ವಿಜಯಾನಂದ ಟ್ರಾವೆಲ್ಸ್ ಹೊಸ ದಾಖಲೆ; ಒಂದೇ ಬಾರಿ 150 ವೋಲ್ವೋ ಬಸ್ ಖರೀದಿ:

ಪ್ರೀಮಿಯಂ ಬಸ್ ಪ್ರಯಾಣ ಪ್ಯಾನ್-ಇಂಡಿಯಾ ಮಟ್ಟಕ್ಕೆ ಹೆಚ್ಚಿಸುವ ಗುರಿ- ಆನಂದ ಸಂಕೇಶ್ವರ .                                                               ಜಯ ಧ್ವಜ ನ್ಯೂಸ್ ,ರಾಯಚೂರು, ಸೆ.5 - ಸಾರಿಗೆ ಕ್ಷೇತ್ರದಲ್ಲಿ ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. (ವಿಟಿಪಿಎಲ್) ಹೊಸ ದಾಖಲೆ ಬರೆದಿದೆ. ವೋಲ್ವೋ ಇಂಡಿಯಾ ಸಂಸ್ಥೆ ಮೂಲಕ ಸಿಂಗಲ್ ಆರ್ಡರ್‌ನಲ್ಲಿ 150 ವೋಲ್ವೋ ಬಸ್‌ಗಳನ್ನು ಖರೀದಿಸಿದೆ. ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ.ಗೆ  150 ವೋಲ್ವೋ-9600 ಐಷಾರಾಮಿ ಸ್ಲೀಪರ್ ಕೋಚ್ ಗೋಲ್ಡ್ ಕ್ಲಾಸ್ ಬಸ್‌ಗಳನ್ನು ಹಸ್ತಾಂತರಿಸಿತು. ಈ ಒಪ್ಪಂದವು ಖಾಸಗಿ ಟ್ರಾವೆಲ್ಸ್‌ವೊಂದು ವೋಲ್ವೋ ಬಸ್‌ಗೆ ನೀಡಿದ ಅತಿದೊಡ್ಡ ಆರ್ಡರ್ ಆಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಂಗಳೂರು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ವೋಲ್ವೋ ಸಂಸ್ಥೆಯ ಎಂಡಿ ಮತ್ತು ಸಿಇಒ ಬಿ. ಶ್ರೀನಿವಾಸ್ ಅವರು ವಿಆರ್‌ಎಲ್ ಮೀಡಿಯಾ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಹಾಗೂ ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವಾ ಸಂಕೇಶ್ವರ ಅವರಿಗೆ ಕೀ ಹಸ್ತಾಂತರಿಸುವ ಮೂಲಕ ಬಸ್‌ಗಳನ್ನು ನೀಡಿದರು. ವೋಲ್ವೋ ಸಂಸ್ಥೆಯ ವಿಇ ವಾಣಿಜ್ಯ ವಾಹನಗಳು ವಿಭಾಗದ ಮುಖ್ಯ ವಾಣಿಜ್ಯ ಅಧಿಕಾರಿ ಎಸ್.ಎಸ್. ಗಿಲ್ ಮತ್ತು ವಿಇ ವಾಣಿಜ್ಯ ವಾಹಗಳ ಇವಿಪಿ ಬಸ್ ವಿಭಾಗದ ಸುರೇಶ್ ಚೆಟ್ಟಿಯಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಈ ವೇಳೆ ಮಾತನಾಡಿದ ಆನಂದ ಸಂಕೇಶ್ವರ, 1996ರಲ್ಲಿ ವಿಜಯಾನಂದ ಟ್ರಾವೆಲ್ಸ್ ಆರಂಭವಾಯಿತು. 2007ರಿಂದ ವೋಲ್ವೋ ಕಂಪನಿ ಜತೆ ನಮ್ಮ ಒಪ್ಪಂದವಿದೆ. ಮೊದಲು 20 ಬಸ್‌ಗಳನ್ನು ಖರೀದಿ ಮಾಡಲಾಗಿತ್ತು. 2012ರ ವೇಳೆ 100 ಬಸ್‌ಗಳನ್ನು ಆರ್ಡರ್ ಮಾಡಿದ್ದೇವು. ಈಗ 150 ಬಸ್‌ಗಳನ್ನು ಆರ್ಡರ್ ಮಾಡಿದ್ದೇವೆ. ರಾಜ್ಯ ಮತ್ತು ದೇಶಾದ್ಯಂತ ನಮ್ಮ ನೆಟ್‌ವರ್ಕ್ ಇರುವುದರಿಂದ ಪ್ರಯಾಣಿಕರಿಗೆ ಅತಿ ಉತ್ತಮವಾದುದನ್ನು ನೀಡಲು ಬಯಸುತ್ತೇವೆ ಎಂದರು.

ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರು ಬಸ್ ಬುಕ್ ಮಾಡುವ ವೇಳೆಯೇ ಶೌಚಾಲಯದ ವ್ಯವಸ್ಥೆ ಇದೆಯೇ ಎಂಬುದನ್ನು ಕೇಳಿ ಬುಕ್ ಮಾಡುತ್ತಿದ್ದಾರೆ. ಶೌಚಾಲಯದ ವ್ಯವಸ್ಥೆ ಇರುವುದರಿಂದ ಪ್ರಯಾಣ ಅವಧಿ ಕೂಡ ಕಡಿಮೆಯಾಗಲಿದೆ. ಶೌಚಕ್ಕಾಗಿ ಒಂದೆಡೆ ಬಸ್ ನಿಲ್ಲಿಸಿದರೆ ಅರ್ಧ ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಈ ಸಮಯ ಉಳಿಯುವುದರಿಂದ ನಿಗದಿತ ಸಮಯಕ್ಕಿಂತ ಮೊದಲೇ ನಿಗದಿತ ಸ್ಥಳವನ್ನು ತಲುಲಿದರೆ, ಪ್ರಯಾಣಿಕರ ಪ್ರಯಾಣದ ಅವಧಿ ಕಡಿಮೆಯಾಗಿ ಬೇಗ ಸ್ಥಳವನ್ನು ತಲುಪಲಿದ್ದಾರೆ ಎಂದರು.

ಅನುಮಾನವೇ ಬೇಡ, ವೋಲ್ವೋ ನೆಕ್ಟ್ ಲೆವೆಲ್: ಶಿವಾ ಸಂಕೇಶ್ವರ-

ಎಲ್ಲ ಬಸ್‌ಗಳನ್ನು ಒಂದು ಕಡೆ ನಿಲ್ಲಸಿದರೆ, ವೋಲ್ವೋ ಮತ್ತೊಂದು ಕಡೆ ನಿಲ್ಲಲ್ಲಿದೆ. ವೋಲ್ವೋಗೆ ತನ್ನದೇ ವಿಶೇಷತೆ ಮತ್ತು ಆಕರ್ಷಕ ಹೊರನೋಟವಿದೆ. ಆದ್ದರಿಂದಲೇ ಹೇಳುತ್ತಿದ್ದೇನೆ, ಅನುಮಾನವೇ ಬೇಡ, ವೋಲ್ವೋ ನೆಕ್ಟ್ ಲೆವೆಲ್‌ಗೆ ಇದೆ. ಈ ಮೊದಲು ಸ್ವೀಡನ್‌ನಲ್ಲಿ ಉತ್ಪಾದನೆ ಮಾಡಲಾಗುತ್ತಿತ್ತು. ಈಗ ಹೊಸಕೋಟೆ ಘಟಕದಲ್ಲಿಯೇ ಎಲ್ಲ ಬಸ್‌ಗಳನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂದು ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ತಿಳಿಸಿದರು.

ಸುರಕ್ಷತೆ, ವಿಶ್ವಾಸಾರ್ಹತೆಯ ಪಾಲುದಾರಿಕೆ: ಶ್ರೀನಿವಾಸ್

ಈ ಹೂಡಿಕೆಯು ತಂತ್ರಜ್ಞಾನ, ಸುರಕ್ಷತಾ ಇಂಜಿನಿಯರಿಂಗ್ ಮತ್ತು ಸೇವಾ ಪರಿಸರ ವ್ಯವಸ್ಥೆಯಲ್ಲಿ ನಿರಂತರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ವೋಲ್ವೋ ಸಂಸ್ಥೆಯ ಎಂಡಿ ಮತ್ತು ಸಿಇಒ ಬಿ. ಶ್ರೀನಿವಾಸ್ ತಿಳಿಸಿದರು.

ಭಾರತದಲ್ಲಿ ವೋಲ್ವೋ ಬಸ್‌ಗಳ ಅತ್ಯಂತ ಮೌಲ್ಯಯುತ ಮತ್ತು ದೀರ್ಘಕಾಲೀನ ಖಾಸಗಿ ಆಪರೇಟರ್ ಪಾಲುದಾರರಲ್ಲಿ ವಿಜಯಾನಂದ ಟ್ರಾವೆಲ್ಸ್ ಒಂದಾಗಿದೆ. ಈ ಹೆಗ್ಗುರುತು ಆದೇಶವು ದಶಕಗಳಿಂದ ನಿರ್ಮಿಸಲಾದ ನಂಬಿಕೆಗೆ ಪ್ರಬಲ ಸಾಕ್ಷಿಯಾಗಿದೆ. ಪ್ರಯಾಣಿಕರ ಸುರಕ್ಷತೆ, ಸೌಕರ್ಯ ಮತ್ತು ವಿಶ್ವಾಸಾರ್ಹತೆಗೆ ಅತ್ಯುನ್ನತ ಮಾನದಂಡವನ್ನು ನಿಗದಿಪಡಿಸುವ ನಿರ್ವಾಹಕರಿಗೆ ಆದ್ಯತೆಯ ವೇದಿಕೆಯಾಗಲು ನಾವು ಅಪಾರ ಹೆಮ್ಮೆಪಡುತ್ತೇವೆ ಎಂದರು.

ವಿಮಾನ ಮಾದರಿ ಶೌಚಾಲಯ ವ್ಯವಸ್ಥೆ:ಸಾಮಾನ್ಯವಾಗಿ ದೂರದ ಪ್ರಯಾಣದ ವೇಳೆ ಅಗತ್ಯವಾಗಿ ಬೇಕಾಗಿರುವುದು ಶೌಚಾಲಯ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳು ಪ್ರಯಾಣಕ್ಕೆ ಶೌಚಾಲಯವಿದ್ದರೆ ಆರಾಯಾಗಿ ಪ್ರಯಾಣ ಮಾಡಬಹುದು. ವೋಲ್ವೋ 9600 ಕೋಚ್‌ನಲ್ಲಿ ವಿಮಾನದಲ್ಲಿರುವಂತೆ ಶೌಚಾಲಯದ ವ್ಯವಸ್ಥೆ ಇದೆ. ಇದರಿಂದ ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದ ಕೋಚ್ ಆಗಿದೆ. ಶೌಚಕ್ಕೆ ಹೋದಾಗಲೂ ಬಸ್ ಕುಲುಕುವುದಿಲ್ಲ. ಮನೆಗಳಲ್ಲಿನ ಶೌಚಕ್ಕೆ ಹೋದಾಗ ಆಗುವ ಅನುಭವವೇ ಇಲ್ಲಿಯೂ ಆಗಲಿದೆ.

ಆರಾಮದಾಯಕ ಸೀಟುಗಳು:ನೂರಾರು ಕಿಮೀ ಪ್ರಯಾಣ ಮಾಡುವುದರಿಂದ ಸ್ಲೀಪರ್ ಕೋಚ್‌ಗಳಲ್ಲಿನ ಸೀಟುಗಳು ಬಹಳ ಮುಖ್ಯ ಪಾತ್ರ ವಹಿಸಲಿವೆ. ಮೃದುವಾದ ಸೀಟುಗಳನ್ನು ಅಳವಡಿಸಲಾಗಿದ್ದು, ಗ್ರಾಹಕರು ತಮ್ಮ ಮನೆಯಲ್ಲಿ ಮಲಗಿರುವ ಭಾವನೆ ಬರಲಿದೆ. ಸೀಟುಗಳು ವಿಶಾಲವಾಗಿದ್ದು, ಎಲ್ಲಿಯೂ ಕಿಷ್ಕಿಂಧೆ ಎನಿಸುವುದಿಲ್ಲ. ನೂರಾರು ಕಿಮೀ ದೂರ ಪ್ರಯಾಣಿಸಿದರೂ ಮೈಕೈ ನೋವು ಬಾರದಂತೆ ಆರಾಮದಾಯಕವಾಗಿರುವಂತೆ ಮಾಡಿರುವುದು ಪ್ರಯಾಣಿಕರ ಆಕರ್ಷಣೆಯಾಗಿದೆ.ಬಸ್ಸಿನಲ್ಲಿ ಅನೇಕ ವೈಶಿಷ್ಟ್ಯ ಹೊಂದಿದೆ ಪ್ರೀಮಿಯಂ ಪುಷ್‌ಬ್ಯಾಕ್ ಸೀಟುಗಳು, ಪ್ರತ್ಯೇಕ ಯುಎಸ್‌ಬಿ ಚಾರ್ಜಿಂಗ್ ,ಪ್ರತಿ  ಸೀಟಿಗೆ ಎಸಿ ಲೌವರ್‌ಗಳು, ರೀಡಿಂಗ್ ಲೈಟ್ಸ್ , ಆರಾಮದಾಯಕ ಲಗೇಜ್ ಕಂಪಾರ್ಟ್‌ಮೆಂಟ್‌ಗಳು , ಏರ್ ಸಸ್ಪೆನ್ಸನ್, ಎನ್ಬಿಎಸ್, ಇಬಿಎಸ್ ಮತ್ತು ಎಲೆಕ್ಟ್ರಾನಿಕ್ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಆಟೋಮೆಟೆಕ್ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ ಮುಂತಾದ ತಾಂತ್ರಿಕ ಸೌಲಭ್ಯದಿಂದ ಕೂಡಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Comments

Popular posts from this blog