ಎಸ್ ಆರ್ ಪಿ ಎಸ್  ಪದವಿ ಪೂರ್ವ ಕಾಲೇಜಿನಲ್ಲಿ ಚೆಸ್ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಣೆ 


ಜಯ‌ಧ್ವಜ ನ್ಯೂಸ್  ,ರಾಯಚೂರು,ಜು.21- ನಗರದ ತಾರಾನಾಥ್ ಶಿಕ್ಷಣ ಸಂಸ್ಥೆಯ ಎಸ್ ಆರ್ ಪಿ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ರಾಯಚೂರು ನಗರದ ವಿವಿಧ ಶಾಲೆಗಳ 12 ವರ್ಷದೊಳಗಿನ, 14 ವರ್ಷದೊಳಗಿನ ಹಾಗೂ 16 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಚೆಸ್ ಪಂದ್ಯಾವಳಿ -2026 ಆಯೋಜಿಸಲಾಗಿತ್ತು.

12ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸ್ಪರ್ಧೆಯಲ್ಲಿ  ಎಸ್ ಆರ್ ಸುಖಾಣಿ ಸಿಬಿಎಸ್‌ಸಿ ಶಾಲೆಯ ವಿದ್ಯಾರ್ಥಿ ಕು.ರೋನಿತ್ ಪ್ರಥಮ ಸ್ಥಾನವನ್ನು ಪಡೆದರೆ, ಐಡಿಪಿಎಸ್ ಶಾಲೆಯ ವಿದ್ಯಾರ್ಥಿ ಕು. ಸಮ್ಯಕ್ ಜೈನ ದ್ವೀತಿಯ ಸ್ಥಾನ ಪಡೆದರೆ, ರೆಸ್ ಕಾನ್ಸೆಪ್ಟ್ ಶಾಲೆಯ ವಿದ್ಯಾರ್ಥಿ ಕು.ಅನಂತ ಜವಾರ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

14 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸ್ಪರ್ಧೆಯಲ್ಲಿ  ಐಡಿಪಿಎಸ್ ಶಾಲೆಯ ವಿದ್ಯಾರ್ಥಿ ಕು.ಹರ್ಷಿತ ಪ್ರಥಮ ಸ್ಥಾನವನ್ನು ಪಡೆದರೆ,  ರೆಸ್ ಚಾಣಾಕ್ಶ ಜಿಯೋ ನೆಕ್ಷ್ಟ  ಶಾಲೆಯ ವಿದ್ಯಾರ್ಥಿ ಕು. ಸಂಜಯ ಮೇಟಿ ದ್ವೀತಿಯ ಸ್ಥಾನ ಪಡೆದರೆ, ವಿದ್ಯಾಭಾರತಿ ಸಿಬಿಎಸ್‌ಸಿ  ಶಾಲೆಯ ವಿದ್ಯಾರ್ಥಿ ಕು.ಅಖಿಲೇಶ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

16 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಸ್ಪರ್ಧೆಯಲ್ಲಿ ಶಾರದಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ಕು.ಮಂಜುನಾಥ ಪ್ರಥಮ ಸ್ಥಾನವನ್ನು ಪಡೆದರೆ, ಎಸ್ ಆರ್ ಸುಖಾಣಿ ಸಿಬಿಎಸ್‌ಸಿ  ಶಾಲೆಯ ವಿದ್ಯಾರ್ಥಿ ಕು. ಕೆ.ಗೌತಮ ದ್ವಿತೀಯ ಸ್ಥಾನ ಪಡೆದರೆ, ಶಾರದಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ಕು.ಪ್ರಣವ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಈ ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಟ್ರೋಫಿ, ಮೆಡಲ್ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಎಸ್ ಆರ್ ಪಿ ಎಸ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಚೇರಮನ್‌ರಾದ ಶ್ರೀರಾಮ ಬೂಬ, ಸದಸ್ಯರಾದ ವಿಷ್ಣು ಚೌಧರಿ, ಪ್ರಾಚಾರ್ಯರಾದ ಡಾ.ವಿರೇಶ ಸೆರೆಗಾರ, ಉಪ -ಪ್ರಾಂಶುಪಾಲರಾದ ಶ್ರೀಮತಿ ಕವಿತಾ, ದೈಹಿಕ ಶಿಕ್ಷಣ ನಿರ್ದೇಶಕರಾದ ಮಲ್ಲೇಶ್ ನಾಯಕ ಮತ್ತು ಸಂಯೋಜಕರಾದ ಯಾಸ್ಮೀನ್ ಪಟೇಲ್ ಇವರುಗಳು ಉಪಸ್ಥಿತರಿದ್ದರು.

ಈ ಪಂದ್ಯಾವಳಿಯ ಮುಖ್ಯ ತೀರ್ಪುಗಾರರಾಗಿ ಎಫ್ ಎ ಓಂಕಾರ ಎಸ್ ದಂಡೋತಿ, ತೀರ್ಪುಗಾರರಾಗಿ ಹನುಮಂತ ಯಾದವ ಮತ್ತು ಶರತ್ ಕುಮಾರ ಇವರುಗಳು ಉಪಸ್ಥಿತರಿದ್ದರು.

ಈ ಪಂದ್ಯಾವಳಿಯಲ್ಲಿ ವಿವಿಧ ಶಾಲೆಗಳ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪಾಲಕರು  ಶಿಕ್ಷಕರು ಹಾಗೂ ಎಸ್ ಆರ್ ಪಿ ಎಸ್ ಪದವಿ ಪೂರ್ವ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.


Comments

Popular posts from this blog