ಮಂತ್ರಾಲಯದಲ್ಲಿ ಅಂತರಾಷ್ಟ್ರೀಯ ದಾಖಲೆಗಾಗಿ ಏಕಕಾಲದಲ್ಲಿ 350  ನೃತ್ಯ ಕಲಾವಿದರಿಂದ ನಾಮ ರಾಮ ನಾಮ ನೃತ್ಯ ಪ್ರದರ್ಶನ


ರಾಯಚೂರು,ಆ.26- ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಮಂತ್ರಾಲಯ ಹಾಗೂ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಚನ್ನರಾಯಪಟ್ಟಣ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರುಗಳ ಆಶೀರ್ವಾದದೊಂದಿಗೆ ಆಗಸ್ಟ್ 25ರಂದು ಭಾನುವಾರ ಸಂಜೆ 5:00 ಗಂಟೆಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಮುಂಭಾಗದಲ್ಲಿರುವ ಕಾರಿಡಾರ್ ನಲ್ಲಿ ವಿಶ್ವದಾದ್ಯಂತ 350ಕ್ಕೂ ಹೆಚ್ಚು ನೃತ್ಯ


ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ 15 ನಿಮಿಷಗಳ ಕಾಲ ಶ್ರೀ ನಾಮ ರಾಮ ನಾಮ ಗೀತೆಗೆ ಪಕ್ಕ ವಾದ್ಯದೊಂದಿಗೆ ಏಕಕಾಲದಲ್ಲಿ ನೃತ್ಯ ಮಾಡುವ ಮೂಲಕ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಅಕಾಡೆಮಿ ಮತ್ತು ಮಕ್ಕಳು ಹಾಗೂ ಮಠದ ಹೆಸರನ್ನು ಸೇರಿಸುವ ಹಿನ್ನೆಲೆಯಲ್ಲಿ ಜಪಾನ್ ಜರ್ಮನ್ ಇಂಡೋನೇಷಿಯಾ ಸೇರಿದಂತೆ ಭಾರತ ದೇಶದ ಹಲವಾರು ಭಾಗಗಳಿಂದ ಆಗಮಿಸಿದ ವೃಕ್ಷ ಕಲಾವಿದರಿಗೆ ರಾಯರ ದರ್ಶನ ಮಾಡಿಸುವ ಮೂಲಕ  ದೃಶ್ಯ ಸಂಭ್ರಮವನ್ನು ರಾಯರ ಪಾದದಲ್ಲಿ ಸಮರ್ಪಣೆ ಮಾಡುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು  .     

  ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಡಾ.ಸುಬುಧೇಂದ್ರ ತೀರ್ಥ  ಶ್ರೀಪಾದಂಗಳವರು ಉದ್ಘಾಟನೆ ಮಾಡಿದರು.

ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಮುಖ್ಯ ವ್ಯವಸ್ಥಾಪಕರಾದ ಅರವಿಂದರ್ ಸಿಂಗ್ ಹಾಗೂ ಪಕ್ಕ ವಾದ್ಯದಲ್ಲಿ ಶ್ರೀಮತಿ ಅಕ್ಷತಾ, ಶಶಿಕಲ, ಭಾಗ್ಯಲಕ್ಷ್ಮೀ, ಭಾರತಿ ಬಾಬು,ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಡಾ. ಸ್ವಾತಿ ಪಿ ಭಾರದ್ವಾಜ್ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್