ವೆಂಕಟೇಶ್ ಬೇವಿನಬೆಂಚಿಗೆ ಪಿತೃವಿಯೋಗ.                                                    ಜಯ ಧ್ವಜ ನ್ಯೂಸ್ ,ರಾಯಚೂರು,ಸೆ.7-

ತತ್ವಪದಕಾರರು ಅವಧೂತ ಪರಂಪರೆಯ ಬೇವಿನಬೆಂಚಿ ಗ್ರಾಾಮದ ನಿವಾಸಿ ತಿಪ್ಪಯ್ಯ(88) ಅವರು ಭಾನುವಾರ ಸಂಜೆ ನಿಧನರಾಗಿದ್ದಾರೆ.

ಮೃತರು ಪತ್ನಿ ಹಾಗೂ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾಗಿರುವ ವೆಂಕಟೇಶ ಬೇವಿನಬೆಂಚಿ ಸೇರಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧುಗಳ ಅಗಲಿದ್ದಾಾರೆ.

ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.ಮೃತ ತಿಪ್ಪಯ್ಯ ಅವರು ತತ್ವಪದಕಾರರಾಗಿದ್ದರಲ್ಲದೆ, ಆಧ್ಯಾತ್ಮಿಕ ಚಿಂತನೆಯುಳ್ಳವರಾಗಿದ್ದರಿಂದ ಮುಗಳಖೋಡದ ಯಲ್ಲಾಲಿಂಗ ಸ್ವಾಮಿಗಳವರ ಶಿಷ್ಯ ಪರಂಪರೆಯಲ್ಲಿ ಗುರುತಿಸಿಕೊಂಡವರಾಗಿದ್ದರು. 

ಮೃತರ ಅಂತ್ಯಕ್ರಿಯೆ ಸೆ.7ರಂದು ಸಂಜೆ 4ರ ಬಳಿಕ ಸ್ವಗ್ರಾಮ ರಾಯಚೂರು ತಾಲೂಕಿನ ಬೇವಿನಬೆಂಚಿ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ವರ್ಗ ಪ್ರಕಟಣೆಯಲ್ಲಿ ತಿಳಿಸಿದೆ.

Comments

Popular posts from this blog