Posts

Showing posts from July, 2023

ಯಾಪಲದಿನ್ನಿ ಗ್ರಾಮದಲ್ಲಿ ಸಂತೆ ಬಜಾರ ನಲ್ಲಿ ಸ್ವಚ್ಚತೆ ಮತ್ತು ಕೆಲವು ಕಡೆ ಕಾಲುವೆ ನಿರ್ಮಾಣ ಮಾಡಲು ಕೆಪಿಆರ್ ಎಸ್ ಒತ್ತಾಯ

Image
  ಯಾಪಲದಿನ್ನಿ ಗ್ರಾಮದಲ್ಲಿ ಸಂತೆ ಬಜಾರ ನಲ್ಲಿ ಸ್ವಚ್ಚತೆ ಮತ್ತು ಕೆಲವು ಕಡೆ ಕಾಲುವೆ ನಿರ್ಮಾಣ ಮಾಡಲು ಕೆಪಿಆರ್ ಎಸ್  ಒತ್ತಾಯ   ರಾಯಚೂರು,ಜು.31-  ಕರ್ನಾಟಕ ಪ್ರಾಂತ ರೈತ ಸಂಘ ಯಾಪಲದಿನ್ನಿ ಗ್ರಾಮ ಘಟಕ ಈ ಮೂಲಕ  ಒತ್ತಾಯಿಸುವುದೇನೆಂದರೆ ಯಾಪಲದಿನ್ನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಚಾಯತ್ ಕೇಂದ್ರ ಗ್ರಾಮದಲ್ಲಿ ಇಡೀ ಗ್ರಾಮದ ಪ್ರಮುಖ ರಸ್ತೆಗಳಲ್ಲಿ  ಸರಿಯಾದ ಕಾಲುವೆಗಳು ಇಲ್ಲದೆ. ಮನೆಗಳ ಚಾರಂಡಿ ನೀರು ಎಲ್ಲಾ ರಸ್ತೆಗಳಲ್ಲಿ ಹರಿಯುತ್ತಾವೆ. ಇದ್ದರಿಂದ ಊರಿನ ಜನರಿಗೆ ತಿರುಗಾಡಲು ತುಂಬಾ ತೂದರೆ ಆಗುತ್ತದೆ  ವಿಶೇಷವಾಗಿ ಸಣ್ಣ ಮಕ್ಕಳು ಮತ್ತು ವಯಸ್ಸು ಅದ ಹಿರಿಯರಿಗೆ ಅನೇಕರು ಕಾಲು ಜಾರಿ ಬಿದ್ದಿದ್ದಾರೆ .                       ಅದಲ್ಲದೇ  ಪ್ರತಿ ನಿತ್ಯ ಚರಂಡಿಯ ನೀರು ರಸ್ತೆಗಳಿಗೆ ಹರಿದು ಬಹುತೇಕ ರಸ್ತೆ ಹಾಳು ಅಗಿವೆ  ರಸ್ತೆ ಗಳಲ್ಲಿ ಮನೆಯ ಚರಂಡಿ ನೀರು ಎಲ್ಲಾ ರಸ್ತೆ ಗಳಿಗೆ ಹರಿಯುತ್ತಿವೆ ಮತ್ತು ಸಂತೆ ಬಜಾರ್ ನಲ್ಲಿ ಸಾರ್ವಜನಿಕ ಕುಡಿಯುವ ನೀರು ಪೂರೈಸುವ ವಾಲ್ ಒಡೆದಿದ್ದು ಅದ್ದರಿಂದ ಚರಂಡಿ ನೀರು ಸೇರಿದ ನೀರು ಪೂರೈಕೆ ಅಗುತ್ತಿದೆ  ಇದ್ದರಿಂದ ಊರಿನ ಜನರು ಅನೇಕ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಇದೆ ಇದನ್ನು ಸರಿ ಪಡಿಸಲು ನಮ್ಮ ಸಂಘಟನೆ ಎರಡು ಮೂರು ಸಲ ತಮ್ಮ ಗೆ ತಿಳಿಸಿದರ...

ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಒತ್ತಾಯ-ವೆಂಕಟೇಶ

Image
  ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಒತ್ತಾಯ-ವೆಂಕಟೇಶ ರಾಯಚೂರು,ಜು.೩೧-ಜಿಲ್ಲೆಯಲ್ಲಿರುವ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಮಸ್ಯೆ ಬಗೆಹರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ ಎಂದು ಸಂಘದ ಜಿಲ್ಲಾ ಕಾರ್ಯರ್ಶಿ ವೆಂಕಟೇಶ ಚಿಲಕದ್ ಹೇಳೀದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜೆಸ್ಕಾಂ ಇಲಾಖೆ ಗುತ್ತಿಗೆದಾರರ ಸಂಕಷ್ಟಕ್ಕೆ ಕಿವಿಗೊಡುತ್ತಿಲ್ಲ ವಿದ್ಯುತ್ ಗುತ್ತಿಗೆದಾರರು ತಾವು ವಿದ್ಯುತ್ ಸಂಪರ್ಕ ಕಲ್ಪಿಸಲು ಗ್ರಾಹಕರಿ ಗೆ  ಬೇಕಾದ ವಿದ್ಯುತ ಮಾಪಕ ಇನ್ನಿತರರ  ವಿದ್ಯುತ್   ಪರಿಕರ ಖರೀದಿಸಲು ಆಗುತಿಲ್ಲ ಸಮಯಕ್ಕೆ ಸರಿಯಾಗಿ ಸಲಕರಣೆ ಲಭ್ಯವಾಗದೆ ಗ್ರಾ ಹ ಕರು ಮನೆ ಪ್ರವೇಶ ಮಾಡದೆ ಪರಿತಪಿಸಬೇಕಾದ ಅನಿವಾರ್ಯತೆಯಿದೆ ಎಂದ ಅವರು ಕಳಫೆ ಗುಣಮಟ್ಟದ ಸಾಮಗ್ರಿಗಳು ಲಭ್ಯವಾಗುತ್ತಿವೆ ಎಂದರು. ವಿದ್ಯುತ ಪರಿವರ್ತಕಗಳು ಸಹ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಅದೇ ರೀತಿ ವಿದ್ಯುತ್ ಮಾಪಕಗಳು ವರ್ಷಪೂರ್ತಿ ಲಭ್ಯವಾಗುವುದಿಲ್ಲ ಕೇವಲ ಎರೆಡು ಮೂರು ತಿಂಗಳು ಮಾತ್ರ ಲಭ್ಯವಾಗುತ್ತವೆ ಎಂದ ಅವರು ಈ ಬಗ್ಗೆ ಸರ್ಕಾರ ಗಮನಹರಿಸಬೇಕೆಂದ ಅವರು ಕಲಬುರ್ಗಿಗೆ ಭೇಟಿ ನೀಡಲಿರುವ ಸಿಎಂ ಸಿದ್ದರಾಮಯ್ಯಗೆ ಈ ಬಗ್ಗೆ ಮನವಿ ಮಾಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಅಲ್ಲಾಭಕ್ಷ, ಭೀಮಣ್ಣ, ಕರಿಯಪ್ಪ,ಶ್ರೀನಿವಾಸರಾವ್ ಇನ್ನಿತರರು ಇದ್ದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಸಂಘಟಿತ ಹೋರಾಟ: ಸೆ.23 ರಿಂದ 25 ರವರೆಗೆ ಅಖಿಲ ಭಾರತ ಅನುಭವ ಮಂಟಪ-ಎಸ್.ಅರ್.ಹಿರೇಮಠ

Image
  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಸಂಘಟಿತ ಹೋರಾಟ: ಸೆ.23 ರಿಂದ 25 ರವರೆಗೆ ಅಖಿಲ ಭಾರತ ಅನುಭವ ಮಂಟಪ-ಎಸ್.ಅರ್.ಹಿರೇಮಠ ರಾಯಚೂರು,ಜು.31- ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳನ್ನು ಸೋಲಿಸಲು ಸಂಘಟಿತ ಹೋರಾಟ ಮಾಡಲಾಗುತ್ತದೆ ಈ ನಿಟ್ಟಿನಲ್ಲಿ  ಅನೇಕ ಸಮಾನ ಮನಸ್ಕರು ಸೇರಿ ಅಖಿಲ ಭಾರತ ಅನುಭವ ಮಂಟಪ ಕಾರ್ಯಕ್ರಮವು ಸೆ.23 ರಿಂದ 25 ರವರೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿದೆ ಎಂದು ಸಿಟಿಜನ್ಸ್ ಫಾರ್ ಡೆಮಾಕ್ರಸಿ ಅಧ್ಯಕ್ಷರಾದ ಎಸ್.ಅರ್.ಹಿರೇಮಠ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಬಿಜೆಪಿ ಸೋಲಿಸುವುದೆ ನಮ್ಮ ಪರಮ ಗುರಿಯಾಗಿದ್ದು ಮೋದಿಯವರ ಆಡಳಿತದಿಂದ ದೇಶದಲ್ಲಿ ಅಸಮಾನತೆ ಮೂಡಿದೆ ಎಂದ ಅವರು ಭ್ರಷ್ಟಾಚಾರ, ಬೆಲೆ ಏರಿಕೆ ಮಿತಿಮೀರಿದೆ ಇದನ್ನು ನಿಯಂತ್ರಿಸಲು ಮೋದಿಯವರ ನೇತೃತವರ ಸರ್ಕಾರ ವಿಫಲವಾಗಿದೆ ಎಂದು ದೂರಿದರು. ಜನಾಂದೋಲನ ರೂಪಿಸಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ನಿರ್ಮೂಲನೆ ಮಾಡಿದ ಹಾಗೇಯೇ ದೇಶದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕೆಂದ ಅವರು ದೇಶವು ಎಲ್ಲರ ಸ್ವತ್ತಾಗಿದೆ ಇದು ಒಂದೆ ಧರ್ಮ ಜಾತಿಗೆ ಸೀಮಿತವಾಗಿದ್ದಲ್ಲವೆಂದರು. ಹೋರಾಟಗಾರ ರಾಘವೇಂದ್ರ ಕುಷ್ಟಗಿ ಮಾತನಾಡಿ ಮೋದಿ ಸರ್ಕಾರ ಅನೇಕ ಜನವಿರೋಧಿ ನೀತಿ ತರುತ್ತಿದೆ ಕೃಷಿ ಕಾಯ್ದೆ ತಂದಿತು ನಂತರ ರೈತರ ತೀರ್ವ ವಿರೋಧದಿಂದ ಅದನ್ನು ವಾಪಸ್ಸು ಪಡೆಯತೆಂದ ಅವರು ಇದೀಗ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಬಗ್ಗೆ ಚಿಂತಿಸುತ...

ಅತಿವೃಷ್ಟಿ: ಬೀಜ, ರಸಗೊಬ್ಬರ ದಾಸ್ತಾನು ಬೇಡಿಕೆ ಪೂರೈಕೆ ಕುರಿತು ಅಧಿಕಾರಿಗಳ ಸಭೆ: ರೈತರಿಗೆ ಬೇಡಿಕೆಯಾನುಸಾರ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಿ- ಸಚಿವ ಶರಣಪ್ರಕಾಶ ಪಾಟೀಲ್

Image
ಅತಿವೃಷ್ಟಿ: ಬೀಜ, ರಸಗೊಬ್ಬರ ದಾಸ್ತಾನು ಬೇಡಿಕೆ ಪೂರೈಕೆ ಕುರಿತು ಅಧಿಕಾರಿಗಳ ಸಭೆ:                            ರೈತರಿಗೆ ಬೇಡಿಕೆಯಾನುಸಾರ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಿ- ಸಚಿವ ಶರಣಪ್ರಕಾಶ ಪಾಟೀಲ್ ರಾಯಚೂರು,ಜು.30- ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಬೇಡಿಕೆಯಾನುಸಾರ ಪೂರೈಕೆ ಮಾಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಮತ್ತು ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದoತೆ ನೋಡಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಆರ್.ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರು ಜು.30ರ(ಭಾನುವಾರ) ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅತಿವೃಷ್ಟಿ ಮತ್ತು ಬೀಜ ಮತ್ತು ರಸಗೊಬ್ಬರ ದಾಸ್ತಾನು ಬೇಡಿಕೆ ಪೂರೈಕೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮುಂಗಾರು ತಡವಾಗಿ ಆರಂಭವಾಗಿದ್ದು, ಇದೀಗ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ರೈತರ ಬೆಳೆಗಳಿಗೆ ಹಾನಿ ಉಂಟಾಗುವ ಸಾಧ್ಯತೆಗಳಿರುವುದರಿಂದ ಅಧಿಕಾರಿಗಳು ಸಮಿಕ್ಷೆ ನಡೆಸಿ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದರು. ...

ನಗರದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ: ಪತ್ರಕರ್ತರು ಸಂಕಷ್ಟದಲ್ಲಿಯೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹ- ಬೋಸರಾಜು

Image
  ನಗರದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ: ಪತ್ರಕರ್ತರು ಸಂಕಷ್ಟದಲ್ಲಿಯೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹ- ಬೋಸರಾಜು  ರಾಯಚೂರು,ಜು.30- ಪತ್ರಕರ್ತರು ಸಂಕಷ್ಟದಲ್ಲಿಯೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹವೆಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು  ಅಭಿಪ್ರಾಯ ಪಟ್ಟರು.     ಅವರಿಂದು   ನಗರದ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ವತಿಯಿಂದ  ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.        ಪ್ರಾಮಾಣಿಕ ಪತ್ರಕರ್ತರು ಇಂದಿಗೂ ಸಾಕಷ್ಟು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರನ್ನು ವ್ಯವಸ್ಥೆ ಕಟ್ಟಿ ಹಾಕುತ್ತಿದೆ. ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವಲ್ಲಿ ಮಾಧ್ಯಮಗಳ ಪಾತ್ರ ಮುಖ್ಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಉದ್ಯಮವಾಗಿ ಮಾರ್ಪಟ್ಟಿದ್ದು, ಪತ್ರಕರ್ತ ಕಾರ್ಯವೈಖರಿಗೆ ಅಡ್ಡಿ ಉಂಟು ಮಾಡುತ್ತಿದೆ ಎಂದರು. ಮಾಧ್ಯಮ ಕ್ಷೇತ್ರ ಉದ್ಯಮವಾಗಿ ಬದಲಾಗಿದ್ದು, ನಿಷ್ಠಾವಂತ ಪತ್ರಕರ್ತರ ಕೈಗಳನ್ನು ಕಟ್ಟಿ ಹಾಕಿದಂತಾಗಿದೆ....

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ, ವಿದ್ಯಾನಿಧಿ ವಿತರಣೆ: ಬ್ರಾಹ್ಮಣರು ತಮ್ಮ ಸ್ವಸಾಮರ್ಥ್ಯದ ಮೇಲೆ ಮುಖ್ಯ ವಾಹಿನಿಗೆ ಬರುವವರಾಗಿದ್ದಾರೆ- ಅಶೋಕ ಹಾರನಹಳ್ಳಿ

Image
  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ, ವಿದ್ಯಾನಿಧಿ ವಿತರಣೆ: ಬ್ರಾಹ್ಮಣರು ತಮ್ಮ ಸ್ವಸಾಮರ್ಥ್ಯದ ಮೇಲೆ ಮುಖ್ಯ ವಾಹಿನಿಗೆ ಬರುವವರಾಗಿದ್ದಾರೆ- ಅಶೋಕ ಹಾರನಹಳ್ಳಿ ರಾಯಚೂರು,ಜು.30-ಬ್ರಾಹ್ಮಣರು ತಮ್ಮ ಸ್ವ ಸಾಮರ್ಥ್ಯದ ಮೇಲೆ ಮುಖ್ಯ ವಾಹಿನಿಗೆ ಬರುತ್ತಾರೆ ಸಮಾಜದಲ್ಲಿ ಬ್ರಾಹ್ಮಣರಿಗೆ ಉತ್ತಮ ಸ್ಥಾನವಿದ್ದು ಅದನ್ನು ನಾವು ಕಾಪಾಡಿಕೊಂಡು ಹೋಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು. ಅವರಿಂದು ನಗರದ ಜವಾಹರನಗರ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾನಿಧಿ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬ್ರಾಹ್ಮಣರು ಈ ಹಿಂದೆ ಕೃಷಿ ಅವಲಂಬಿತರಾಗಿದ್ದರು ಕಾಲಾನುಕ್ರಮೇಣ ಅವರು ಕೃಷಿಯಿಂದ ದೂರವಾಗಿ ವಿವಿಧ ವೃತ್ತಿಗಳನ್ನು ಆಯ್ದುಕೊಂಡರು ಸರ್ಕಾರಿ ನೌಕರಿಯನ್ನು ಕೆಲವರು ಮಾಡಿದರು ಬಹುತೇಕರು ಸರ್ಕಾರಿ ನೌಕರಿಗಳಿಂದ ವಂಚಿತರಾದರು ಎಂದ ಅವರು ಬ್ರಾಹ್ಮಣರು ಅನೇಕ ಸುಪ್ರಸಿದ್ದ ವೈದ್ಯರು, ವಕೀಲರು, ಉದ್ಯಮಿಗಳು, ಲೆಕ್ಕಪರಿಶೋಧಕರು ಮುಂತಾದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬಂದರು ಎಂದರು. ಇತ್ತೀಚೆಗೆ ಬ್ರಾಹ್ಮಣ ಮಹಾಸಭಾದಿಂದ ಕಾನೂನು ಘಟಕ ಸ್ಥಾಪಿಸಿದ್ದೇವೆ ಕಾರಣ ಬ್ರಾಹ್...

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಜಿಲ್ಲಾ ಘಟಕದಿಂದ: ಜು.30 ರಂದು ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಸಮಾರಂಭ -ಡಿ.ಕೆ.ಮುರಳೀಧರ್

Image
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಜಿಲ್ಲಾ ಘಟಕದಿಂದ:              ಜು.30 ರಂದು  ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ - ಡಿ.ಕೆ.ಮುರಳೀಧರ್                          ರಾಯಚೂರು,ಜು.29- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಜಿಲ್ಲಾ ಘಟಕದಿಂದ ಜುಲೈ 30 ರಂದು ನಗರದ ಜವಾಹರ್ ನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10 ಗಂಟೆಗೆ  ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಸಮಾಜದ ಪ್ರತಿಭಾವಂತ ಆರ್ಥಿಕ ಅಶಕ್ತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಜಿಲ್ಲಾ ಘಟಕದ ಪ್ರದಾನ ಸಂಚಾಲಕ ಡಿ.ಕೆ ಮುರಳೀಧರ್ ಹೇಳಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರು ವಹಿಸಲಿದ್ದು , ಖ್ಯಾತ ಆದ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ , ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ  ಸಚಿವರಾದ ಎನ್.ಎಸ್. ಬೋಸರಾಜು, ಸಂಸದರಾದ ರಾಜಾಅಮರೇಶ್ವರ್ ನಾಯಕ್, ...

ಕಾಡ್ಲೂರು ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಶ್ರೀಪ್ರಾಣದೇವರ ದೇವಸ್ಥಾನ ಜಲಾವೃತ

Image
ಕಾಡ್ಲೂರು ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಶ್ರೀಪ್ರಾಣದೇವರ ದೇವಸ್ಥಾನ ಜಲಾವೃತ    ರಾಯಚೂರು,ಜು.29- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಙಾ ನದಿ ತೀರದ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಶ್ರೀಪ್ರಾಣದೇವರ ದೇವಸ್ಥಾನ ಜಲಾವೃತವಾಗಿದೆ.                               ಕೃಷ್ಣಾನದಿಗೆ ನಾರಾಯಣಪೂರು ಜಲಾಶಯದಿಂದ 1.5ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಹಿನ್ನಲೆಯಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಅಧಿಕವಾಗಿರುವದರಿಂದ ದೇವಸ್ಥಾನ ಜಲಾವೃತವಾಗಿದೆ. ನಿರಂತರ ಮಳೆಯಿಂದ  ಜಲಾಶಯದಲ್ಲಿ ಒಳ ಹರಿವು ಹೆಚ್ಚಳದಿಂದ ನದಿಗೆ ನೀರು ಬಿಟ್ಟಿದ್ದರಿಂದ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಳೆ ಮುಂದುವರೆದಲ್ಲಿ ದೇವಸ್ಥಾನ ಮುಳುಗಡೆಯಾಗುವ ಸಾಧ್ಯತೆಯಿದೆ. ಅಧಿಕ ಮಾಸ ಹಿನ್ನೆಲೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇದರಿಂದ ಅನಾನುಕೂಲವಾಗಿದೆ.

ಶ್ರೀನಿವಾಸ್ ಇನಾಂದಾರ್ ರವರಿಗೆ ಕೆಪಿಎ ಛಾಯಾಭೂಷಣ ಪ್ರಶಸ್ತಿ

Image
     ಶ್ರೀನಿವಾಸ್ ಇನಾಂದಾರ್ ರವರಿಗೆ  ಕೆಪಿಎ ಛಾಯಾಭೂಷಣ ಪ್ರಶಸ್ತಿ         ರಾಯಚೂರು, ಜು.28-ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನೇತೃತ್ವದಲ್ಲಿ 185 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ "ಕೆಪಿಎ ಛಾಯಾಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭ"ವನ್ನು ಆ.19ರಂದು ಹಮ್ಮಿಕೊಳ್ಳಲಾಗಿದೆ.                                              ಈ ಸಮಾರಂಭದಲ್ಲಿ ಕೆಪಿಎ ಮಾಜಿ ನಿರ್ದೇಶಕರು ಹಾಗೂ ಪತ್ರಿಕಾ ಛಾಯಾಗ್ರಾಹಕರಾಗಿರುವ  ಶ್ರೀನಿವಾಸ್ ಇನಾಂದಾರ್ ರವರಿಗೆ ಛಾಯಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕೆ ಸಂಪತ್ ಕುಮಾರ್ ಮಾಜಿ ಕೆಪಿಎ ನಿರ್ದೇಶಕರು, ಡಿ.ವಿಜಯರಾಘವನ್  ಮಾಜಿ ಕೆಪಿಎ ನಿರ್ದೇಶಕರು, ಜಿ.ಕೃಷ್ಣ  ಕೋಲಾರ ಜಿಲ್ಲಾಧ್ಯಕ್ಷರು, ಭಕ್ತವತ್ಸಲ ತುಮಕೂರು ಜಿಲ್ಲಾಧ್ಯಕ್ಷರು, ಇವರಿಗೂ ಕೆಪಿಎ ಛಾಯಾಭೂಷಣ ಪ್ರಶಸ್ತಿ ಪ್ರದಾನ ನಡೆಯಲಿದೆ  ನಾಡಿನ ಸಮಸ್ತ ಛಾಯಾಗ್ರಾಹಕರು, ಅಭಿಮಾನಿಗಳು, ಬಂಧು ಮಿತ್ರರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸುತ್ತಿದ್ದೇವೆ. ದಿನಾಂಕ : 19 ಆಗಸ್ಟ್‌ 2023 ಸ್ಥಳ : ಅಖಿಲ ಭಾರತ ವೀರಶೈವ ಮಹಾಸಭಾ ಸಭಾಂಗಣ, ಬೆಂಗಳೂರು. *ನಾಡಿನ ಸಮಸ್ತ ಛಾಯಾಬಂಧುಗಳಿಗೆ...

ಶ್ರೀನಿವಾಸ್ ಇನಾಂದಾರ್ ರವರಿಗೆ ಕೆಪಿಎ ಛಾಯಾಭೂಷಣ ಪ್ರಶಸ್ತಿ

Image
    ಶ್ರೀನಿವಾಸ್ ಇನಾಂದಾರ್ ರವರಿಗೆ  ಕೆಪಿಎ ಛಾಯಾಭೂಷಣ ಪ್ರಶಸ್ತಿ         ರಾಯಚೂರು, ಜು.28-ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನೇತೃತ್ವದಲ್ಲಿ 185 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ "ಕೆಪಿಎ ಛಾಯಾಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭ"ವನ್ನು ಆ.19ರಂದು ಹಮ್ಮಿಕೊಳ್ಳಲಾಗಿದೆ.                                              ಈ ಸಮಾರಂಭದಲ್ಲಿ ಕೆಪಿಎ ಮಾಜಿ ನಿರ್ದೇಶಕರು ಹಾಗೂ ಪತ್ರಿಕಾ ಛಾಯಾಗ್ರಾಹಕರಾಗಿರುವ  ಶ್ರೀನಿವಾಸ್ ಇನಾಂದಾರ್ ರವರಿಗೆ ಛಾಯಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕೆ ಸಂಪತ್ ಕುಮಾರ್ ಮಾಜಿ ಕೆಪಿಎ ನಿರ್ದೇಶಕರು, ಡಿ.ವಿಜಯರಾಘವನ್  ಮಾಜಿ ಕೆಪಿಎ ನಿರ್ದೇಶಕರು, ಜಿ.ಕೃಷ್ಣ  ಕೋಲಾರ ಜಿಲ್ಲಾಧ್ಯಕ್ಷರು, ಭಕ್ತವತ್ಸಲ ತುಮಕೂರು ಜಿಲ್ಲಾಧ್ಯಕ್ಷರು, ಇವರಿಗೂ ಕೆಪಿಎ ಛಾಯಾಭೂಷಣ ಪ್ರಶಸ್ತಿ ಪ್ರದಾನ ನಡೆಯಲಿದೆ  ನಾಡಿನ ಸಮಸ್ತ ಛಾಯಾಗ್ರಾಹಕರು, ಅಭಿಮಾನಿಗಳು, ಬಂಧು ಮಿತ್ರರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸುತ್ತಿದ್ದೇವೆ. ದಿನಾಂಕ : 19 ಆಗಸ್ಟ್‌ 2023 ಸ್ಥಳ : ಅಖಿಲ ಭಾರತ ವೀರಶೈವ ಮಹಾಸಭಾ ಸಭಾಂಗಣ, ಬೆಂಗಳೂರು. *ನಾಡಿನ ಸಮಸ್ತ ಛಾಯಾಬಂಧುಗಳಿಗೆ ಆತ್ಮೀ...

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪದವಿ ಮತ್ತು ಚಿನ್ನದ ಪದಕಗಳ ಪ್ರದಾನ: ಮುಂದಿನ ದಿನಗಳಳ್ಲಿ ಭಾರತ ವಿಶ್ವದ ಮೂರನೆ ಆರ್ಥಿಕ ರಾಷ್ಟ್ರ ಗಳ ಸಾಲಿನಲ್ಲಿ- ಥಾವರಚಂದ್ ಗೆಹ್ಲೋಟ್

Image
  ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪದವಿ ಮತ್ತು ಚಿನ್ನದ ಪದಕಗಳ ಪ್ರದಾನ: ಮುಂದಿನ ದಿನಗಳಳ್ಲಿ ಭಾರತ ವಿಶ್ವದ ಮೂರನೆ ಆರ್ಥಿಕ ರಾಷ್ಟ್ರ ಗಳ ಸಾಲಿನಲ್ಲಿ- ಥಾವರಚಂದ್ ಗೆಹ್ಲೋಟ್ ರಾಯಚೂರು,ಜು.೨೮-ಸದ್ಯ ನಮ್ಮ ದೇಶ ವಿಶ್ವದ ಆರ್ಥಿಕ ಸ್ಥಾನದಲ್ಲಿ ಐದನೇ ಸ್ಥಾನದಲ್ಲಿದೆ ಮುಂದಿನ ದಿನಗಳಲ್ಲಿ ನಮ್ಮ ಭಾರತ ವಿಶ್ವದ ಮೂರನೆ ಆರ್ಥಿಕ ರಾಷ್ಟ್ರ ಗಳ ಸಾಲಿನಲ್ಲಿ ನಿಲ್ಲಲಿದೆ ಎಂದು ರಾಜ್ಯಪಾಲರು ಮತ್ತು ಕೃಷಿ ವಿವಿ ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋಟ್ ಹೇಳಿದರು. ಅವರಿಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ೧೨ ನೇ ಘಟಿಕೋತ್ಸವದಲ್ಲಿ ಪಾಳ್ಗೊಂಡು ವಿದ್ಯಾರ್ಥಿಗಳಿಗೆ ಪದವಿ ಮತ್ತು ಚಿನ್ನದ ಪದಕಗಳನ್ನು ಪ್ರದಾನ ಮಾಡಿ ಮಾತನಾಡಿದರು. ಕನ್ನಡದಲ್ಲಿ ಮಾತು ಪ್ರಾರಂಬಿಸಿದ ಅವರು ಎಲ್ಲರಿಗೂ ನಮಸ್ಕಾರ ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಹೇಳಿ ಮಾತು ಮುಂದುವರಿಸಿದ ಅವರು ವಿಶ್ವವಿದ್ಯಾಲಯಗಳು ದೇಶವನ್ನು ಮುನ್ನಡೆಸಲು ಪ್ರಮುಖ ಪಾತ್ರವಹಿಸುತ್ತವೆ ಕೃಷಿ ವಿವಿ ಸಹ ಅಂತಹ ಮಹತ್ತರ ಕಾರ್ಯ ಮಾಡುತ್ತಿದೆ ಎಂದ ಅವರು ರಾಯಚೂರು ಕೃಷಿ ವಿವಿ ತನ್ನ ೧೨ ನೇ ಘಟಿಕೋತ್ಸವ ಆಚರಿಸುತ್ತಿದೆ ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವೆಂದರು. ಇಂದಿನ ಈ ಸಮಾರಂಭದಲ್ಲಿ ಅನೇಕರು ಪದವಿ ಪಡೆದಿದ್ದಾರೆ ಸುಮಾರು ೫೨ ಚಿನ್ನದ ಪದಕಗಳ ಪ್ರದಾನ ನಡೆದಿದೆ ಇದು ಸಂತಸದ ವಿಷಯವೆಂದ ಅವರು ನೀವೆಲ್ಲರೂ ಇಂದು ಪದವಿ, ಸ್ನಾತಕೋತ್ತರ ಪದವ...

ವಿಶಿಷ್ಟ ಚಿತ್ರಕಥೆ, ಸಂಗೀತ, ಸಾಹಸಮಯ ದೃಶ್ಯಗಳಿರುವ ರಕ್ತಾಕ್ಷ ಚಿತ್ರ ಅಕ್ಟೋಬರ್‌ಗೆ ತೆರೆಗೆ -ರೋಹಿತ್

Image
  ವಿಶಿಷ್ಟ ಚಿತ್ರಕಥೆ, ಸಂಗೀತ, ಸಾಹಸಮಯ ದೃಶ್ಯಗಳಿರುವ ರಕ್ತಾಕ್ಷ ಚಿತ್ರ ಅಕ್ಟೋಬರ್‌ಗೆ ತೆರೆಗೆ -ರೋಹಿತ್ ರಾಯಚೂರು,ಜು.೨೭-ಸಾಯಿ ಪ್ರೋಡಕ್ಷನ್ಸ್ ಬ್ಯಾನರ್ ಅಡಿ ವಿಶಿಷ್ಟ ಚಿತ್ರ ಕಥೆ, ಸಂಗೀತ ಮತ್ತು ಸಾಹಸಮಯ ದೃಶ್ಯಗಳುಳ್ಳ ರಕ್ತಾಕ್ಷ ಚಿತ್ರವು ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ನಾಯಕ ನಟ ರೋಹಿತ್ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಾನು ಮೂಲತಃ ಮುದಗಲ್ ಪಟ್ಟಣದವನಾಗಿದ್ದು ಚಿತ್ರರಂಗದಲ್ಲಿ ವಿಶಿಷ್ಟ ಸಾಧನೆ ಮಾಡಬೇಕೆನ್ನುವ ದೃಷ್ಟಿಯಿಂದ ಈ ರಂಗದಲ್ಲಿ ತೊಡಗಿಸಿಕೊಂಡಿದ್ದು ನನ್ನ ಮೊದಲ ಚಿತ್ರವಾದ ರಕ್ತಾಕ್ಷ ಚಿತ್ರವನ್ನು ನಾನೆ ನಿರ್ಮಿಸಿದ್ದು ನಾಯಕ ನಟನಾಗಿ ನಟಸಿದ್ದು ಚಿತ್ರಕ್ಕೆ ಎಸ್.ಎನ್.ವಾಸುದೇವ ನಿರ್ದೇಶನವಿದ್ದು, ಗೀತ ರಚನೆ ವಶಿಷ್ಠ ಸಿಂಹ ,ಸಂಗೀತವನ್ನು ಧೀರೇಂದ್ರ ದಾಸ್, ಸಾಹಸ ನಿರ್ದೇಶನವನ್ನು ಸ್ಟಂಟ್ ರವಿ ಮಾಡಿದ್ದಾರೆ ಎಂದ ಅವರು ಚಿತ್ರದಲ್ಲಿ ಅರ್ಚನಾ ಹಾಗೂ ಇತರ ಮೂವರು ನಾಯಕ ನಟಿಯರಿದ್ದು ಚಿತ್ರದಲ್ಲಿ ಎರೆಡು ಹಾಡುಗಳಿವೆ ಎಂದರು. ಚಿತ್ರಕ್ಕೆ ಸುಮಾರು  ಎರೆಡು ಕೋಟಿ ರೂ. ಬಂಡವಾಳ ಹೂಡಲಾಗಿದ್ದು ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರದ ಚಿತ್ರಿಕರಣ ಮಾಡಲಾಗಿದೆ ಎಂದ ಅವರು ಚಿತ್ರ ಪ್ರೇಮಿಗಳು ಚಿತ್ರ ವೀಕ್ಷಿಸಿ ಪ್ರೋತ್ಸಹಿಸಬೇಕೆಂದರು. ಈ ಸಂದರ್ಭದಲ್ಲಿ ಬದ್ರಿನಾರಾಯಣ, ಅಭಿವರ್ದನ, ಪ್ರಭು, ಬಸವರಾಜ,ಶಶಿ,ವಿಶ್ವ, ನಾರಾಯಣ ಇದ್ದರ...

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟರ‍್ಸ್ ಗಿಲ್ಡ್ ನಿಂದ ಜು.30 ರಂದು ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ- ಅರ್.ಗುರುನಾಥ

Image
  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು  ರಿಪೋರ್ಟರ‍್ಸ್  ಗಿಲ್ಡ್ ನಿಂದ ಜು.30 ರಂದು ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ-ಅರ್.ಗುರುನಾಥ ರಾಯಚೂರು,ಜು.೨೭-ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ರಾಯಚೂರು ರಿಪೋಟರ‍್ಸ್ ಗಿಲ್ಡ್ ವತಿಯಿಂದ ಜು.3೦ ರಂದು ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರನಾಥ ಹೇಳಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಕೆಯುಡ್ಬು÷್ಲಜೆ ಹಾಗೂ ಅರ್‌ಅರ್‌ಜಿ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ಪತ್ರಿಕಾ ದಿನಾಚರಣೆ ಮತ್ತು ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಹಾಗೂ ಪತ್ರಿಕಾ ಛಾಯಾಗ್ರಹಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ ಎಂದ ಅವರು  ಜು.3೦ ರಂದು ಬೆಳಿಗ್ಗೆ 11 ಗಂಟೆಗೆ ನಗರದ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ದಿನಾಚರಣೆ ಸಮಾರಂಭ ಆಯೋಜಿಸಲಾಗಿದ್ದು ಕಾರ್ಯಕ್ರಮ ಉದ್ಘಾಟನೆಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ನೆರವೇರಿಸಲಿದ್ದು , ಪ್ರಶಸ್ತಿ ಪ್ರದಾನವನ್ನು ವೈದ್ಯಕೀಯ ಶಿಕ್ಷಣ  ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ ಮಾಡಲಿದ್ದು, ಅತಿಥಿ ಉಪನ್ಯಾಸವನ್ನು ಮು...

ಭಾರಿ ಮಳೆ ಸಾಧ್ಯತೆ: ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.

Image
  ಭಾರಿ ಮಳೆ ಸಾಧ್ಯತೆ: ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.          ರಾಯಚೂರು,ಜು.27- ಭಾರಿ ಮಳೆ ಸಾಧ್ಯತೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಇಂದು ಜು.27 ಗುರುವಾರ  ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ತಿಳಿಸಿದ್ದಾರೆ.              ಹವಾಮಾನ ಇಲಾಖೆ ಮುನ್ಸೂಚನೆ ಅನ್ವಯ ನಾಳೆ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಪತ್ತು ನಿರ್ವಹಣೆ ಕಾಯ್ದೆಯಡಿ  ಜಿಲ್ಲೆಯಾದ್ಯಂತ ಒಂದು ದಿನ ರಜೆ ಘೋಷಿಸಲಾಗಿದೆ.

ಎಂ.ಈರಣ್ಣ ವೃತ್ತದ ಬಳಿ ತರಕಾರಿ ಮಾರಾಟಗಾರರ ಸ್ಥಳಾಂತರ ಕ್ರಮ ಸರಿಯಲ್ಲ: ನನ್ನ ವಿರುದ್ಧ ದುರುದ್ದೇಶದಿಂದ ಮಹಾವೀರ ಪ್ರಕರಣ ದಾಖಲಿಸಿದರೆ ಎದುರಿಸುತ್ತೇನೆ-ಜಲ್ದಾರ್

Image
  ಎಂ.ಈರಣ್ಣ ವೃತ್ತದ ಬಳಿ ತರಕಾರಿ ಮಾರಾಟಗಾರರ ಸ್ಥಳಾಂತರ ಕ್ರಮ ಸರಿಯಲ್ಲ: ನನ್ನ ವಿರುದ್ಧ ದುರುದ್ದೇಶದಿಂದ ಮಹಾವೀರ ಪ್ರಕರಣ ದಾಖಲಿಸಿದರೆ ಎದುರಿಸುತ್ತೇನೆ-ಜಲ್ದಾರ್ ರಾಯಚೂರು,ಜು.೨೬-ಕಳೆದ ನಾಲ್ಕು ವರ್ಷದಿಂದ ಎಂ.ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟ ಮಾಡಲಾಗುತ್ತಿದ್ದು ದಿಢಿರನೆ ಅವರನ್ನು ಸ್ಥಳಾಂತರ ಮಾಡಿರುವ ನಗರಸಭೆ ಕ್ರಮ ಸರಿಯಲ್ಲವೆಂದು  ಮುಖಂಡರಾದ ರವೀಂದ್ರ ಜಲ್ದಾರ್ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕರೋನಾ ಸಂದರ್ಭದಲ್ಲಿ ಎಂ.ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟಕ್ಕೆ ಜಿಲ್ಲಾಡಳಿತವೆ ಆಸ್ಪದ ಮಾಡಿಕೊಟ್ಟಿತ್ತು ಇದೀಗ ಏಕಾಏಕಿ ತೆರವು ಮಾಡಿರುವ ಹಿಂದೆ ರಾಜಕೀಯ ಅಡಗಿದೆ ಎಂದು ಅರೋಪಿಸಿದ ಅವರು ನಾಲ್ಕು ವರ್ಷದ ವರೆಗೆ ಇಲ್ಲದ ಸಮಸ್ಯೆ ದಿಡೀರನೆ ಹುಟ್ಟಿದ್ದು ಏಕೆ ಇಲ್ಲಿನ ತರಕಾರಿ ವ್ಯಾಪಾರದಿಂದ ಯಾರಿಗೂ ತೊಂದರೆಯಾಗುತ್ತಿದೆ ಎಂದು  ಯಾರು ದೂರು ನೀಡಿಲ್ಲ ಯಾವದೆ ಅಪಘಾತ ,ಅಹಿತಕರ ಘಟನೆ ನಡೆಯದೆ ಸ್ಥಾಳಾಂತರ ಮಾಡಿದ್ದು ಯಾರ ಕುಮ್ಮಕ್ಕಿನಿಂದ ಎಂದು ಪ್ರಶ್ನಿಸಿದರು. ನನ್ನ ವಿರುದ್ಧ ಉಸ್ಮಾನಿಯ ತರಕಾರಿ ಮಾರಾಟಗಾರರ ಕ್ಷೇಮಾಭಿಬೃದ್ದಿ ಸಂಘದ ಅಧ್ಯಕ್ಷರಾದ ಎನ್,ಮಹಾವೀರ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ನಾನು ನನ್ನ ರಾಜಕೀಯ ಜೀವನದಲ್ಲಿ ಯಾರ ವಿರುದ್ದವು ಕೀಳು ಭಾಷೆ ಬಳಿಸಿಲ್ಲ ಮತ್ತು ಕೋಮು ಪ್ರಚೋದನೆ ಮಾಡಿಲ್ಲವೆಂದ ಅವರು ನಾನು ಮೂಲತಃ ಗುತ್ತಿಗೆದಾರರಾಗಿದ್ದು ನಾನು ನಿಯಮಿತವಾಗಿ ತೆರಿಗ...