Posts

Showing posts from January, 2026
Image
ಎ.ವಸಂತ ಕುಮಾರ್ ರಿಂದ ನಾಮ ಫಲಕ ಉಧ್ಘಾಟನೆ:    ಶೀಘ್ರದಲ್ಲಿ ಅನುದಾನ ಒದಗಿಸುವ ಭರವಸೆ.                ಜಯ ಧ್ವಜ ನ್ಯೂಸ್ , ರಾಯಚೂರು, ಫೆ.1- ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎ.ವಸಂತಕುಮಾರ ಅವರು ಇಂದು ಶ್ರೀ ನಂದೀಶ್ವರ ಶ್ರೀ ಸಾಯಿಬಾಬಾ ಸೇವಾ ಟ್ರಸ್ಟ್ ದೇವಸ್ಥಾನ  ಆವರಣದ ಹೊರಗಡೆ ಕಲ್ಯಾಣ ಮಂಟಪ ನಿರ್ಮಾಣ ಮಾಡಲು ನಿಗದಿಗೊಳಿಸಲಾದ ಸ್ಥಳದ ನಾಮಪಲಕ ಉದ್ಘಾಟಿಸಿದರು. ಕಲ್ಯಾಣ ಮಂಟಪ ನಿರ್ಮಾಣ ಮಾಡಲು ದೇವಸ್ಥಾನದ ಆಧೀನದಲ್ಲಿ 80*120 ಅಡಿ ಸ್ಥಳವನ್ನು ಮೀಸಲಿಡಲಾಗಿದ್ದು, ದೇವಸ್ಥಾನದ ಸ್ವಾಮಿಜಿಗಳು ಆದಷ್ಟು ಶೀಘ್ರದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲು 2.00ಕೋ ರೂ ಅನುದಾನ‌ ಒದಗಿಸಬೇಕೆಂದು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ವಿಧಾನ‌ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ಮುಂದಿನ ಎರಡು ಮೂರು ತಿಂಗಳಲ್ಲಿ ಅನುದಾನ‌ ಒದಗಿಸುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ನಾಯಕರಾದ ಈಶಪ್ಪ, ಕೆಪಿಸಿಸಿ ವಕ್ತಾರರಾದ ಡಾ.ರಝಾಕ ಉಸ್ತಾದ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಡಿ.ಕೆ. ಮುರಳಿ ಯಾದವ, ರಮೇಶ‌ರೋಸ್ಲಿ, ಜೆ.ಸತ್ಯನಾಥ, ಮೊಹಮ್ಮದ ರಫಿ ಹಾಗೂ ಇತರರು ಉಪಸ್ಥಿತರಿದ್ದರು.
Image
  ಹಿರಿಯ ತ್ರಿಭಾಷಾ ಸಾಹಿತಿ ವಿ.ಎಸ್.ಕಾಂತನವರ ನಿಧನ   ಜಯ ಧ್ವಜ ನ್ಯೂಸ್ ರಾಯಚೂರು,ಜ.31- ದಾಸರ ನಾಡು ಶರಣರ ಬೀಡು ರಾಯಚೂರಿನ ಹಿರಿಯ ಸಾಹಿತಿ ವಿ.ಎಸ್.ಕಾಂತನವರ ( 92 )  ಶನಿವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ತ್ರಿಭಾಷಾ ಸಾಹಿತಿಗಳಾಗಿದ್ದ ಅವರು  ಸಾಹಿತ್ಯ ಕ್ಷೇತ್ರದಲ್ಲಿ ಹತ್ತಾರು ಕೃತಿಗಳನ್ನು ರಚಿಸಿದ್ದರು, ಸಂಸ್ಕೃತ ಪಂಡಿತರೂ ಆಗಿದ್ದ ಕಾಂತನವರು ಸದಾ ಉತ್ಸಾಹದಿಂದ ಗಂಟೆಗಟ್ಟಲೆ ಸಾಹಿತ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಅವರ ಅಗಲಿಕೆ ಸಾಹಿತ್ಯ ಕ್ಷೇತ್ರದಲ್ಲಿ ತುಂಬಲಾರದ ನಷ್ಟವಾಗಿದೆ. ಅವರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ಭಾನುವಾರ ನಡೆಯುತ್ತದೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಇವರ ನಿಧನಕ್ಕೆ ಸಾಹಿತಿ , ಕವಿ ಪಲುಗುಲ ನಾಗರಾಜ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
Image
  ಮಾಹಿತಿ ಕೊಡದ ಅಧಿಕಾರಿಗಳಿಗೆ ದಂಡವಿಧಿಸಿ ಬಿಸಿ ಮುಟ್ಟಿಸಿದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ.ವೆಂಕಟ ಸಿಂಗ್  ಜಯ ಧ್ವಜ ನ್ಯೂಸ್  ,ರಾಯಚೂರು ಜ. 31 - ಮಾಹಿತಿ ನೀಡಲು ನಿರ್ಲಕ್ಷö್ಯ ಮಾಡಿದ್ದಕ್ಕೆ ಮೂರು ಜನ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದಿಂದ ದಂಡ ವಿಧಿಸಿ ಆದೇಶ ಮಾಡಲಾಗಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ.ವೆಂಕಟ್ ಸಿಂಗ್ ಅವರು ಹೇಳಿದರು. ಕಲಬುರಗಿಯ ತಮ್ಮ ಪೀಠದ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗುರುಮೂರ್ತಿ ಎನ್ನುವರು 17.11.2022 ರಂದು ಮಾಹಿತಿ ಕೋರಿ ಸಲ್ಲಿಸಿದ 6(1) ಅರ್ಜಿಗೆ ಮಾಹಿತಿ ನೀಡದ ಕಾರಣ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮ ಪಂಚಾಯತ ಅಧಿಕಾರಿ ನಾಗಭೂಷಣ ಅವರಿಗೆ 25,000 ರೂ. ದಂಡ ವಿಧಿಸಿ 23.01.2026 ರಂದು ಆದೇಶ ಮಾಡಲಾಗಿದೆ ಎಂದು ತಿಳಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ಆಯೋಗವು, 15ನೇ ಹಣಕಾಸು ಆಯೋಗದ ಕುರಿತು ಕೋರಿದ ಮಾಹಿತಿ ನೀಡಬೇಕು ಎಂದು 06.10.2025 ರಂದು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಎಚ್ಚರಿಕೆ ಆದೇಶ ನೀಡಲಾಗಿತ್ತು. ಆದರೂ ಅವರು ಮಾಹಿತಿ ನೀಡಲು ನಿರ್ಲಕ್ಷ ತೋರಿದ್ದರಿಂದಾಗಿ 25,000 ರೂ. ಸಾವಿರ ದಂದ ವಿಧಿಸಲಾಗಿದೆ ಎಂದರು. ಜಲಾಲ ಎನ್ನುವರು ಸಹ 15ನೇ ಹಣಕಾಸು ಆಯೋಗದ ಅನುದಾನ ಕುರಿತು ಸುಂಕೇಶ್ವರ...
Image
  ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಹೆಲ್ಮೆಟ್ ವಿತರಣೆ : ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಪಾಲಿಸಬೇಕು- ಜಿಲ್ಲಾಧಿಕಾರಿ ನಿತೀಶ್ ಕೆ ಸಲಹೆ ಜಯ ಧ್ವಜ ನ್ಯೂಸ್ ,ರಾಯಚೂರು ಜ.31 -  ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ರಾಯಚೂರು, ಎನ್‌ಹೆಚ್‌ಎಐ ಪ್ರಾದೇಶಿಕ ಕಚೇರಿ ಬೆಂಗಳೂರು ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ  ರಸ್ತೆ ಸುರಕ್ಷತಾ ಮಾಸ-2026ರ ಅಂಗವಾಗಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿನೂತನ ಜಾಗೃತಿ ಅಭಿಯಾನ ನಡೆಯಿತು. ಈ ಕಾರ್ಯಕ್ರಮದ ಭಾಗವಾಗಿ  ಇಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಯಚೂರಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಕಾರ್ಯಕ್ರಮದಲ್ಲಿ ಐಎಸ್‌ಐ ಗುರುತಿನ ಹೆಲ್ಮೆಟ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಪಾಲಿಸಬೇಕು ಮತ್ತು ಹೆಲ್ಮೆಟ್ ಧರಿಸುವ ಮಹತ್ವ ಅರಿಯಬೇಕು. ನ್ಯಾಷನಲ್ ಹೈವೇ ಕಡೆಯಿಂದ ನಮ್ಮ ಜಿಲ್ಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಹೆಲ್ಮೆಟ್ ಉಚಿತವಾಗಿ ನೀಡಲಾಗುತ್ತಿದ್ದು, ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕೆಂದರು. ಹೆಲ್ಮೆಟ್ ಧರಿಸದೇ ತಲೆಗೆ ಪೆಟ್ಟು ಬಿದ್...
Image
 ಫೆ.1 ರಂದು ಸಂಭ್ರಮದ  ವಿರಾಟ ಹಿಂದು ಸಮ್ಮೇಳನ  ಜಯ ಧ್ವಜ ನ್ಯೂಸ್ ,ರಾಯಚೂರು, ಜ.30 - ರಾಷ್ಟ್ರ , ಧರ್ಮ , ಸಂಸ್ಕೃತಿ , ಸಂಪ್ರದಾಯಗಳ ರಕ್ಷಣೆಗಾಗಿ ವಿರಾಟ ಹಿಂದೂ ಸಮ್ಮೇಳನವನ್ನು ಫೆ. 1, ಭಾನುವಾರದಂದು ಸಂಜೆ ನಗರದ ಎಲ್.ವಿ‌ಡಿ ಕಾಲೇಜು ಎದುರುಗಡೆಯ ಯಾದವ  ಸಂಘದ ಕೃಷ್ಣ ದೇವಸ್ಥಾನದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಭವ್ಯ ಶೋಭಾಯಾತ್ರೆಯು ಸಂಜೆ 5 ಗಂಟೆಗೆ ಯಾದವ್ ಸಂಘ ಮೈದಾನದಿಂದ ಪ್ರಾರಂಭವಾಗಿ  ಎಲ್.ವಿ.ಡಿ ಕಾಲೇಜು ರಸ್ತೆ, ತಿಮ್ಮಾಪುರ್ ಪೇಟ್ ರಸ್ತೆ, ಬಾಲಮಾರೆಮ್ಮ ದೇವಸ್ಥಾನದ ಮುಖಾಂತರ ಕರ್ನಾಟಕ ಸಂಘ, ವಾಸವಿ ವೃತ್ತ, ಕಣ್ಣ ವೃತ್ತ, ವಾಸವಿ ನಗರ ಬಸ್ ನಿಲ್ದಾಣದ ಮೂಲಕ ಜೋಡು ವೀರಾಂಜನೇಯ ದೇವಸ್ಥಾನ ಸಾವಿತ್ರಿ ಕಾಲೋನಿ, ಮಾಣಿಕ್ ಪ್ರಭು ದೇವಸ್ಥಾನದ ರಸ್ತೆ ಮೂಲಕ ಹಾದು ಪುನಃ ಶ್ರೀ ಕೃಷ್ಣ ದೇವಸ್ಥಾನ ಯಾದವ ಸಮಾಜದ ಮೈದಾನ ಸೇರುವುದು. ನಂತರ 6.30 ನಿಮಿಷಕ್ಕೆ, ಯಾದವ ಸಮಾಜ ಶ್ರೀ ಕೃಷ್ಣ ದೇವಸ್ಥಾನದ ಮೈದಾನದಲ್ಲಿ ಬಹಿರಂಗ ಸಮಾವೇಶ ಜರುಗಲಿದ್ದು ದಿವ್ಯ ಸಾನಿಧ್ಯವನ್ನು  ಷ.ಬ್ರ. ಶ್ರೀ  ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳು ಸೋಮವಾರಪೇಟೆ ಹಿರೇಮಠ ಇವರು ವಹಿಸಲಿದ್ದು ,  ಮುಖ್ಯ ಅತಿಥಿಗಳಾಗಿ  ಹಿರಿಯ ಸಾಹಿತಿಗಳು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ  ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಹಾಗೂ  ಮುಖ್ಯ ಭಾಷಣಕಾರರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ...
Image
  ಫೆ.1ರಂದು ರಾಯಚೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಪ್ರವಾಸ ಜಯ ಧ್ವಜ ನ್ಯೂಸ್ ,ರಾಯಚೂರು ಜ. 30-   ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಫೆ. 1 ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೊರಟು 11 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ 11.10ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಹೊರಟು 11.40ಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಂಡೊಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೆಲಿಪ್ಯಾಡ್ ಗೆ ಆಗಮಿಸಿ, ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್‌ನ ಶ್ರೀಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಶಾಖಾ ಮಠದಿಂದ ನಡೆಯುವ ಬ್ರಹ್ಮಲೀನರಾದ ಪರಮಪೂಜ್ಯ ಶ್ರೀಸಿದ್ದರಾಮನಂದಪುರಿ ಸ್ವಾಮೀಜಿಯವರ ಪುಣ್ಯಾರಾಧನೆ ಕಾರ್ಯಕ್ರಮ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಮಧ್ಯಾಹ್ನ 3.30ಕ್ಕೆ ತಿಂಥಣಿ ಬ್ರಿಜ್‌ನ ಶ್ರೀಕಾಗಿನೆಲೆ ಮಹಾಸಂಸ್ಥಾನದಿಂದ ನಿರ್ಗಮಿಸಿ ಸುರಪುರ ತಾಲೂಕಿನ ಬಂಡೊಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರದ ಹೆಲಿಪ್ಯಾಡನಿಂದ ನಿರ್ಗಮಿಸಿ ಕಲಬುರಗಿ ಜಿಲ್ಲೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Image
ಎಸ್ಪಿ, ಸಿಇಓ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಿಂದ ವಿಶೇಷ ಸಭೆ: ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಕಡಿವಾಣಕ್ಕೆ ಖಡಕ್ ಸೂಚನೆ ಜಯ ಧ್ವಜ ನ್ಯೂಸ್ , ರಾಯಚೂರು ಜ. 30: ದೇವದುರ್ಗ, ಸಿರವಾರ, ಮಾನವಿ, ಸಿಂಧನೂರ ಮತ್ತು ಲಿಂಗಸ್ಗೂರು  ತಾಲೂಕು ಸೇರಿದಂತೆ ಜಿಲ್ಲೆಯ ಯಾವುದೇ ಕಡೆಗಳಲ್ಲಿ ಅನಧಿಕೃತವಾಗಿ ಮರಳು ಸಾಗಣೆ ಕೂಡಲೇ ನಿಲ್ಲಬೇಕು. ಯಾವುದೇ ಕಡೆಗಳಲ್ಲಿ ರಾಜಾರೋಷವಾಗಿ ಮರಳುಗಾರಿಕೆ ಕಂಡು ಬಂದಲ್ಲಿ ಅದನ್ನು ಸಹಿಸಲಾಗುವುದಿಲ್ಲ. ಅವರು ಎಷ್ಟೇ ಪ್ರಭಾವಿಗಳಾಗಿರಲಿ, ಯಾರೇ ಇರಲಿ ಅಂತವರ ಮೇಲೆ ಮುಲಾಜಿಲ್ಲದೇ ಕ್ರಮ ಜರುಗಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಜಿಲ್ಲಾ ಟಾಸ್ಕ್ಪೋರ್ಸ ಸಮಿತಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರದ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಕಡಕ್ ಎಚ್ಚರಿಕೆ ನೀಡಿದರು. ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರದ ಸಮಿತಿಯ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ರಾಯಚೂರು ಜಿಲ್ಲೆಯ ದೇವದುರ್ಗ, ಮಾನವಿ ಸೇರಿದಂತೆ ಇನ್ನೀತರ ಕಡೆ ಅನಧೀಕೃತ ಮರಳು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದಕ್ಕೆ ಬ...
Image
  ರಾಯಚೂರು ಜಿಲ್ಲಾ ಉತ್ಸವ ಪ್ರಯುಕ್ತ ಫೆ.2 ಮತ್ತು 3 ರಂದು ಮಕ್ಕಳ ಹಬ್ಬ:                                                                                         ಜಾದೂ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ- ಕೃಷ್ಣ ಶಾವಂತಗೇರಿ                                                                                                                                                                ...
Image
  ಸತ್ಯನಾಥ ಅಗ್ರಹಾರ : ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥರಿಂದ ಜ್ಞಾನಸತ್ರ ಉದ್ಘಾಟನೆ                                                   ಜಯ ಧ್ವಜ ನ್ಯೂಸ್ , ರಾಯಚೂರು, ಜ.28-                                                                ನಗರದ  ಸತ್ಯನಾಥ ಭಜನಾ ಮಂಡಳಿಯ 30 ನೇ ವರ್ಷದ ಜ್ಞಾನಸತ್ರ ಕಾರ್ಯಕ್ರಮದ ಉದ್ಘಾಟನೆಯನ್ನು ಇಂದು  ಪರಮಪೂಜ್ಯ ಶ್ರೀ ವಿಶ್ವ ಪ್ರಿಯ ತೀರ್ಥ ಶ್ರೀಪಾದಂಗಳವರು, ಅದಮಾರುಮಠ ಉಡುಪಿ ಇವರು ಜ್ಯೋತಿ ಪ್ರಜ್ವಲನ ಮಾಡುವ ಮೂಲಕ ಉದ್ಘಾಟಿಸಿದರು.    ನಂತರ ಪಂ. ಶ್ರೀ ವಾದಿರಾಜಾಚಾರ್ಯ ಮಠದ್ ಧಾರವಾಡ ಇವರಿಂದ ಉಪನ್ಯಾಸ ನಡೆಯಿತು.                  ಶ್ರೀ ಪಾದಂಗಳವರು ಆಶೀರ್ವಚನ ನೀಡಿದರು. ಕಾರ್ಯಕ್ರಮವು ಪಂಡಿತರ ವೇದಘೋಷ ಹಾಗೂ ಕು. ಅಚ್ಯುತ ಕುರ್ಡಿಕರ್ ಇವರ  ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.      ...
Image
  ರಾಯಚೂರು ಉತ್ಸವದ ಸೈಕ್ಲಾಥಾನ್: ಉತ್ಸಾಹದಿಂದ 20 ಕಿ.ಮೀ ಸೈಕಲ್ ತುಳಿದ ಸ್ಪರ್ಧಾಳುಗಳು ಜಯ ಧ್ವಜ ನ್ಯೂಸ್ ,ರಾಯಚೂರು ಜ. 27-   ರಾಯಚೂರು ಜಿಲ್ಲಾ ಉತ್ಸವದ ಕ್ಯಾಲೆಂಡರನಂತೆ ಜನವರಿ 27ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಸೈಕ್ಲಾಥಾನ್ ಆಯೋಜನೆ ಮಾಡಲಾಗಿತ್ತು. ಸೈಕಲ್ ಮ್ಯಾರಾಥಾನದಲ್ಲಿ ಭಾಗಿಯಾಗಲು ಬೆಳಗ್ಗೆ 6 ಗಂಟೆ ವೇಳೆಗೆ ನಗರದ ಮಹಾತ್ಮ ಗಾಂಧೀಜಿ ಕ್ರೀಡಾಂಗಣದತ್ತ ವೈದ್ಯರು ಸೇರಿದಂತೆ ಸೈಕಲ್ ಅಸೋಸಿಯೇಷನ್ ಸದಸ್ಯರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಯುವಜನರು, ನಾನಾ ಬಗೆಯ ತಮ್ಮ ತಮ್ಮ ನೆಚ್ಚಿನ ಸೈಕಲ್ ಏರಿ ಆಗಮಿಸಿ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗಿಯಾದರು. ಬೆಳಗ್ಗೆ, ಸೈಕಲ್ ಏರಿ ಜಿಲ್ಲಾ ಕ್ರೀಡಾಂಗಣದತ್ತ ಆಗಮಿಸಿದ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಸೈಕಲ್ ತುಳಿಯುತ್ತ ಸೈಕಲ್ ಮ್ಯಾರಾಥಾನಗೆ ಹಸಿರು ನಿಶಾನೆ ತೋರಿದರು. ಜಿಲ್ಲಾ ಕ್ರೀಡಾಂಗಣದಿಂದ ಸೈಕಲ್ ಸವಾರಿ ಆರಂಭಿಸಿದ ಸ್ಪರ್ಧಾಗಳುಗಳು ಬಸವೇಶ್ವರ ವೃತ್ತ, ಜಿಲ್ಲಾ ಪಂಚಾಯತ್, ಕನಕದಾಸ ವೃತ್ತ, ಎಸ್ಪಿ ಕಚೇರಿ ಮಾರ್ಗವಾಗಿ ಯರಮರಸ್, ಬೈಪಾಸ್ ಮೂಲಕ ಯಕ್ಲಾಸಪೂರ್, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮಾರ್ಗವಾಗಿ ಮರಳಿ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ಸೇರಿದರು. ಸೈಕಲ್ ಸವಾರರ ಸುರಕ್ಷತೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಸುರಕ್ಷತಾ ಕ್ರಮ ವಹಿಸಲಾಗಿತ್ತು. ಸೈಕಲ್ ಸವಾರ...
Image
  ಮನುಕುಲದ ಉದ್ಧಾರಕ್ಕಾಗಿ ಅವತರಿಸಿದವರು ಶ್ರೀ ಮಧ್ವಾಚಾರ್ಯರು - ಶ್ರೀ ಅಕ್ಷೋಭ್ಯರಾಮಪ್ರಿಯ ತೀರ್ಥರು .                                                                                         ಜಯ ಧ್ವಜ ನ್ಯೂಸ್, ರಾಯಚೂರು,ಜ.27- ಇಡಿ ಮನುಕುಲದ ಉದ್ಧಾರಕ್ಕಾಗಿ ಅವತರಿಸಿದವರು ಶ್ರೀ ಮಧ್ವಾಚಾರ್ಯರು ಎಂದು ಬಾಳಿಗಾರು ಮಠದ ಪೀಠಾಧಿಪತಿಗಳಾದ ಶ್ರೀ ಅಕ್ಷೋಭ್ಯರಾಮಪ್ರಿಯ ತೀರ್ಥ ಶ್ರೀಪಾದಂಗಳವರು ನುಡಿದರು. ಅವರಿಂದು ನಗರದ ಮುಂಗ್ಲಿಪ್ರಾಣದೇವರ ದೇವಸ್ಥಾನದಲ್ಲಿ ಮಧ್ವನವಮಿಯ  ಅಂಗವಾಗಿ ಹಮ್ಮಿಕೊಂಡಿದ್ದ ಮಹಾನ್ ಜ್ಞಾನ ಸತ್ರ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಸಂಸ್ಥಾನ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಮಧ್ವಾಚಾರ್ಯರು ಪ್ರಾಣದೇವರ ಅವತಾರವಾಗಿದ್ದಾರೆ. ಉಡುಪಿ ಬಳಿಯ ಪಾಜಕದಲ್ಲಿ 13ನೇ ಶತಮಾನದಲ್ಲಿ ಜನಿಸಿದ ಅವರು ಬಾಲ್ಯದಲ್ಲಿಯೆ ಅನೇಕ ಪವಾಡಗಳನ್ನು ಜಗತ್ತಿಗೆ ತೋರಿಸಿದರು. ಅವರು ಭಗವಂತನ ಲೀಲೆಗಳನ್ನು ತಮ್ಮ ಗ್ರಂಥಗಳಲ್ಲಿ ವರ್ಣಿಸಿದ್ದಾರೆ. ಸರ್ವ ಮೂಲ ಗ್ರಂಥ ಲೋಕಕ್ಕೆ ನೀಡಿ ನಮ್ಮನ್ನು ಉದ್ಧರಿಸಿದ್ದಾರೆ. ಇಂದಿನ ಯುವಕರ...
Image
  ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆ ಸಹಿಸುವುದಿಲ್ಲ:                                                          ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಿಲ್ಲ- ಡಾ.ಶರಣ ಪ್ರಕಾಶ್ ಪಾಟೀಲ್ .                                                                                                                                       ಜಯ ಧ್ವಜ ನ್ಯೂಸ್, ರಾಯಚೂರು, ಜ.26- ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ಸಹಿಸುವುದಿಲ್ಲವೆಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು. ಅವರಿಂದು ಗಣರಾಜ್ಯೋತ್ಸವ ಧ್ವಜಾರೋಹಣ ನಂತರ ಸ...
Image
  ರಿಮ್ಸ್ ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಯೋಗಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಡಾ.ರಝಾಕ ಉಸ್ತಾದ್ ಮನವಿ ಜಯ ಧ್ವಜ ನ್ಯೂಸ್, ರಾಯಚೂರು, ಜ.26 - ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್) ಯಲ್ಲಿ ಲಬ್ಯವಿರುವ ವಿವಿಧ ವೃಂದದ ಹುದ್ದೆಗಳಿಗೆ ನಿಯೋಜನೆ ಮೇರೆಗೆ ಸೇವೆ ಸಲ್ಲಿಸಲು ಅವಕಾಶ ನೀಡುವಲ್ಲಿ ಸಂಸ್ಥೆಯ ಡೀನ್ ಡಾ.ರಮೇಶ ಬಿ.ಎಚ್. ರವರು ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಯೋಗಿಗಳಿಗೆ ತಾರತಮ್ಯ ಮಾಡುತ್ತಿರುವದು ಕಂಡುಬಂದಿದ್ದು ಅದನ್ನು ನಿವಾರಿಸುವಂತೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ರಝಾಕ್  ಉಸ್ತಾದ್ ರವರು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ  ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ರವರಿಗೆ ಮನವಿ ಮಾಡಿದರು.            ವಿಶೇಷವಾಗಿ ಆಡಳಿತಾತ್ಮಕ ಹುದ್ದೆಗಳಿಗೆ ನಿಯೋಜಿಸುವಾಗ ಓoಟಿ-ಊಏ ಉದ್ಯೋಗಿಗಳಿಗೆ ಅವಕಾಶ ನೀಡುತ್ತ, ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗಿಗಳಿಗೆ ಅವಕಾಶವಂಚಿತರಾಗಿಸುತ್ತಿದ್ದಾರೆ, ಇದು ಸಂಸ್ಥೆಯ ಡೀನ್ ಡಾ.ರಮೇಶ ಬಿ.ಎಚ್. ರವರು ಕಲ್ಯಾಣ ಕರ್ನಾಟಕ ಹೊರ ಪ್ರದೇಶದವರಾಗಿರುವದರಿಂದ  ಆ ಭಾಗದವರಿಗೆ ಹೆಚ್ಚು ಅವಕಾಶ ನೀಡುತ್ತಿದ್ದಾರೆ ಎನ್ನುವದು ಸ್ಪಷ್ಟವಾಗಿದೆ ಎಂದು ದೂರಿದ್ದಾರೆ. ಕಳೆದ ವರ್ಷ ರಿಮ್ಸ್ ಸಂಸ್ಥೆಯಡಿಯಲ್ಲಿ ನಡೆಸಲಾಗುತ್ತಿರುವ ಬಿ.ಎಸ್ಸಿ. ನರ್ಸಿಂಗ್ ಕಾಲೇಜಿಗೆ ಪ್ರಾಚಾರ್ಯರನ್ನು ೩೭...
Image
  ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ರಾಷ್ಟ್ರ ಧ್ವಜಾರೋಹಣ ಜಯ ಧ್ವಜ ನ್ಯೂಸ್ , ರಾಯಚೂರು, ಜ.26- ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಧ್ವಜಾರೋಹಣ ಇಂದು 77ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಬಿಜೆಪಿ  ಬಿಜೆಪಿ ಜಿಲ್ಲಾ ಅದ್ಯಕ್ಷರಾದ ವೀರನಗೌಡ ಪಾಟೀಲ್ ಲೆಕ್ಕಿಹಾಳ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರ ಶಾಸಕರಾದ  ಡಾ.ಶಿವರಾಜ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಜಾಲ್ದಾರ್, ಸಂತೋಷ ರಾಜಗುರು, ಜಂಬಣ್ಣ ನೀಲಗಲ್, ಜಿಲ್ಹಾ ಉಪಾಧ್ಯಕ್ಷ ಶಂಕರ್ ರೆಡ್ಡಿ, ನಗರ ಅಧ್ಯಕ್ಷ ರಾಘವೇಂದ್ರ ಊಟಕೂರು, ಶಿವಬಸಪ್ಪ ಮಾಲಿ ಪಾಟೀಲ್, ಕಡಗೋಳ ಆಂಜಿನೇಯ, ರಾಜಕುಮಾರ, ರಾಮಚಂದ್ರ ಕಡಗೋಲ್, ಬಂಗಿ ನರಸರೆಡ್ಡಿ, ಟಿ. ಶ್ರೀನಿವಾಸ್ ರೆಡ್ಡಿ. ಬಿ. ಗೋವಿಂದ್. ಮುಕ್ತಿಯಾರ್, ಬಂಡೇಶ,ಜೆ. ಎಂ. ಮೌನೇಶ್ ,ನಾಗರಾಜ್ ಬಾಲ್ಕಿ ಕೊಟ್ರೇಶಪ್ಪ ಕೋರಿ, ವಿನಾಯಕ ರಾವ್, ವಿರೇಶ್ ತಳವಾರ್, ಗುಡ್ಸಿ ನರಸರೆಡ್ಡಿ, ವಿ. ಪಿ. ರೆಡ್ಡಿ ,ವಿಜಯ ರಾಜೇಶ್ವರಿ, ವಾಣಿಶ್ರೀ, ಸುಮಾ ಗಸ್ತಿ, ಸೀತಾ ನಾಯಕ್, ನಾಗವೇಣಿ, ಸಂಗೀತಾ, ಅಶ್ವಿನಿ, ಸುನೀತಾ ಪಟೇಲ್, ನಿವೇದಿತಾ ಮತ್ತು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು .
Image
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ.                          ಜಯ ಧ್ವಜ ನ್ಯೂಸ್  , ರಾಯಚೂರು, ಜ.26 - ಇಂದು ಸೋಮವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಬಸವರಾಜ ಪಾಟೀಲ್ ಇಟಗಿ ಅವರು ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡಿದರು.       ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ  ಶರಣಪ್ರಕಾಶ್ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ  ಎ. ವಸಂತ ಕುಮಾರ, ರಾಯಚೂರು ಗ್ರಾಮೀಣ ಶಾಸಕರಾದ  ಬಸನಗೌಡ ದದ್ದಲ್, ಮುಖಂಡರುಗಳಾದ ಕೆ.ಶಾಂತಪ್ಪ, ಮಹ್ಮದ್ ಶಾಲಂ, ರವಿ ಭೋಸರಾಜು, ಜಯವಂತರಾವ ಪತಂಗೆ, ಸುಧೀಂದ್ರ ಜಹಗೀರದಾರ್,  ಎನ್.ಶ್ರೀನಿವಾಸ ರೆಡ್ಡಿ, ಜಿ.ಶಿವಮೂರ್ತಿ, ಅಬ್ದುಲ್ ಕರಿಂ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಅಸ್ಲಂ ಪಾಷಾ,  ಆಂಜನೇಯ ಕುರುಬದೊಡ್ಡಿ, ಸುಧಾಮ, ಮಾಡಗಿರಿ ನರಸಿಂಹಲು, ಪವನ ಪಾಟೀಲ್,  ಮುರಳಿ ಯಾದವ, ಫಯಾಜುದ್ದೀನ್, ಉರುಕುಂದಪ್ಪ, ವಿಶ್ವನಾಥಪಟ್ಟಿ, ರಾಣಿ ರಿಚರ್ಡ್, ಶ್ರೀದೇವಿ ನಾಯಕ, ಶಶಿಕಲಾ ಭೀಮರಾಯ, ಸುರೇಖಾ  ಸೇರಿದಂತೆ ಇನ್ನಿತರ ಅನೇಕರು ಉಪಸ್ಥಿತರಿದ್ದರು
Image
  ಆಕಾಶವಾಣಿ ಕೇಂದ್ರದಲ್ಲಿ ಗಣರಾಜ್ಯೋತ್ಸವ : ಸಂವಿಧಾನವೇ ದೇಶದ ಆತ್ಮ-  ವೆಂಕಟೇಶ ಬೇವಿನಬೆಂಚಿ ಜಯ ಧ್ವಜ ನ್ಯೂಸ್ ,ರಾಯಚೂರು, ಜ.26-  ಸಂವಿಧಾನವೇ ದೇಶದ ಆತ್ಮ,ಸಮಾನತೆ, ಸ್ವಾತಂತ್ರ್ಯ ಹಾಗೂ ಸಾಮಾಜಿಕ ನ್ಯಾಯದ ಆಶಯ ಸಂವಿಧಾನದ ಮೂಲತತ್ವ, ಅದರಂತೆ ಈ ದೇಶ ನಡೆಯಬೇಕು,ಕಭೇರಿಗಳ ಕಾಗದಗಳಲ್ಲಿ ಉಳಿಯಬಾರದು ಎಂದು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ ಹೇಳಿದರು.         ಅವರಿಂದು ಆಕಾಶವಾಣಿ ಕೇಂದ್ರದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  ಸಂವಿಧಾನದ ಜಾರಿಯಾದ ದಿನವನ್ನು ಗಣರಾಜ್ಯೋತ್ಸವ ಹೆಸರಿನಲ್ಲಿ ನಾವು ದೇಶದಲ್ಲಿ ಆಚರಣೆ ಮಾಡುತ್ತೇವೆ.  ಸಂವಿಧಾನ ಜಾರಿಯ ನಂತರವೇ ಭಾರತದ ಎಲ್ಲಾ ಪ್ರಜೆಗಳು ತಮ್ಮ ಹಕ್ಕುಗಳನ್ನು ಪಡೆಯುವ ಅವಕಾಶ ಬಂದಿತು.   ದೇಶದ ಎಲ್ಲಾ ಪ್ರಜೆಗಳು ಸಮಾನರು ಎನ್ನುವ ಸಂವಿಧಾನದ ಕಾನೂನುಗಳು ದೇಶದ ನಾಗರಿಕರನ್ನು ಮೇಲೆತ್ತಲು ಅನೇಕ ಯೋಜನೆಗಳನ್ನು ತರಲಾಯಿತು. ಆ ಯೋಜನೆಗಳ ಮೂಲಕ ವಿಶೇಷವಾಗಿ ತಳ ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಬದಲಾವಣೆಯನ್ನು ಕಾಣಲು ಸಾಧ್ಯವಾಯಿತು. ಆದರೂ  ಸಂವಿಧಾನವು ತಳಮಟ್ಟದಲ್ಲಿ ಜಾರಿಯಾಗಿಲ್ಲ ಎನ್ನುವ ಕೂಗು ದಿನನಿತ್ಯ ಕೇಳಿಬರುತ್ತಿದೆ. ಜನಸಾಮಾನ್ಯರ ಹಕ್ಕುಗಳನ್ನು ರಕ್ಷಿಸಿ, ಪ್ರಜಾಪ್ರಭುತ್ವವನ್ನು ಬಲಪಡಿಸುವ ಸಂಕಲ್ಪದೊಂದಿಗೆ ನಾವೆಲ್ಲರೂ ಪ್ರಜ್ಞಾಪೂರ...
Image
  ಜಿಲ್ಲಾ ಕ್ರೀಡಾಂಗಣದಲ್ಲಿ 77 ನೇ ಗಣರಾಜ್ಯೋತ್ಸವ: ಮನಸೊರೆಗೊಂಡ ಮಲ್ಲ ಕಂಬ ಪ್ರದರ್ಶನ.                  ಜಯ ಧ್ವಜ ನ್ಯೂಸ್, ರಾಯಚೂರು, ಜ.26-          ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 77 ನೇ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಬಲ್ಲಟಗಿಯ ಬಸವೇಶ್ವರ ಶಾಲೆ ವಿದ್ಯಾರ್ಥಿಗಳಿಂದ ಆಕರ್ಷಕ ಮಲ್ಲ ಕಂಬ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.      
Image
  ಮಹಾನಗರ ಪಾಲಿಕೆ ಕಚೇರಿಯಲ್ಲಿ ಗಣರಾಜ್ಯೋತ್ಸವ : ಆಯುಕ್ತರಾದ ಜುಬಿನ್ ಮೋಹಪಾತ್ರರಿಂದ ರಾಷ್ಟ್ರ ಧ್ವಜಾರೋಹಣ                                                    ಜಯ‌ಧ್ವಜ ನ್ಯೂಸ್  ,ರಾಯಚೂರು, ಜ. 26- 77 ನೇ ಗಣರಾಜ್ಯೋತ್ಸವದ ಅಂಗವಾಗಿ ಬೆಳಗ್ಗೆ  ನಗರದ ಗಾಂಧಿ ವೃತ್ತದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪುತ್ಥಳಿಗೆ ಪೂಜೆ ಸಲ್ಲಿಸಿ  ನಂತರ 6-30 ಕ್ಕೆ  ನಗರದ ಕ್ರೀಡಾಂಗಣದಲ್ಲಿ ಮಹಾತ್ಮಾ ಗಾಂಧೀಜಿಯವರ ಪುತ್ಥಳಿಗೆ ಪೂಜೆ ಸಲ್ಲಿಸಿ ಹೂ ಮಾಲೆ ಹಾಕಿದರು. ಮಹಾನಗರಪಾಲಿಕೆಯ ವಲಯ ಕಛೇರೀಗಳಲ್ಲಿ ಪಾಲಿಕೆ  ಆಯುಕ್ತರಾದ  ಜುಬಿನ್ ಮೋಹಪಾತ್ರ   (ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಹಳೆಯ ನಗರಸಭೆ ಕಚೇರಿ) ಧ್ವಜಾರೋಹಣ ನೇರವೇರಿಸಿ  ಮಾತನಾಡಿ  ರಾಯಚೂರು ಮಹಾನಗರದ ಸಮಸ್ತ ಸಾರ್ವಜನಿಕರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಮಹತ್ವದ ದಿನ ಇದಾಗಿದೆ ಎಂದು ಹೇಳಿದರು. ಭಾರತದ ಸಂವಿಧಾನ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದ್...
Image
  ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ರಾಷ್ಟ್ರ ಧ್ವಜಾರೋಹಣ :              ಸಂವಿಧಾನ ಬದ್ಧ ಒಕ್ಕೂಟ ವ್ಯವಸ್ಥೆ ಉಳಿಸುವ ಕಾರ್ಯವಾಗಲಿ- ಡಾ.ಶರಣಪ್ರಕಾಶ ಪಾಟೀಲ ಜಯ ಧ್ವಜ ನ್ಯೂಸ್ ,ರಾಯಚೂರು ,ಜ. 26- ಭಾರತ ಸಂವಿಧಾನವು ವಿಶ್ವಕ್ಕೆ ಮಾದರಿಯಾದ ಸಂವಿಧಾನವಾಗಿದೆ. ಈ ಸಂವಿಧಾನ ಬದ್ದ ಒಕ್ಕೂಟ ವ್ಯವಸ್ಥೆಯನ್ನು ಉಳಿಸುವ ಕಾರ್ಯವಾಗಬೇಕಿದೆ ಎಂದು ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಹೇಳಿದರು. ಅವರಿಂದು ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ನಡೆದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆಗಳು ನಮ್ಮ ಮಹತ್ವದ ರಾಷ್ಟ್ರೀಯ ಹಬ್ಬಗಳಾಗಿವೆ. ಸ್ವಾತಂತ್ರ್ಯದ ಬಳಿಕ ನಮ್ಮ ದೇಶದಲ್ಲಿ, ಎಲ್ಲ ರಂಗದಲ್ಲಿ ಸಮಾನತೆ ಸಿಗಬೇಕು ಎಂಬುದು ಮಹಾತ್ಮ ಗಾಂಧೀಜಿ, ಸುಭಾಷಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ನಮ್ಮ ಅನೇಕ  ಮಹನಿಯರ ಸದಾಶಯವಾಗಿತ್ತು. ಆಗ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಯ ಜವಾಬ್ದಾರಿ ವಹಿಸಿದರು. ಬೇರೆ ಬೇರೆ ದೇಶಗಳ ಸುತ್ತಿ, ಸಾಕಷ್ಟು ಅಧ್ಯಯನ ನಡೆಸಿ ಅಂಬೇಡ್ಕರ್ ಅವ...