ನಗರಾಭಿವೃದ್ಧಿ ಸಚಿವರಿಂದ ಪ್ರಗತಿ ಪರಿಶೀಲನಾ ಸಭೆ:

ಜನಸಂಖ್ಯೆಗೆ ಅನುಗುಣವಾಗಿ ವಿವಿಧ ಸೌಲಭ್ಯ ಒದಗಿಸಿ- ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ 



ಜಯ ಧ್ವಜ ನ್ಯೂಸ್ ,ರಾಯಚೂರು ಸೆ.7 - ಪ್ರಸ್ತುತ ಬರ ಇವರು ಕಾರಣ ಜನರಿಗೆ ಕುಡಿಯುವ ನೀರು ಸೇರಿದಂತೆ ಇತರೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ ಜನಸಂಖ್ಯೆಗೆ ಅನುಗುಣವಾಗಿ ವಿವಿಧ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸಬೇಕೆಂದು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದರು.

ಅವರಿಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಾಯಚೂರು ಮಹಾನಗರ ಪಾಲಿಕೆ ಹಾಗೂ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬರುವ ದಿನಗಳಲ್ಲಿ ಹೆಚ್ಚಾಗುವ ನಗರದ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು, ಘನ ತ್ಯಾಜ್ಯ ವಿಲೇವಾರಿಗೆ ಸೂಕ್ತ ಯೋಜನೆಯನ್ನು ರೂಪಿಸಬೇಕು. ರಾಯಚೂರು ನಗರದಲ್ಲಿ 3.5 ಲಕ್ಷ ಜನಸಂಖ್ಯೆಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಭವಿಷ್ಯದಲ್ಲಿ ಬೇಡಿಕೆ ಹೆಚ್ಚಳವಾಗುವದನ್ನು ಸಹ ಪರಿಗಣಿಸಬೇಕೆಂದರು. ನಗರದಲ್ಲಿ 52 ಎಂಎಲ್‌ಡಿ ನೀರಿನ ಪೂರೈಕೆಯಾಗುತ್ತಿದ್ದು, 90 ಎಂಎಲ್‌ಡಿ ಬೇಡಿಕೆಯಿದೆ ಎಂದರು.

ನೀರು, ಘನತ್ಯಾಜ್ಯ ವಿಲೇವಾರಿ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ನಗರಗಳು ತೀವ್ರವಾಗಿ ಬೆಳೆಯುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು. ಪ್ರಸ್ತುತ ಮಹಾನಗರ ಪಾಲಿಕೆಯ ಜನಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಗಳಾಲಿದೆ. ಅವರಿಗೆ ಕುಡಿಯುವ ನೀರು ಮತ್ತು ಘನ ತ್ಯಾಜ್ಯ ವಿಲೇಜ್ ವಿಲೇವಾರಿ ಮೂಲಭೂತ ಸುಗಮವಾಗಿ ಸೌಕರ್ಯಗಳು ದೊರೆಯಲು ಅಗತ್ಯ ಕ್ರಮವಹಿಸಬೇಕು ಎಂದು ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ಗಣೇಕಲ್ ಜಲಾಶಯದಿಂದ ಕುಡಿಯುವ ನೀರು ಪಡೆಯುವ ಬದಲು ಗುರ್ಜಾಪುರ ಜಲಾಶಯದಿಂದ ನಗರಕ್ಕೆ ಕುಡಿಯುವ ನೀರು ಪಡೆಯುವ ಯೋಜನೆ ರೂಪಿಸಬೇಕು. ಗಣೇಕಲ್ ಜಲಾಶಯದ ನೀರು ಪಡೆಯಲು ರೈತರ ಒತ್ತಡದ ಹಿನ್ನಲೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರು ಮಾತನಾಡಿ, ನಗರದಲ್ಲಿ ಕುಡಿಯುವ ನೀರಿನ ಜಾಲ ಸಮರ್ಪಕವಾಗಿ ಇಲ್ಲದೇ ಇರುವದರಿಂದ ಪೂರೈಕೆಯಲ್ಲಿ ಸೋರಿಕೆಯ ಅವ್ಯವಸ್ಥೆಯಿದೆ. ಸರಿಪಡಿಸಲು ವ್ಯವಸ್ಥಿತ ಯೋಜನೆ ರೂಪಿಸಿಕೊಳ್ಳಬೇಕೆಂದರು.

ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ವಸಂತ ಕುಮಾರ ಅವರು ಮಾತನಾಡಿ, ದೇವಸೂಗೂರು, ಚಿಕ್ಕಸೂಗೂರು ನೀರಿನ ಶುದ್ದೀಕರಣ ಘಟಕಗಳು ಸ್ಥಗಿತಗೊಂಡಿದ್ದು, ನವೀಕರಣ ಕೈಗೊಂಡು ನೀರಿನ ಪೂರೈಕೆ ಪ್ರಮಾಣ ಹೆಚ್ಚಿಸುವ ಅವಕಾಶಗಳನ್ನು ಪಾಲಿಕೆ ಬಳಸಿಕೊಳ್ಳಬೇಕೆಂದರು.

ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೊಪಾತ್ರ ಅವರು ಮಾತನಾಡಿ, ನಗರದಲ್ಲಿ 35 ಸ್ಲಂ ಏರಿಯಾಗಳಿದ್ದು, ಹೊಸ ಮತ್ತು ಹಳೇ ಆಶ್ರಯ ಕಾಲೋನಿಗಳ ಸೌಕರ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ. 135 ಕೋಟಿ ರೂ. ಅರ್ಬನ್ ಚಾಲೆಂಜ್ ಅನುದಾನದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು, ಕಮರ್ಷಿಯಲ್ ಕಾಂಪ್ಲೆಕ್ಸ್ಗೆ ಉಸ್ಮಾನಿಯಾ ತರಕಾರಿ ನಿರ್ಮಾಣ ಉದ್ದೇಶೀಸಲಾಗಿದೆ ಎಂದರು.

ಮಾವಿನ ಕೆರೆ ಅಭಿವೃದ್ಧಿಗಾಗಿ ಈಗಾಗಲೇ ಕಾಮಗಾರಿಯು ಪ್ರಗತಿಯಲ್ಲಿದೆ. 15ನೇ ಹಣಕಾಸು ಆಯೋಗದ ವತಿಯಿಂದ 67.72 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಎಸ್.ಎಫ್.ಸಿ/ ಎಸ್.ಸಿ.ಎಸ್.ಪಿ, ಟಿಎಸ್.ಪಿ ವತಿಯಿಂದ 20.58 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಶೇ.97.2ರಷ್ಟು ಅನುದಾನ ಬಳಕೆ ಮಾಡಲಾಗಿದೆ ಎಂದರು.


ಆನೆ ಕಲಾಕೃತಿ ಉದ್ಘಾಟನೆ
: ರಾಯಚೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಂಗ್ರಹಿಸಲಾದ ವೇಸ್ಟ್ ವಂಡರ್ ಕುಡಿಯುವ ನೀರಿನ ವೇಸ್ಟ್ ಬಾಟಲಿಗಳನ್ನು ಬಳಸಿ, ಧಾರವಾಡದ ಆರ್ಟ್ ವ್ಯಾಲಿ ಸಂಸ್ಥೆಯಿಂದ ತಯಾರಿಸಿದ ಆನೆ ಕಲಾಕೃತಿಯನ್ನು  ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ವೀಕ್ಷಿಸಿದರು. ಇದು ನೋಡುಗರ ಗಮನ ಸೆಳೆಯಿತು.

ಮಹಾನಗರ ಪಾಲಿಕೆಯ ಸ್ವಸಹಾಯ ಸಂಘದ ಮಹಿಳೆಯರಿಂದ ವೇಸ್ಟ್ ಪೇಪರನಿಂದ ಮನೆಯ ಸೌಂದರ್ಯಕರಣಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ತಯಾರಿಸಲಾಗಿದ್ದ ವಿವಿಧ ಕಲಾಕೃತಿಯನ್ನು ಸಚಿವರು ವೀಕ್ಷಿಸಿದರು.

ರಾಯಚೂರು ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ನಿಮ್ಮ ಬಾಗಿಲಿಗೆ ಮಹಾನಗರ ಪಾಲಿಕೆ ಕಂದಾಯ ಅದಾಲತ್ ಹಂತ-2 ಕಾರ್ಯಕ್ರಮಕ್ಕೆ ಡಿಜಿಟಲ್ ಲಾಗಿನ್ ಮೂಲಕ ಚಾಲನೆ ನೀಡಿ, ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಇ-ಖಾತಾ ವಿತರಿಸಿದರು. ಮತ್ತು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಸಮವಸ್ತ್ರದ ಕಿಟ್‌ಗಳನ್ನು ಸಚಿವರು ಸೇರಿದಂತೆ ವಿವಿಧ ಗಣ್ಯರು ವಿತರಿಸಿದರು.

ಈ ಸಂದರ್ಭದಲ್ಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ರಾಮಸ್ವಾಮಿ, ಜಿಲ್ಲಾಧಿಕಾರಿ ಪೂವಿತಾ ಎಸ್., ಪಾಲಿಕೆಯ ವಿವಿಧ ವಿಭಾಗದ ಉಪ ಆಯುಕ್ತರಾದ ಶರಣಪ್ಪ, ಸಂತೋಷ ರಾಣಿ, ಮುರಳೀಧರ ರಾವ್, ರಾಯಚೂರು ನಗರಾಭಿವೃದ್ಧಿ ಯೋಜನಾ ನಿರ್ದೇಶಕ ತಿಮ್ಮಪ್ಪ ಬಿರಾದಾರ್ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಇದ್ದರು.

Comments

Popular posts from this blog