ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಶ್ರೀ ಸೂಗುರೇಶ್ವರ ಕರಾಟೆ ಸಂಸ್ಥೆಗೆ ಐತಿಹಾಸಿಕ 22 ಪದಕಗಳ  ಜಯ 


ಜಯ‌ ಧ್ವಜ ನ್ಯೂಸ್ ,ರಾಯಚೂರು ಸೆ. 28-

ತೆಲಂಗಾಣ ರಾಜ್ಯದ ಮಕ್ತಲ್  ರಾಯಲ್ ಪ್ಯಾಲೇಸ್  ನಲ್ಲಿ ನಡೆದ ನ್ಯಾಷನಲ್ ಲೆವೆಲ್ ಕರಾಟೆ ಡು & ಕುಂಗ್ ಫು ಚಾಂಪಿಯನ್‌ಶಿಪ್ - 2026ನಲ್ಲಿ  ಶ್ರೀ ಸೂಗುರೇಶ್ವರ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ

ಈ ಚಾಂಪಿಯನ್‌ಶಿಪ್‌ನಲ್ಲಿ ಸಂಸ್ಥೆಯಿಂದ ಒಟ್ಟು 22 ವಿದ್ಯಾರ್ಥಿಗಳು ಭಾಗವಹಿಸಿದ್ದು, ಭಾಗವಹಿಸಿದ 22 ಜನರು 22 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಗೆದ್ದ ಪದಕಗಳ ವಿವರ: 6 ಪ್ರಥಮ ಸ್ಥಾನ, 10 ದ್ವಿತೀಯ ಸ್ಥಾನ ಮತ್ತು 6 ತೃತೀಯ ಸ್ಥಾನ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಮುಖ್ಯ ತರಬೇತುದಾರು ಎನ್. ಸೂಗಪ್ಪ, ಹಾಗೂ ಸಹ ತರಬೇತುದಾರರಾದ ಪ್ರಕಾಶ ಮಲ್ಲೇಶ ಮತ್ತು ಸುರೇಶರವರು ಹರ್ಷ ವ್ಯಕ್ತಪಡಿಸಿದ್ದು, ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Comments

Popular posts from this blog