ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೋರಾಟಗಾರರ ಪ್ರಶ್ನೆ

ಜಯ ಧ್ವಜ ನ್ಯೂಸ್ ,ರಾಯಚೂರು,ಸೆ.1- ಜಿಲ್ಲೆಗೆ ಮಂತ್ರಿ ಮತ್ತು ಉಸ್ತುವಾರಿ ವಂಚಿತರಾಗಿರುವುದನ್ನು ಖಂಡಿಸಿ, ಸ್ವಾತಂತ್ರೋತ್ಸವದ ದಿನದಂದು   ಖಂಡಿಸಿ, ಗೋ - ಬ್ಯಾಕ್ ಘೋಷಣೆ ಯೊಂದಿಗೆ ಪ್ರತಿಭಟಿಸಿದಾಗ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹೋರಾಟಗಾರರನ್ನು ಬಂಧಿಸಿ  ಹೋರಾಟವನ್ನು ಹತ್ತಿಕ್ಕಿರುವುದನ್ನು ಖಂಡಿಸಿ  ಮನವಿ ಪತ್ರ ಸಲ್ಲಿಸಲಾಯಿತು.

ಡಾ.ಅಜಯ್ ಸಿಂಗ್ ರವರ ಸಚಿವ ಸ್ಥಾನಕ್ಕೆ ಯಾವುದೇ ವಿರೋಧ ಇಲ್ಲ.  ಆದರೆ ಡಿಕೆ ಶಿವಕುಮಾರ್ ಅವರ ಘನ ಸರಕಾರದಲ್ಲಿ ಜಿಲ್ಲೆಯ ತಮ್ಮ ಕಾಂಗ್ರೆಸ್ ಪಕ್ಷದ ನಾಲ್ಕು ಚುನಾಯಿತ ಜನಪ್ರತಿನಿಧಿಗಳು, ನಾಲ್ಕು ವಿಧಾನ ಪರಿಷತ್ ಸದಸ್ಯರು ಹೊಂದಿದ್ದರು, ನಮ್ಮ ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವದು ಅತ್ಯಂತ ಖೇದಕರ ಸಂಗತಿಯಾಗಿದೆ. ಡಿ ಕೆ ಶಿವಕುಮಾರವರ  ಮುಖ್ಯಮಂತ್ರಿಗಳಾದ ನಂತರ ಕೇವಲ ಎರಡು ತಿಂಗಳ ಒಳಗಾಗಿ ಜಿಲ್ಲೆಯ ಮಾನವಿ, ದೇವದುರ್ಗ ಮತ್ತು ಲಿಂಗಸೂಗರ ಈ ಮೂರು ತಾಲೂಕಿನ ಹಳ್ಳಿಗಳಲಿ, ದಲಿತರ ಬಿಬಿತ್ಸ, ಅಮಾನುಷ ಕೊಲೆಗೀಡಾದ, ನಾಡಿನ ಮುಖ್ಯ ಮಂತ್ರಿಗಳು, ಗ್ರಹ ಮಂತ್ರಿಗಳು ಹಾಗೂ ತಾವು (ಉಸ್ತುವಾರಿ) ಜಿಲ್ಲೆಗೆ ಭೇಟಿ ನೀಡಲಿಲ್ಲ. ಕೆಲ ಅಧಿಕಾರಿಗಳಿಂದ ತಿಳಿದು ಬಂದದು ಏನೆಂದರೆ, ವಿಧಾನ ಸಭೆಯು ಸದನ ಇರುವದರಿಂದ ಸದ್ಯ ಬರಲ್ಲ ಎಂಬ ವಿಚಾರ ವ್ಯಕ್ತವಾಯಿತು. ಆದರೆ ಹೋರಾಟಗಾರರ ಪ್ರಶ್ನೆ ನೇರವಾಗಿ ತಮ್ಮ ಸರ್ಕಾರಕ್ಕೆ?? ತಮ್ಮ ಬಂಧು - ಬಳಗ, ವಿಶೇಷ ವ್ಯಕ್ತಿಗಳ ಮದುವೆ, ಮುಂಜಾವಿ, ಸಾವುಗಳು ಆಗಿದ್ದಾಗ, ಆಗ ಮಂತ್ರಿ -  ಮಾಗದರು ಸದನ ಬಿಟ್ಟು ಹೋಗಿರುವ ಸಾಕಷ್ಟು ನಿರ್ದರ್ಶನಗಳಿವೆ. ಇದಕ್ಕೆ ತಮ್ಮ ಹಾಗೂ ತಮ್ಮ ಸರ್ಕಾರದ ಉತ್ತರ ಏನು??.

 ಪದವೀಧರೆ ಕುಮಾರಿ ಅಶ್ವಿನಿಯ ಸಾಮೂಹಿಕ ಅತ್ಯಾಚಾರಲ್ಲದೆ, ದಹಿಕವಾಗಿ ಚಿತ್ರಹಿಂಸೆ ನೀಡಿ ಭೀಕರ ಕೊಲೆಯಾಗಿ ಬಾವಿಗೆ ಎಸೆದ ರಾಕ್ಷಸ ಸಂಸ್ಕೃತಿಗೆ ನಿಮ್ಮ ಜವಾಬ ಏನು?. ರಾಣೆಮ್ಮನವರ ಅತ್ಯಾಚಾರ ಕೊಲೆ, ಭೂಮಾನಂದನ  ಭೀಕರ ಕೊಲೆ, ಇವರೆಲ್ಲರೂ ದಲಿತರು. ಇದಕ್ಕೆ ಸರ್ಕಾರದ ಉತ್ತರವೇನು ?. ಇವರೆಲ್ಲರ ಜೀವಗಳಿಗೆ ಬೆಲೆ ಇಲ್ಲವೇ ??.

 ದಲಿತರ ರಕ್ಷಣೆ ಇಲ್ಲದ ರಾಯಚೂರು ಜಿಲ್ಲೆಯನ್ನು ದಲಿತರ ದೌರ್ಜನ್ಯಕ್ಕೆ ತುತ್ತಾದ ಜಿಲ್ಲೆ ಎಂದು ಘೋಷಿಸಿ. 

 ಜಿಲ್ಲೆಯ ಮೂರು ತಾಲೂಕಿನಲ್ಲಿ ಭೀಕರ ಕೊಲೆಯಾಗಿ ಹದಿನೈದು ಇಪ್ಪತ್ತು ದಿನಗಳ ಗತಿಸಿದ ನಂತರ ಅವರ ಕುಟುಂಬಗಳ ಭೇಟಿಗೆ (ಸ್ವಾಂತನ) ಬಹಳ ತಡವಾಗಿ ಬಂದಿದ್ದಕ್ಕೆ ನಿಮಗೂ ಧಿಕ್ಕರಿಸಿದರು.

ಸ್ವಾತಂತ್ರ್ಯೋತ್ಸವ ಧ್ವಜಾರೋಹಣಕ್ಕೆ ತಾವು ಬಂದಾಗ, ನಾಲ್ಕು ವರ್ಷ ಕಳೆದು 5ನೇ ವರ್ಷದ ಮೂನ್ನುಗುತ್ತಿರುವ ಏಮ್ಸ ಹೋರಾಟದ ವೇದಿಕೆ ಬಂದು ತಾವುಗಳು, ಶೀಘ್ರದಲ್ಲೇ ದೆಹಲಿಗೆ ನಿಯೋಗ ಕರೆದುಕೊಂಡು ಹೋಗುತ್ತೇನೆಂದು ತಿಳಿಸಿದ್ದೀರಿ. ತಾವು ಮತ್ತೆ ತಮ್ಮ ಸರಕಾರದ ನೇತೃತ್ವದಲ್ಲಿ ದೆಹಲಿಗೆ ಯಾವಾಗ ತೆಗೆದುಕೊಂಡು ಹೋಗುತ್ತೀರಿ?. ಶೀಘ್ರದಲ್ಲೇ ವ್ಯವಸ್ಥೆ ಮಾಡಿ ಇದಕ್ಕೆ ತಮ್ಮ ಉತ್ತರವೇನು??. ರಾಯಚೂರು ಜಿಲ್ಲೆಯಲ್ಲಿ, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಜಿಲ್ಲಾಧಿಕಾರಿಗಳು. ಪರಿಶಿಷ್ಟ ಪಂಗಡದ ಪ್ರಭಾರಿ ಜಿಲ್ಲಾಧಿಕಾರಿಗಳು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರಿ ಅಧಿಕಾರಿಗಳು. ಒಕ್ಕಲತನ ಹುಟ್ಟುವಳಿ ಮಾರುಕಟ್ಟೆಯಲ್ಲಿ ಪ್ರಭಾರಿ ಅಧಿಕಾರಿಗಳು. ಹೀಗೆ ಪಟ್ಟಿ ಮಾಡುತ್ತ ಹೋದರೆ, ಇನ್ನೂ ಹಲವಾರು ಇಲಾಖೆಗಳು ಸಿಗುತ್ತವೆ. ಹೀಗಿದ್ದರೆ ರಾಯಚೂರು ಜಿಲ್ಲೆ ಅಭಿವೃದ್ಧಿ ಆಗುವದೆ ?. ಇದಕ್ಕೆ ತಮ್ಮ ಉತ್ತರವೇನು ??.

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಗುಂಪುಗಾರಿ ಸಹಜ. ರಾಯಚೂರು ಜಿಲ್ಲೆಯಲ್ಲಿಯೂ ಗುಂಪುಗಾರಿಕೆ ನೆಪವೊಡ್ಡಿ ಜಿಲ್ಲೆಗೆ ಮಂತ್ರಿ ಹಾಗೂ ಉಸ್ತುವಾರಿ ವಂಚಿತವಾಗಿದ್ದೆ, ಎನ್ನುವದು ಸಾರ್ವಜನಿಕರ ಅಭಿಪ್ರಾಯ. ಜಿಲ್ಲೆಗೆ ಮಂತ್ರಿ ಸ್ಥಾನ ಹಾಗೂ ಉಸ್ತುವಾರಿ ಸಿಗುವರೆಗೂ ಸಂಘ-ಸಂಸ್ಥೆಗಳ ಪ್ರತಿಭಟನೆ ನಿರಂತರವಾಗಿ ಮುಂದುವರಿಯಲಿದೆ.

 ಈ ಪ್ರಶ್ನೆ ಪತ್ರವನ್ನು ಸನ್ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ರಾಯಚೂರು ಜಿಲ್ಲೆಗೆ ಮಂತ್ರಿ ಸ್ಥಾನ ಹಾಗೂ ಉಸ್ತುವಾರಿ ನೀಡಲು, ಸಾರ್ವಜನಿಕರು ಮತ್ತು ಹೋರಾಟಗಾರರ ಉಗ್ರವಾದ ಒತ್ತಾಯ ಇದೆ. ಎಂದು ಈ ಪ್ರಶ್ನೆ ಪತ್ರವು ನಾಡಿನ ಮುಖ್ಯಮಂತ್ರಿ ಗಳಿಗೆ ತೋರಿಸಲು, ಚರ್ಚಿಸಲು ನಿಮಗೆ ಒತ್ತಾಯಿಸುತ್ತಿದ್ದೇವೆ. ನಿವೇನಂತಿರಿ ??. ನಮ್ಮ ಸಲಹೆ ತಮಗೆ ಏನೆಂದರೆ, ತಾವುಗಳು ಮುಖ್ಯಮಂತ್ರಿಗಳಿಗೆ ತಿಳಿಸಲು, ನಾವು ತಮಗೆ ಒತ್ತಾಯಿಸುವದೇನೆಂದರೆ? ದಯವಿಟ್ಟು ನನಗೆ ರಾಯಚೂರು ಜಿಲ್ಲೆ ಬಿಟ್ಟು ಬೇರೆ ಜಿಲ್ಲೆ ಉಸ್ತುವಾರಿ ನೀಡಿ. ಜನ ವಿರೋಧಿ ನಡುವೆ ನನಗೆ ಕೆಲಸ ಮಾಡಲು ಆಗುವುದಿಲ್ಲವೆಂದು ತಿಳಿಸುವದಲ್ಲದೆ, ರಾಯಚೂರು ಜಿಲ್ಲೆಗೆ ಮಂತ್ರಿ -ಉಸ್ತುವಾರಿ ನೀಡದಿರದು, ಖಂಡಿತ ಅನ್ಯಾಯವಾಗಿದೆ ಎಂದು, ತಾವುಗಳು ಧೈರ್ಯ ಮಾಡಿ ಮುಖ್ಯಮಂತ್ರಿಗಳಿಗೆ ಗಮನ ತನ್ನಿ ಇದಕ್ಕೆ ತಮ್ಮ ಉತ್ತರವೇನು ಎಂಬ ಪ್ರಶ್ನೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಅಶೋಕ್ ಕುಮಾರ್ ಸಿ ಕೆ ಜೈನ್ ರಾಯಚೂರು ಜಿಲ್ಲಾ ಅಧ್ಯಕ್ಷರು ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ.ಶಿವರಾಮೇಗೌಡ ಕರ್ನಾಟಕ ರಕ್ಷಣಾ ವೇದಿಕೆ, ಎಸ್ ಮಾರೆಪ್ಪ ವಕೀಲರು,ಅಧ್ಯಕ್ಷರು,ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗತಿಪರ ಒಕ್ಕೂಟ.ರವೀಂದ್ರನಾಥ ಪಟ್ಟಿ - ದಲಿತ ಮುಖಂಡರು, ಎಂ ಆರ್ ಭೇರಿ, ಹೇಮರಾಜ್ ಅಸ್ಕಿಹಾಳ - ರಾಜ್ಯ ದಲಿತ ಮುಖಂಡರು, ಜೈ ಭೀಮ್ ವಲ್ಲಭ - ಬಹುಜನ ಪಕ್ಷ ಜಿಲ್ಲಾಧ್ಯಕ್ಷರು, ಅಮರೇಗೌಡ ಪಾಟೀಲ - ಅಧ್ಯಕ್ಷರು ನಾಗರಿಕ ವೇದಿಕೆ, ವಸಂತ ಅಸ್ಕಿಹಾಳ, ಅಂಜಿನಯ್ಯ, ದೂಳಯ್ಯ, ಜಗನ್, ಲಕ್ಷ್ಮಣ್, ಜಾರ್ಜ್, ಯೇಸು, ಉರಕುಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments

Popular posts from this blog