ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಕೆ.ಶಾಂತಪ್ಪ ಅವರಿಗೆ ಕರ್ನಾಟಕ ಸಂಘದಿಂದ ಸನ್ಮಾನ

ಜಯ ಧ್ವಜ ನ್ಯೂಸ್  , ರಾಯಚೂರು ,ಸೆ.14- ಕರ್ನಾಟಕ ಸಂಘದ ಅಧ್ಯಕ್ಷರು, ಇತ್ತೀಚಿಗೆ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಶಾಂತಪ್ಪ ಇವರಿಗೆ ಕರ್ನಾಟಕ ಸಂಘದ ಪದಾಧಿಕಾರಿಗಳು ನಿನ್ನೆ ಸಂಜೆ ಅವರ ಮನೆಗೆ ತೆರಳಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.

 ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಕಾರ್ಯದರ್ಶಿಗಳಾದ ಮುರಳಿಧರ ಕುಲಕರ್ಣಿ ಅವರು ಮಾತನಾಡಿ " ಕೆ. ಶಾಂತಪ್ಪ ಅವರು ಹೆಸರಿಗೆ ತಕ್ಕಂತೆ ಶಾಂತವಾಗಿ ಎಲ್ಲಾ ಸಮಾಜದ ಬಂಧುಗಳೊಡನೆ ಬೆರೆತು  ಸೌಹಾರ್ದತವಾಗಿ ಸಮಾಜ ಸೇವೆ ಮಾಡುತ್ತಿರುವುದು ವಿಶೇಷವಾಗಿದೆ. ಇವರ ಕಾರ್ಯ ಕ್ಷಮತೆ, ದಕ್ಷತೆ, ಪ್ರಾಮಾಣಿಕತೆ, ಇವುಗಳನ್ನು ಪರಿಗಣಿಸಿ ಅಧಿಕಾರವೇ ಇವರ ಬಳಿ ಬಂದಿದೆ ಇವರು ಅಧಿಕಾರವನ್ನು ಎಂದು ಹುಡುಕಿಕೊಂಡು ಹೋದವರಲ್ಲ ಎಂದು ಹೇಳಿದರು. ಪ್ರಸ್ತುತ ಕರ್ನಾಟಕ ಸಂಘದ ಅಧ್ಯಕ್ಷರಾಗಿ  ಸಂಘದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿ ಒಂದು ಹೊಸ ರೂಪವನ್ನು ಕೊಡುತ್ತಿರುವುದು ಇವರ ಕಾರ್ಯ ವೈಖರಿಯನ್ನು ತೋರಿಸುತ್ತದೆ ಎಂದು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಪದಾಧಿಕಾರಿಗಳಾದ ಕಾರ್ಯದರ್ಶಿ ಶ್ರೀನಿವಾಸ ಗಟ್ಟು, ಖಜಾಂಚಿ ಹನುಮಂತಪ್ಪ, ಹಿರಿಯ ಸದಸ್ಯರಾದ ಮಲ್ಲನಗೌಡ ಇಂದ ಪುರ್,  ಬಾಬು ಬಂಡಾರಿಗಲ್, ವೀರ ಹನುಮಾನ್ ಹಾಗೂ ಪಲಗುಲನಾಗರಾಜ ಅವರು ಉಪಸ್ಥಿತರಿದ್ದರು.

Comments

Popular posts from this blog