ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಜನ್ಮದಿನ ಆಚರಣೆ: ಅಭಿಮಾನಿಗಳಿಂದ ವಿಷ್ಣುವರ್ಧನ್ ರವರ ಚಿತ್ರಗೀತೆಗಳ ಅರ್ಪಣೆ. ಜಯ ಧ್ವಜ ನ್ಯೂಸ್, ರಾಯಚೂರು, ಸೆ.18- ನಗರದ ಜವಾಹರ ನಗರ ಬಡಾವಣೆಯ ಶ್ರೀಗೋಪಾಲ್ ಆಚಾರ್ ಮಠದ್ ರವರ ಮನೆಯಲ್ಲಿ ಕರ್ನಾಟಕ ರತ್ನ ಸಾಹಸ ಸಿಂಹ ದಿ. ಡಾ. ವಿಷ್ಣುವರ್ಧನ್ ರವರ 76ನೇ ಜನ್ಮದಿನವನ್ನು ವಿಷ್ಣುವರ್ಧನ್ ಬಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಎಲ್ಲಾ ಅತಿಥಿಗಳು ಪುಷ್ಪ ನಮನ ಸಲ್ಲಿಸಿ ಕೇಕ್ ಕತ್ತರಿಸುವುದರ ಮುಖಾಂತರ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಯಚೂರಿನ ಜೂನಿಯರ್ ವಿಷ್ಣುವರ್ಧನ್ ನಾರಾಯಣ ರಾವ್ ದೇಸಾಯಿ,ವಿಜಯ್ ಕುಮಾರ್ ದಿನ್ನಿ,ಗುರುರಾಜ ಕುಲಕರ್ಣಿ, ರವೀಂದ್ರ ಕುಲಕರ್ಣಿ, ಗುರಮಿಟಕಲ್ ರಮೇಶ್,ರಮಾಕಾಂತ್ ,ಕೋಲಾರ ವೆಂಕಟೇಶ್, ಜಯಕುಮಾರ್ ದೇಸಾಯಿ ಕಾಡ್ಲೂರು, ವಿನೋದ್ ಸಗರ, ಸೇತುಮಾದವ ಕೆರೂರ್, ವೆಂಕಟೇಶ್ ಡಿ.,ಗೋವರ್ಧನ ಕವಿತಾಳ, ಪ್ರಸನ್ನ ಕೀಲಿ, ಕುಮಾರಿ ಸಂಗೀತ ,ವೀರುಪಾಕ್ಷಿ ಮುಂತಾದವರು ವಿಷ್ಣುವರ್ಧನ್ ರವರ ಹಾಡುಗಳನ್ನು ಹಾಡಿ ಮನರಂಜಿಸಿದರು .
ಈ ಸಂದರ್ಭದಲ್ಲಿ ಅತಿಥಿಯಾಗಿ ವೇ.ಮೂ. ಕೋರ್ತಕುಂದ ಸುರೇಂದ್ರ ಆಚಾರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಈ.ಶಶಿರಾಜ್,ಗೋಪಾಲ ಆಚಾರ ಮಠದ್, ರಾಘವೇಂದ್ರ ಆಚಾರ್ ಮಠದ್, ಬಿಜೆಪಿ ಮುಖಂಡರಾದ ಪಿ.ಪ್ರಕಾಶ್ ವಕೀಲರು, ನರಸಿಂಹ, ಸುರೇಶ್ ಪಾಟೀಲ್, ಆರ್ ಡಿ ಎ ಕಾನೂನು ಸಲಹೆಗಾರರಾದ ಕೆ.ಸಿ.ವೀರೇಶ ವಕೀಲರು, ಭೂ ನ್ಯಾಯಮಂಡಳಿ ಸದಸ್ಯರಾದ ಕಲ್ಮಲಾ ಪ್ರಹಲ್ಲಾದ್ ರಾವ್ ವಕೀಲರು, ಹಿಂಗೋಲಿ ಶ್ರೀನಿವಾಸ, ಸಂಗಮೇಶ,ನರಸಿಂಹಲು, ಭಂಡಾರಿ ವಿಜಯ್ ಕುಮಾರ್,ನರಸಿಂಹ ಜೋಶಿ, ನಟರಾಜ್ ಕೇಣದ್,ಲಕ್ಷ್ಮೀಕಾಂತ್ ಬಾಗಲವಾಡ್,ವೆಂಕಟೇಶ್ ಕುರ್ಡಿಕರ್,ಗುರುರಾಜ ರಾವ್ ಹಾಗೂ ಇನ್ನಿತರ ವಿಷ್ಣು ಅಭಿಮಾನಿಗಳು ಉಪಸ್ಥಿತರಿದ್ದರು.


Comments
Post a Comment