ರಾಯಚೂರಿಗೆ ಏಮ್ಸ್ ನೀಡುವಂತೆ ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮನವಿ.                                                                                        ಜಯ ಧ್ವಜ ನ್ಯೂಸ್, ರಾಯಚೂರು, ಮಾ.16- ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿರವರು ಇಂದು ರಾಜ್ಯಸಭೆ ಕಲಾಪದಲ್ಲಿ ಸರ್ಕಾರವನ್ನು ಕೋರಿದರು.        ಸುಮಾರು ಮೂರು ವರ್ಷದಿಂದ ಏಮ್ಸ್ ಹೋರಾಟ ನಡೆಯುತ್ತಿದೆ ಕರ್ನಾಟಕ ರಾಜ್ಯದಲ್ಲಿ ಒಂದು ಏಮ್ಸ್ ಇಲ್ಲ ಕೇಂದ್ರ ಸರ್ಕಾರ ರಾಜ್ಯಕ್ಕೆ ಏಮ್ಸ್ ನೀಡುವುದಾಗಿ ಘೋಷಿಸಿದೆ ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶವಾಗಿದೆ ರಾಯಚೂರು ಜಿಲ್ಲೆ ಶಿಕ್ಷಣ, ಆರೋಗ್ಯ, ಉದ್ಯೋಗ ಮುಂತಾದವುಗಳಲ್ಲಿ ಹಿಂದುಳಿದಿದೆ ಎಂದರು.

ಈ ಹಿಂದೆ ಮೈಸೂರು ಮಹಾರಾಜರ ಕೃಪೆಯಿಂದ ದಕ್ಷಿಣ ಕರ್ನಾಟಕ ಅಭಿವೃದ್ಧಿ ಹೊಂದಿದೆ ಆದರೆ ಪರಕೀಯರ  ಆಳ್ವಿಕೆಗೆ ಒಳಪಟ್ಟ ರಾಯಚೂರು ಮುಂತಾದ ಭಾಗಗಳು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಇಲ್ಲಿನ ಸಾಕ್ಷರತಾ ಪ್ರಮಾಣ ಗಣನೀಯವಾಗಿ ಕ್ಷಿಣಿಸಿದೆ ಬಡತನ ಅನಕ್ಷರತೆ ಮತ್ತು ಉತ್ತಮ ಆರೋಗ್ಯವಿಲ್ಲದೆ ಇಲ್ಲಿಯ ಜನರು ತತ್ತರಿಸಿದ್ದಾರೆ ಏಮ್ಸ್ ಮಂಜೂರು ಮಾಡುವುದರಿಂದ ಇಲ್ಲಿನ ಬಡ ಜನರ ಆರೋಗ್ಯ ಸ್ಥಿತಿ ಸುಧಾರಣೆಗೆ ಅನಕೂಲವಾಗುತ್ತದೆ ಎಂದು ಹೇಳುತ್ತ ರಾಯಚೂರಿಗೆ ಏಮ್ಸ್ ನೀಡಲೇಬೇಕೆಂದು ಒತ್ತಾಯಿಸಿದರು.

Comments

Popular posts from this blog