ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವದ ಕೇರಂ ಕ್ರೀಡಾಕೂಟಕ್ಕೆ ಚಾಲನೆ

ಜಯ‌ಧ್ವಜ‌ ನ್ಯೂಸ್ ರಾಯಚೂರು ,ಸೆ.25- ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನ ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ಕೇರಂ ಕ್ರೀಡಾಕೂಟಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿ ಹಾಗೂ ನಿಕಟ ಪೂರ್ವ ರಾಜ್ಯ ಸಮಿತಿ  ಸದಸ್ಯ ಶಿವಮೂರ್ತಿ ಹಿರೇಮಠ  ಚಾಲನೆ ನೀಡಿದರು.


ನಗರದ ಪತ್ರಿಕಾ ಭವನದ ಮೇಲ್ಮಹಡಿ ಸಭಾಂಗಣದಲ್ಲಿ ಚೀಟಿ ಎತ್ತಿ ಕೇರಂ ಆಡುವ ಮೂಲಕ ಚಾಲನೆ ನೀಡಿದ ನಂತರ ಮಾತನಾಡಿದ ಬಸವರಾಜ ನಾಗಡದಿನ್ನಿ, ಸುದ್ದಿ ಸಂಗ್ರಹದಲ್ಲಿ ಬ್ಯಸಿಯಾಗಿರುವ ಪತ್ರಕರ್ತರಿಗೆ ಇಂತಹ ಕ್ರೀಡಾಕೂಟ ಸ್ಪೂರ್ತಿಯಾಗಲಿದೆ ಎಂದರು.

ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ರಿಪೋರ್ಟ್ ರ್ಸ್ ಗಿಲ್ಡ್ ಉತ್ತಮ ಚಟುವಟಿಕೆಗಳನ್ನು ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸಮಿತಿಯ ನಿಕಟ ಪೂರ್ವ ಸದಸ್ಯ ಶಿವ ಮೂರ್ತಿ ಹಿರೇಮಠ ಮಾತನಾಡಿ, ಬೆಳ್ಳಿ ಮಹೋತ್ಸವದ ಅಂಗವಾಗಿ ಹಲವಾರು ಕಾರ್ಯಕ್ರಮ ಕೇವಲ ಪತ್ರಕರ್ತರಿಗಷ್ಟೆ  ಅಲ್ಲದೆ ಪದವಿ ವಿದ್ಯಾರ್ಥಿಗಳಿಗೂ ಅವಕಾಶ ಕೊಟ್ಟಿದ್ದಾರೆ. ಪತ್ರಕರ್ತರು ತಮ್ಮನ್ನು ತಾವು ಕ್ರೀಡಾಕೂಟದಲ್ಲಿ ತೊಡಗಿಸಿಕೊಂಡು ಸಕ್ರಿಯತೆಗೆ ಪೂರಕವಾಗಿದೆ ಎಂದರು.


ಪತ್ರಕರ್ತರು ನಡೆದು ಬಂದ ದಾರಿಯನ್ನು ನೆನಪಿಸುವ ಕೆಲಸ ಶ್ಲಾಘನೀಯ ಎಲ್ಲರೂ ಯಶಸ್ವಿಯಾಗಿ ನಡೆಸಿಕೊಡೋಣ ಎಂದು ಹೇಳಿದರು.

ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.‌ಗುರುನಾಥ್ ಮಾತನಾಡಿ, ಸುದ್ದಿಯ ಹುಡುಕಾಟದ ಬ್ಯುಸಿಯ ಲ್ಲಿರುವ ನಮಗೆ ಸ್ಪೂರ್ತಿ ತರಲು ಇಂತ ಉತ್ತಮ ಕೆಲಸ ಮಾಡುತ್ತಿದೆ. ನಗರದ ಎಲ್ಲ ಪತ್ರಕರ್ತರು  ಉತ್ಸಾಹದಿಂದ ಭಾಗವಹಿಸಲು ಸಲಹೆ ಮಾಡಿದರು.

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಮಾತನಾಡಿ,ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಎಲ್ಲ ಪತ್ರಕರ್ತರು ಕ್ರೀಡಾ ಸ್ಪೂರ್ತಿ ಯೊಂದಿಗೆ ಆಡುವಂತೆ ಸಲಹೆ ನೀಡಿದರು.


ನಂತರ ನಗರದ ಪತ್ರಕರ್ತರು ಕೇರಂ‌ ಕ್ರೀಡಾಂಗಣದಲ್ಲಿ ಪಾಲ್ಗೊಂಡರು.ಈ ಸಂದರ್ಭದಲ್ಲಿ ಗಿಲ್ಡ್ ಕಾರ್ಯದರ್ಶಿ ವೆಂಕಟೇಶ ಹೂಗಾರ, ಜಂಟಿ ಕಾರ್ಯದರ್ಶಿ ಶ್ರೀಕಾಂತ್ ಸಾವೂರ, , ಮಂಜುನಾಥ ಸಾಲಿ, ಚಂದ್ರಕಾಂತ ಮಸಾನಿ, ಗುರುರಾಜಗೌಡ, ಜಯಕುಮಾರ ದೇಸಾಯಿ ಕಾಡ್ಲೂರು, ಭೀಮೇಶ, ಆನಂದ ವಿಕೆ, ರಾಚಯ್ಯಸ್ವಾಮಿ,  ಅಬ್ದುಲ್ ಖಾದರ, ಜಿಲಾನಿ,  ರಾಜು,  ರವಿ ದಾದಸ, ನಾಗರಾಜ್, ಶ್ರೀನಿವಾಸ ಇನಾಂದಾರ, ಮಲ್ಲಪ್ಪ ಸಾಹುಕಾರ್,ದುರ್ಗೇಶ, ವಾಸು ಅಮರೇಶ ಸಜ್ಜನ, ಮಲ್ಲಿಕಾರ್ಜುನ ಸ್ವಾಮಿ, ಸುರೇಶ್ ಸ್ವಾಮಿ, ಸೇರಿದಂತೆ ಹಲವು ಪತ್ರಕರ್ತರು, ಪತ್ರಿಕಾ ಛಾಯಾಗ್ರಾಹಕರು ಇದ್ದರು.

Comments

Popular posts from this blog