ಕೋಳಂಕಿ ಜೀವೈಕ್ಯ ಗುರುಪಾದೇಶ್ವರ ಸದ್ಭಾವನಾ ಪಾದಯಾತ್ರೆಗೆ ಚಾಲನೆ:                                      ಭಕ್ತಿ ಭಾವದಿಂದ ನಡೆದುಕೊಂಡರೆ ದೇವರನ್ನುಕಾಣಬಹುದು -  ಕೆ.ಶಿವನಗೌಡ ನಾಯಕ .                                                                     ಜಯಧ್ವಜ ನ್ಯೂಸ್  ,ರಾಯಚೂರು, ಸೆ.೨೦-   ಇಂದಿನ ಯುಗದಲ್ಲಿ ಸಮಾಜದಲ್ಲಿ ಭಕ್ತಿ ಭಾವಗಳಿಂದ ದೇವರನ್ನು ಕಾಣಬಹುದೆಂದು ಮಾಜಿ ಸಚಿವರಾದ ಕೆ. ಶಿವನಗೌಡ ನಾಯಕ ಹೇಳಿದರು. ಅವರಿಂದು  ಕಿಲ್ಲೆ ಬ್ರಹನ್ಮಠದಲ್ಲಿ ೧೦೮ ಸಾವಿರ ದೇವರ ಜೀವೈಕ್ಯ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳ ೯೭೫ ವರ್ಷದ ಜಯಂತಿಯ ಪರ್ವ ಸಮಾರಾದನೆ ಮತ್ತು೨೦ ನೇ ವರ್ಷದ ಸದ್ಪಾಭಾವನಾ ಪಾದಯಾತ್ರೆ ಉದ್ಘಾಟಿಸಿ ಮಾತನಾಡಿದರು.     ದೈವಾಚರಣೆಯಿಂದೆ ಸಮೃದ್ಧಿ ಎಂದರು.ಪಾದ ಯಾತ್ರೆ ಮೂಲಕ ದರ್ಮ ಸಂದೇಶಗಳನ್ನು  ಪ್ರಸಾರ ಮಾಡುವದರ ಜತಗೆ ಮಠಗಳಿಂದ ಸದ್ಬಾವನ ಪಾದಯಾತ್ರೆ ಮೂಲಕ  ಶಾಂತಿ ಯನ್ನು ಕಾಪಾಡುವ ಸಲುವಾಗಿ ಪಾದಯಾತ್ರೆ ಮೆರುಗು ತಂದಿದೆ ಎಂದರು.ಸಾಮಾಜಿಕ ಕಾರ್ಯ ಗ ಳನ್ನು ಒಳಗೊಂಡಿದೆ.ಸರ್ಕಾರ ಮಾಡದ ಕೆಲಸಗಳು.ಶರಣರು ಸಂತರು ಮಾಡಿ ತೋರಿಸುವದು ಕಂಡುಬರುತ್ತದೆ ಎಂದರು. ಪ್ರಾಣಿಗಳ ಸಂರಕ್ಷಣೆ ಅದ್ಯ ಕರ್ತವ್ಯ ವಾಗಿದೆ ಎಂದರು.  ರೋಬೋಟ್ ಅನೆಗಳನ್ನು ಮಠಗಳು ಅಳವಡಿಸಿಕೊಂಡಿದ್ದು ಒಳ್ಳೆಯ ಕೆಲಸ ಹಾಗೂ ಶ್ಲಾಘನೀಯ ಎಂದರು.ಪ್ರಾಣಿಗಳನ್ನು ಹಿಂಸೆಯ ಮಾಡಬಾರದೆಂದು ಭಾವಿಸಿ ಜನರಿಗೆ ರೋಬೋಟ್ ಅನೆಯನ್ನು ಪ್ರಥಮ ಬಾರಿಗೆ  ಪರಿಚಯಿಸಿದ ಕೀರ್ತಿ ಕಿಲ್ಲೆ ಮಠದ್ದಾಗಿದ್ದು ಸಂತೋಷ ಕೊಡುತ್ತದೆ ಎಂದು ಮಾತಾನಾಡಿದರು.                ಕಾರ್ಯಕ್ರಮದಲ್ಲಿ ತಂಡಿಕೆರೆ          ಗಂಗಾಧರ ಶಿವಾಚಾರ್ಯ ಮಹಾ ಸ್ವಾಮಿಗಳು,ಕಪಿಲ ಸಿದ್ದರಾಮ ಶಿವಾ ಚಾರ್ಯ ಮಹಾಸ್ವಾಮಿಗಳು, ಕ್ಷೀರ ಲಿಂಗೇಶ್ವರ ಶರಣರು,ಸದಾನಂದ ಶರಣರು ಅಬಿನವ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ,ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು,ಅಬಿನವ ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು,ಪಂಪಾಪತಿ ಶಾಸ್ತ್ರಿ ಸಾನಿಧ್ಯ ವಹಿಸಿದ್ದರು .ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಬೋಸರಾಜು, ಮಾಜಿ ಸಚಿವ ಶಿವನಗೌಡ ನಾಯಕ, ಶಾಸಕ ಶಿವರಾಜ್ ಪಾಟೀಲ್, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ರೋಬೋಟಿಕ ಆನೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ  ಜಿಲ್ಲಾ ಕಾಂಗ್ರೆ ಸ್ ಪಕ್ಷದ ಅದ್ಯಕ್ಷ ಕೆ.
 ಶಾಂತಪ್ಪ,‌.   ಜಿಲ್ಲಾ ನ್ಯಾಯವಾದಿಗಳ ಸಂಘದ ಅದ್ಯಕ್ಷ  ಶಿವ ಶಂಕರ್ , ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ದರೂರ್ ಬಸವರಾಜ್,ವಿನಯ್ ಕುಮಾರ್, ಶಂಕರ ಗೌಡ ಮಿರ್ಜಾಪೂರ್, ಕೇಶವ ರೆಡ್ದಿ ,ದಂಡಪ್ಪ ಬಿರದಾರ್,ನಿಜ ಗುಣ ಶಿವಯೋಗಿ ಜವಳಿ,ಶಿ‌ವ ಕುಮಾರ್,ಗೌರಿ ಶಂಕರ್,ರೇಣುಕಾ ಸ್ವಾಮಿ,ಕೇಶವ ಮೂರ್ತಿ,ವೀರೇಶ್ ಅಲ್ಕೋಡ್,ಶರಣಯ್ಯ, ಗು ರುಪಾದ ಸ್ವಾಮಿಗಳು,ನಾಗಯ್ಯ ಸ್ವಾಮಿಗಳು ಭಾಗವಹಿಸಿದರು. ಅನಂತರ ಕಿಲ್ಲೆ ಬ್ರಹನ್ಮಠ ದಿಂದ ಕೋಳಂಕಿವರೆಗೆ ಸದ್ಪಾಭಾವನಾ ಪಾದಯಾತ್ರೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

Comments

Popular posts from this blog