ಅಯೋಧ್ಯೆಯ ಶ್ರೀ ರಾಮನ ದೇವಸ್ಥಾನದ ವಿದ್ಯುತ್ ದೀಪಾಲಂಕಾರಕ್ಕೆ ಸುಬುಧೇಂದ್ರ ತೀರ್ಥರು ಚಾಲನೆ

 


ಅಯೋಧ್ಯೆಯ ಶ್ರೀ ರಾಮನ ದೇವಸ್ಥಾನದ ವಿದ್ಯುತ್ ದೀಪಾಲಂಕಾರಕ್ಕೆ  ಸುಬುಧೇಂದ್ರ ತೀರ್ಥರು ಚಾಲನೆ  


 ರಾಯಚೂರು,ಡಿ.28- ಅಯೋಧ್ಯೆಯ ಶ್ರೀ ರಾಮನ ದೇವಸ್ಥಾನ ಉದ್ಘಾಟನೆಗೆ ಅಣಿಯಾಗುತ್ತಿದ್ದು, ದೇವಸ್ಥಾನದ ವಿದ್ಯುತ್  ಸಂಪರ್ಕ ಹಾಗೂ ವಿದ್ಯುತ್ ಅಲಂಕಾರಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಚಾಲನೆ  ನೀಡಿದರು.

 ನಂತರ ಮಾತನಾಡಿ, ಪ್ರಭು ಶ್ರೀರಾಮನ ಜನ್ಮಸ್ಥಳ ಹಾಗೂ ದೇಶದ ಪ್ರಮುಖ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಒಂದಾದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿ ಉದ್ಘಾಟನೆಗೆ ಅಣಿಯಾಗುತ್ತಿದ್ದು, ಹಿಂದೂಗಳ ಬಹುದಿನಗಳ ಕನಸು ನನಸಾಗುತ್ತಿದೆ. ಇದರ ಹಿಂದೆ ರಾಮ ಮಂದಿರ ನಿರ್ಮಾಣ ಸೇವಾ ಟ್ರಸ್ಟ್  ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದು, ಮಂದಿರದ ವಿದ್ಯುತ್ ದೀಪಾಲಂಕಾರ ಕಾರ್ಯ ನಮ್ಮ ರಾಜ್ಯದವರು ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್