Posts

ನಾಳೆ ಸಮಾಜ-ಮಾಧ್ಯಮ-ಹೋರಾಟ ಕುರಿತ ಒಂದು ಅವಲೋಕನ ಕಾರ್ಯಕ್ರಮ

Image
ನಾಳೆ ಸಮಾಜ-ಮಾಧ್ಯಮ-ಹೋರಾಟ  ಕುರಿತ ಒಂದು  ಅವಲೋಕನ ಕಾರ್ಯಕ್ರಮ ರಾಯಚೂರು ನ.22-ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಸಮಾಜ-ಮಾಧ್ಯಮ-ಹೋರಾಟ ಕುರಿತು ಒಂದು ಅವಲೋಕನ ಕಾರ್ಯಕ್ರಮ ನಾಳೆ ಬೆಳಿಗ್ಗೆ 11 ಕ್ಕೆ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ. ಉದ್ಘಾಟಕರಾಗಿ ಹಿರಿಯ ಪತ್ರಕರ್ತ ಮೃತ್ಯುಂಜಯ ಕಪಗಲ್ ಆಗಮಿಸಲಿದ್ದು, ಹೋರಾಟಗಾರರಾದ ರಾಘವೇಂದ್ರ ಕುಷ್ಟಗಿ, ಚಾಮರಸ ಮಾಲಿ ಪಾಟೀಲ್, ಆರ್.ಮಾನಸಯ್ಯ, ಪತ್ರಕರ್ತ ಶಿವಮೂರ್ತಿ ಹಿರೇಮಠ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಧ್ಯಕ್ಷತೆ ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ವಿವಿಧ ಪಕ್ಷಗಳ ಮುಖಂಡರು,ವಿವಿಧ ಸಂಘಟನೆಗಳ ಹೋರಾಟಗಾರರು ಮತ್ತಿತರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ ಕೋರಿದ್ದಾರೆ.

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನೆ: ಪತ್ರಕರ್ತರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು- ಡಿ.ಕೆ. ಕಿಶನರಾವ್

Image
  ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನೆ:                ಪತ್ರಕರ್ತರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು- ಡಿ.ಕೆ. ಕಿಶನರಾವ್                              ರಾಯಚೂರು,ನ.22- ಪತ್ರಕರ್ತರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತರು ಹಾಗೂ ರಿಪೋರ್ಟರ್ಸ್ ಗಿಲ್ಡ್ ಮಾಜಿ ಅಧ್ಯಕ್ಷರಾದ ಡಿ.ಕೆ. ಕಿಶನರಾವ್  ಹೇಳಿದರು.                                          ಅವರಿಂದು  ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ  ಸಂಘ ಹಾಗೂ ರಾಯಚೂರು ರಿಪೋರ್ಟ್ರಸ್ ಗಿಲ್ಡ್ ವತಿಯಿಂದ ಇಂದು  ಬೆಳಿಗ್ಗೆ 8 ಗಂಟೆಗೆ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ಸದಾ ಸುದ್ದಿ ಸಂಗ್ರಹದಲ್ಲಿ ತೊಡಗಿರುತ್ತಾರೆ ಅವರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಜಿಲ್ಲಾ ಯುವಜನ ಮತ್ತು ಕ್ರೀಡಾ...

ಪತ್ರಿಕಾ ದಿನಾಚರಣೆ: ಕೇರಂ, ಚದುರಂಗ ಪಂದ್ಯಾವಳಿ

Image
  ಪತ್ರಿಕಾ ದಿನಾಚರಣೆ: ಕೇರಂ, ಚದುರಂಗ ಪಂದ್ಯಾವಳಿ ರಾಯಚೂರು,ನ.21- ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಯುಕ್ತ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋಟರ‍್ಸ್ ಗಿಲ್ಡ್ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಇಂದು ಕೇರಂ ಮತ್ತು ಚೆಸ್ ಪಂದ್ಯಗಳು ಜರುಗಿದವು. ಕೇರಂನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಮತ್ತು ಚದುರಂಗ ಸ್ಪರ್ಧೆ ನಡೆಸಲಾಯಿತು. ಚದರುಂಗ ಸ್ಪರ್ಧೆಯಲ್ಲಿ ಪತ್ರಕರ್ತ ರಾಮಕೃಷ್ಣ ಪ್ರಥಮ, ಹನುಮಂತ ಪಿ. ದ್ವಿತೀಯ ಸ್ಥಾನ ಪಡೆದರೆ, ಸಿದ್ದಯ್ಯಸ್ವಾಮಿ ತೃತೀಯ ಸ್ಥಾನ ಪಡೆದರು.   ಕೇರಂ ಸಿಂಗಲ್ಸ್ ವಿಭಾಗದಲ್ಲಿ ೨೦ ಜನ ಪಾಲ್ಗೊಂಡಿದ್ದು, ಅದರಲ್ಲಿ ಪತ್ರಕರ್ತರಾದ ಹನುಮಂತ ಪಿ. ಪ್ರಥಮ ಸ್ಥಾನ, ಶ್ರೀಕಾಂತ ಸಾವೂರು ದ್ವಿತೀಯ ಸ್ಥಾನ, ಭೀಮಸೇನಾಚಾರ್ ತೃತೀಯ ಸ್ಥಾನ ಪಡೆದರು. ಡಬಲ್ಸ್ ವಿಭಾಗದಲ್ಲಿ ೧೦ ತಂಡಗಳು ಪಾಲ್ಗೊಂಡಿದ್ದು, ಭೀಮಸೇನಾಚಾರ್ ಮತ್ತು ದುರಗೇಶ ಜೋಡಿ ಪ್ರಥಮ, ಶಿವಕುಮಾರ್ ಮತ್ತು ಜಿಲಾನಿ ಜೋಡಿ ದ್ವಿತೀಯ, ಪ್ರಸನ್ನಕುಮಾರ ಮತ್ತು ಹನುಮಂತ ಕೆ. ಜೋಡಿ ತೃತೀಯ ಸ್ಥಾನ ಪಡೆದವು. ದೈಹಿಕ ಶಿಕ್ಷಕರಾದ ಹನುಮಂತ ಮತ್ತು ಹನುಮಂತರಾವ್ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಹಿರಿಯ ಕಿರಿಯ ಪತ್ರಕರ್ತರು ಪಾಲ್ಗೊಂಡಿದ್ದರು.

ಪತ್ರಕರ್ತರು ಹಾಗೂ ಪೊಲೀಸ್ ಮತ್ತು ಕಂದಾಯ ಇಲಾಖೆ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ: ಎಲ್ಲರು ಕ್ರೀಡಾ ಮನೋಭಾವನೆಯಿಂದ ಪಾಲ್ಗೊಳ್ಳಿ- ಜಿಲ್ಲಾಧಿಕಾರಿ

Image
  ಪತ್ರಕರ್ತರು ಹಾಗೂ ಪೊಲೀಸ್ ಮತ್ತು ಕಂದಾಯ ಇಲಾಖೆ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ: ಎಲ್ಲರು ಕ್ರೀಡಾ ಮನೋಭಾವನೆಯಿಂದ ಪಾಲ್ಗೊಳ್ಳಿ- ಜಿಲ್ಲಾಧಿಕಾರಿ  ರಾಯಚೂರು,ನ.19-  ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನಿಂದ  ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಪತ್ರಕರ್ತರು, ಪೋಲೀಸ್, ಕಂದಾಯ ಇಲಾಖೆ ತಂಡಗಳ ನಡುವೆ ಇಂದು ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಈ ವೇಳೆ  ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ ಸದಾ ಕೆಲಸದಲ್ಲಿ ತೊಡಗಿರುವ ಪತ್ರಕರ್ತರು, ಪೊಲೀಸರು, ಆಡಳಿತ ವಿಭಾಗ ಇಂದು ಸೌಹಾರ್ದ ಕ್ರೀಡಾಕೂಟ ಆಡುತ್ತಿರುವುದು ಸಂತೋಷ. ಎಲ್ಲರೂ ಕ್ರೀಡಾಭಾವನೆಯಿಂದ ಸ್ಪರ್ಧಾತ್ಮಕವಾಗಿ, ಗೆಲುವಿಗಾಗಿ ಆಡಿ. ಒಟ್ಟಿಗೆ ಸೇರಿ ಆಡುವ ಸಂದರ್ಭದಲ್ಲಿ ಕಲಿಯುವುದು ಇರುತ್ತದೆ ಹಾಗಾಗಿ ಎಲ್ಲರೂ ಉತ್ತಮವಾಗಿ ಆಡಿ ಎಂದು ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಅವರು ಕ್ರೀಡಾಕೂಟಗಳ ಹಿನ್ನೆಲೆ ವರ್ಷದಲ್ಲಿ ಒಂದು ಬಾರಿ ಮಾತ್ರ ನಾವು ಒಟ್ಟಿಗೆ ಸೇರುತ್ತೇವೆ. ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಪತ್ರಕರ್ತರು ಒತ್ತಡದಲ್ಲಿ ಕೆಲಸ ಮಾಡುತ್ತೀರಿ. ಬೈಕ್ ಮೇಲೆ ಓಡಾಡುವಾಗ ಹೆಲ್ಮೆಟ್ ಧರಿಸಿ ಓಡಾಡಿ ಸಂಚಾರಿ ನಿಯಮ ಪಾಲಿಸಿ  ಎಂದು ಸಲಹೆ ನ...

ಪತ್ರಕರ್ತರ ಕ್ರಿಕೆಟ್ ಕ್ರೀಡಾಕೂಟ ಉದ್ಘಾಟನೆ: ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ- ಸುರೇಂದ್ರ ಆಚಾರ್ಯ

Image
  ಪತ್ರಕರ್ತರ ಕ್ರಿಕೆಟ್ ಕ್ರೀಡಾಕೂಟ ಉದ್ಘಾಟನೆ: ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ- ಸುರೇಂದ್ರ ಆಚಾರ್ಯ ರಾಯಚೂರು,ನ.18- ಕ್ರೀಡೆಯಲ್ಲಿ ಸೋಲು ಗೆಲುವು ಎರಡೂ ಸರ್ವೆ ಸಾಮಾನ್ಯ ಅದನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹಿರಿಯ ಪತ್ರಕರ್ತ ಸುರೇಂದ್ರ ಆಚಾರ್ಯ ಕೊರ್ತಕುಂದ ಹೇಳಿದರು. ಅವರಿಂದು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾ ಚರಣೆ ನಿಮಿತ್ತವಾಗಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟಸ್ ಗಿಲ್ಡ್ ವತಿಯಿಂದ ಹಮ್ಮಿಕೊಂಡ ಕ್ರಿಕೇಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು, ಪತ್ರಕರ್ತರು ದಿ‌ನ ನಿತ್ಯದ ಕೆಲಸದ ಒತ್ತಡದ ಮಧ್ಯಯೂ  ಒತ್ತಡ ಕಳೆಯಲು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು, ಹಾಗೂ ಎಲ್ಲಾ ಕ್ಷೇತ್ರದಲ್ಲಿ ಪತ್ರಕರ್ತರು ಮಾಹಿತಿಯನ್ನು ಪಡೆದು ಪರಿಣಿತರಾಗುವುದರ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡೆಯಲ್ಲಿ ನಿಯಮಗಳು ಹಾಗೂ ವರದಿಕಾರಿಕೆಯನ್ನು ಮಾಡಲು ಅನುಕೂಲವಾಗಿದೆ ಎಂದು ತಿಳಿಸಿದರು. ಜಿಲ್ಲಾ  ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಪತ್ರಕರ್ತರ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ, ಕ್ರೀಡಾ ಸ್ಫೂರ್ತಿಯಿಂದ ಬಾಂಧವ್ಯ ಗಟ್ಟಿಗೊಳಿಸುವ ಕೆಲಸ ವಾಗುತ್ತದೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪತ್ರಕರ್ತರ ಸ್ನೇಹವನ್ನು ಹೊಂದುವುದರ ಜೊತೆಗೆ ಕ್...

ಗ್ರಂಥಾಲಯ ಸಪ್ತಾಹ ನಿತ್ಯದ ಹಬ್ಬವಾಗಬೇಕು- ಮುರಳಿಧರ ಕುಲಕರ್ಣಿ

Image
  ಗ್ರಂಥಾಲಯ ಸಪ್ತಾಹ ನಿತ್ಯದ ಹಬ್ಬವಾಗಬೇಕು- ಮುರಳಿಧರ ಕುಲಕರ್ಣಿ ರಾಯಚೂರು,ನ.17-ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ ಗಳ ವ್ಯಾಪಕ ಬಳಕೆಯಿಂದ ಓದುಗರ ಸಂಖ್ಯೆ ಹಾಗೂ ಪುಸ್ತಕ ಪ್ರೀತಿ, ದಿನೇ ದಿನೇ ಕ್ಷೀಣಿಸುತ್ತಿದೆ, ಈ ದಿಸೆಯಲ್ಲಿ ಸಾರ್ವಜನಿಕ ಗ್ರಂಥಾಲಯಗಳು ನಾಗರಿಕರಲ್ಲಿ ಪುಸ್ತಕ ಪ್ರೀತಿಯನ್ನು ಹೆಚ್ಚಿಸಿ, ಗ್ರಂಥಾಲಯಗಳನ್ನು  ಸದೃಢಗೊಳಿಸಬೇಕು. ಗ್ರಂಥಾಲಯ ಸಪ್ತಾಹ ಎಂಬುದು ಒಂದು ವಾರದ ಚಟುವಟಿಕೆಯಾಗದೆ ಇದು ನಿತ್ಯದ ಹಬ್ಬವಾಗಬೇಕೆಂದು, ಕರ್ನಾಟಕ ಸಂಘದ ಕಾರ್ಯದರ್ಶಿ ಮುರಳಿಧರ ಕುಲಕರ್ಣಿ ಅವರು ಹೇಳಿದರು.    ಅವರು ಇಂದು ಬೆಳಗ್ಗೆ ಕರ್ನಾಟಕ ಸಂಘದಲ್ಲಿ ಹಮ್ಮಿಕೊಂಡ  ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎ. ಸುಧಾಕರ  ನಿವೃತ್ತ ಎಲ್. ಐ. ಸಿ. ಅಧಿಕಾರಿ, ಇವರು ಮಾತನಾಡಿ, ಕರ್ನಾಟಕ ಸಂಘಕ್ಕೆ ತನ್ನದೇ ಆದ ಇತಿಹಾಸ ಪರಂಪರೆ ಇದೆ, ಈ ಸಂಘವು ಹಲವಾರು ಸ್ಥಳೀಯ ಪತ್ರಿಕೆಗಳ ಸ್ಥಾಪನೆಗೆ ಕಾರಣವಾಗಿದೆ. ಕರ್ನಾಟಕ ಸಂಘದ ಗ್ರಂಥಾಲಯದ ಜೊತೆಗೆ ಬೋಳಮಾನ ದೊಡ್ಡಿಯ ರಸ್ತೆಯಲ್ಲಿ ಇನ್ನೊಂದು ಗ್ರಂಥಾಲಯ ವನ್ನು ಸರ್ಕಾರ ಸ್ಥಾಪಿಸಿದರೆ, ಆ ಭಾಗದ ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.        ಇನ್ನೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ರವಿಕುಮಾ...

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ: ಪತ್ರಕರ್ತರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು- ಡಾ.ಅಜಿತ್.

Image
ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ: ಪತ್ರಕರ್ತರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು- ಡಾ.ಅಜಿತ್.    ರಾಯಚೂರು,ನ.16- ಸದಾ ಸುದ್ದಿ ಜಂಜಾಟದ ಒತ್ತಡದಲ್ಲಿರುವ  ಪತ್ರಕರ್ತರು ನಿಯಮಿತವಾಗಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರುಬೇಕೆಂದು ವಿಜಿಕೆ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ  ಡಾ.ಅಜಿತ್ ವಿ.ಕುಲಕರ್ಣಿ ಹೇಳಿದರು.                    ಅವರಿಂದು ನಗರದ ವಿಜಿಕೆ ಆಸ್ಪತ್ರೆಯಲ್ಲಿ ರಾಯಚೂರು ರಿಪೋರ್ಟ್ರಸ್ ಗಿಲ್ಡ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ದಿನ ನಿತ್ಯ ಸುದ್ದಿ ಧಾವಂತದಲ್ಲಿರುತ್ತಾರೆ ಅದರ ಮಧ್ಯೆ ತಾವು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದರು.                         ನಮ್ಮ ದೇಶದಲ್ಲಿ ಪ್ರತಿ 4 ನಿಮಿಷಕ್ಕೊಮ್ಮೆ ಒಬ್ಬರಿಗೆ ಹೃದಯಾಘಾತ ಸಂಭವಿಸುತ್ತದೆ 10 ನಿಮಿಷಕ್ಕೊಬ್ಬರು ಹೃದ್ರೋಗ ಖಾಯಿಲೆಯಿಂದ ಸಾವನ್ನಪ್ಪುತ್ತಾರೆ ಎಂಬ ಮಾಹಿತಿಯಿದ್ದು ನಾವೆಲ್ಲರೂ ಉತ್ತಮ ಆಹಾರ, ವಿಹಾರ, ವಿಚಾರವಿಟ್ಟುಕೊಳ್ಳಬೇ...