗುಣವಾಗಿ ಸರ್ಕಾರಕ್ಕೆ ಮನವಿ ಮಾಡಿ ಸೌಲತ್ತು ಪಡೆಯುವ ಪ್ರಯತ್ನ ಸಂಘ ನಿರಂತವಾಗಿ ಮಾಡುತ್ತಿದೆ ಎಂದರು. ಪತ್ರಕರ್ತನಿಗೆ ಗೌರವ ಸಿಗುವುದು ಆತನ ಸ್ವಾಭಿಮಾನ ಮತ್ತು ಸ್ವಾರ್ಥರಹಿತ ಬರವಣಿಗೆಯಿಂದ ಒಬ್ಬ ಪತ್ರಕರ್ತನ ಬೆನ್ನ ಹಿಂದೆ ಯಾರಾದರೂ ಒಳ್ಳೆ ಮಾತನಾಡಿ ಆತನಿಗೆ ಪ್ರಶಂಸೆ ಮಾಡಿ ಆತನ ಬರವಣಿಗೆ ಸಮಾಜಮುಖಿ ಕರ್ತವ್ಯವನ್ನು ಕೊಂಡಾಡಿದರೆ ಅದು ಆತನಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಂತೆ ಎಂದು ನಾನು ಭಾವಿಸಿದ್ದೇನೆಂದರು. ಕ್ರಿಮಿನಲ್ , ವಸೂಲಿ, ಸುಳ್ಳು ಸುದ್ದಿ ಬರೆಯುವ ಪತ್ರಕರ್ತರನ್ನು ಸಂಘ ಸಹಿಸುವುದಿಲ್ಲವೆಂದು ಎಚ್ಚರಿಕೆ ನೀಡಿದ ಅವರು ಯಾರ ವೈಯಕ್ತಿಕ ಜೀವನದಲ್ಲಿ ಇಣುಕುವ ಹಕ್ಕು ನಮಗಿಲ್ಲ ವೆಂದು ಅವರು ತಪ್ಪು ಮಾಡಿದವರು ಬಗ್ಗೆ ವರದಿ ಮಾಡಿ ಆದರೆ ಹಣಕ್ಕಾಗಿ ಸುದ್ದಿ ಎಂದು ಸಂಘ ಸಹಿಸಿಲ್ಲ ಸಹಿಸುವುದಿಲ್ಲವೆಂದು ಎಚ್ಚರಿಸಿದರು. ಕೆಯುಡ್ಬ್ಲೂಜೆ ಜಿಲ್ಲಾ ಘಟಕದ ಅಧ್ಯಕ್ಷರು ಉತ್ತಮವಾಗಿ ಕಾರ್ಯಕ್ರಮ ಆಯೋಜಿಸಿದ್ದು ಈದಿ ಮುಂದೆ ನಿಮ್ಮ ಜಿಲ್ಲೆಯಲ್ಲಿದೆ ರಾಜ್ಯ ಸಮ್ಮೇಳನವಿದ್ದು ಅದನ್ನು ಯಶಸ್ವಿಯಾಗಿ ನೆರವೇರಲು ಎಲ್ಲರೂ ಸಹಕರಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕೆಯುಡ್ಬ್ಲೂಜೆ ಜಿಲ್ಲಾ ಅಧ್ಯಕ್ಷ ಆರ್ .ಗುರುನಾಥ ಮಾತನಾಡಿ ಪತ್ರಿಕಾ ದಿನಾಚರಣೆ ಆಯೋಜನೆ ಉದ್ದೇಶ ವಿವರಿಸಿ ಪತ್ರಕರ್ತರು ಬದುಕು ಅತ್ಯಂತ ಕಷ್ಟಕರವಾಗಿ ಅವರ ಜೀವನಕ್ಕೆ ಭದ್ರತೆಯಿಲ್ಲ ಆರ್ಥಿಕವಾಗಿ ಬೇಧವಿಲ್ಲದೆ ಪತ್ರಿಕೆ ನಡೆಸುವುದು ಸಾಧ್ಯವಿಲ್ಲ ಸರ್ಕಾರ ಪತ್ರಕರ್ತರಿಗೆ ನಿವೇಶನ, ಬಸ್ ಪಾಸ್, ಪಿಂಚಣಿ ಇನ್ನಿತರ ಸೌಲತ್ತು ಸಮರ್ಪಕವಾಗಿ ನೀಡುವತ್ತ ಗಮನ ಹರಿಸಬೇಕೆಂದು
ಅವರು ನಗರದಲ್ಲಿ ಪತ್ರಕರ್ತರಿಗಾಗಿ ಜಿಲ್ಲಾಡಳಿತ ನಿವೇಶನ ಹಂಚಿಕೆ ಮಾಡಲು ಸ್ಥಳ ಗುರುತಿಸುವಿಕೆ ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಪ್ರಾಸ್ತಾವಿಕವಾಗಿ ಕೆಯುಡ್ಬ್ಲೂಜೆ ಜಿಲ್ಲಾ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಕುಕನೂರು ಮಾತನಾಡಿ ಕಾರ್ಯನಿರತ ಪತ್ರಕರ್ತರ ಸಂಘದ ಯೋಜನೆ ಮತ್ತು ಬದ್ಧತೆ ಕುರಿತು ಮಾತನಾಡಿ ಪತ್ರಕರ್ತರ ಹಿತವನ್ನು ಸಂಘ ಕಾಪಾಡುತ್ತದೆ ಎಂದರು.
ಮಾಜಿ ಸಚಿವ ಎನ್.ಎಸ್.ಬೋಸರಾಜು, ವಿಶೇಷ ಸನ್ಮಾನ ಸ್ವೀಕರಿಸಿದ ಕರ್ನಾಟಕ ಮಾಹಿತಿ ಹಕ್ಕು ಆಯೋಗ ಕಲ್ಬುರ್ಗಿ ಪೀಠದ
ಆಯುಕ್ತ ಬಿ.ವೆಂಕಟಸಿಂಗ್, ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್ ಸೇರಿದಂತೆ ಅನೇಕರು ಮಾತನಾಡಿದರು.
ವಿಶೇಷ ಜೀವಮಾನ ಸಾಧನೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ನೆರವೇರಿತು. ವಿಶ್ವನಾಥ್ ಹೂಗಾರ್ ನಿರೂಪಿಸಿದರು. ಆರ್ ಆರ್ ಜಿ ಕಾರ್ಯದರ್ಶಿ ವೆಂಕಟೇಶ ಹೂಗಾರ್ ಸ್ವಾಗತಿಸಿದರು. ಪ್ರತಿಭಾ ಗೋನಾಳ್ ನಾಡಗೀತೆ ಹಾಗೂ ಪ್ರಾರ್ಥನೆ ಪ್ರಸ್ತುತ ಪಡಿಸಿದರು.
ವೇದಿಕೆ ಮೇಲೆ ಮಾನ್ವಿ ಶಾಸಕ ಹಂಪಯ್ಯ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ, ಕೆಯುಡ್ಬ್ಲೂಜೆ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರೆ ಗೂಡು, ಕಲ್ಬುರ್ಗಿ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಮಹರ್ಷಿ ವಾಲ್ಮೀಕಿ ವಿವಿ ಸಿಂಡಿಕೇಟ್ ಸದಸ್ಯ ಚೆನ್ನಬಸವ,
ರಾಜ್ಯ ಸಮಿತಿ ಸದಸ್ಯರಾದ ಅರವಿಂದ್ ಕುಲಕರ್ಣಿ, ಬಸವರಾಜ ನಾಗಡದಿನ್ನಿ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಸುರೇಶ ಸೇರಿದಂತೆ ಪ್ರಶಸ್ತಿ ಪುರಸ್ಕೃತರು ಇದ್ದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಭಾಗವಹಿಸಿದ್ದರು. ಶಶಾಂಕ್ ಅಂಗಡಿಯವರು ರಚಿಸಿದ ರಂಗೋಲಿ ಕಲಾಕೃತಿಯಲ್ಲಿ ಅರಳಿದ ಡಿವಿಜಿಯರ ಚಿತ್ರ ಮನಸೂರೆಗೊಂಡಿತು. ಮಂಜುನಾಥ್ ಸಾಲಿಯವರ ವ್ಯಂಗ್ಯಚಿತ್ರ ಸಂಗ್ರಹ ಸರ್ವರನ್ನು ಆಕರ್ಷಿಸಿತು.











Comments
Post a Comment