ಜಗತ್ತಿಗೆ ಭಕ್ತಿಯ ಬೆಳಕನ್ನು ತೋರಿಸಿದವರು ಶ್ರೀ ಜಗನ್ನಾಥದಾಸರು - ಮುರಳಿಧರ ಕುಲಕರ್ಣಿ
ಜಯ ಧ್ವಜ ನ್ಯೂಸ್, ರಾಯಚೂರು, ಸೆ.22- ಜಗತ್ತಿಗೆ ಭಕ್ತಿಯ ಬೆಳಕನ್ನು ತೋರಿಸಿದವರು ಶ್ರೀ ಜಗನ್ನಾಥದಾಸರು ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು. ಅವರು ಸೋಮವಾರ ಸಂಜೆ ನಗರದ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಿದ ಶ್ರೀ ಜಗನ್ನಾಥದಾಸರ ಪೂರ್ವಾರಾಧನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೇಷ್ಠ ಹರಿದಾಸರಾಗಿರುವ ಶ್ರೀ ಜಗನ್ನಾಥದಾಸರು ದಾಸ ಚತುಷ್ಠಿಯರಲ್ಲಿ ಒಬ್ಬರಾಗಿದ್ದಾರೆ. ಪುರಂದರದಾಸರು ಶ್ರೀ ವಿಜಯದಾಸರು ಶ್ರೀ ಗೋಪಾಲ ದಾಸರು ನಂತರ ಬರುವ ಶ್ರೀ ಜಗನ್ನಾಥದಾಸರು ದಾಸ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಶ್ರೀ ಜಗನ್ನಾಥದಾಸರು ವಿರಚಿಸಿದ ಹರಿಕಥಾಮೃತಸಾರವು 32 ಭಾಮಿನಿಯಾ ಷಟ್ಪದಿಯ ಸಂಧಿಗಳು ಅತ್ಯಂತ ಮೌಲ್ಯಯುಕ್ತವಾಗಿದೆ. ವೇದ, ಉಪನಿಷತ್ತು, ಸ್ಮೃತಿ, ಪುರಾಣ,ಭಾಗವತ, ಮಹಾಭಾರತ, ರಾಮಾಯಣದ ಎಲ್ಲ ತತ್ವಗಳನ್ನು ಒಳಗೊಂಡಿವೆ ಎಂದರು.
ಇದೊಂದು ಸಾಧನಾ ಕೃತಿಯಾಗಿದೆ. ಶ್ರೀ ಜಗನ್ನಾಥದಾಸರು ಹರಿನಾಮ ಸ್ಮರಣೆಯ ಮೂಲಕ ಜಗತ್ತಿಗೆ ಬೆಳಕನ್ನು ತೋರಿಸಿದ ಹರಿದಾಸ ಶ್ರೇಷ್ಠರಾಗಿದ್ದಾರೆ ಎಂದು ಹೇಳಿದರು.
ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರು ಮಾತನಾಡಿ ಶ್ರೀ ಜಗನ್ನಾಥದಾಸರು ಹರಿದಾಸ ಪರಂಪರೆಯಲ್ಲಿ ಅತ್ಯಂತ ಶ್ರೇಷ್ಠ ಶ್ರೇಷ್ಠ ಹರಿದಾಸರಾಗಿದ್ದಾರು ಇವರು ಹರಿಕಥಮೃತಸಾರದ ಜೊತೆಗೆ ನೂರಾರು ಸಂಕೀರ್ತನೆಗಳನ್ನು ಉಗಾ ಭೋಗಗಳನ್ನು, ಸುಳಾದಿಗಳನ್ನು ತತ್ವ ಸುವ್ವಾಲಿ ಗಳನ್ನು ರಚಿಸಿದ್ದಾರೆ ಎಂದರು.
ಕಾರ್ಯಕ್ರಮವನ್ನು ಬ್ರಾಹ್ಮಣ ಸಮಾಜದ ಮುಖಂಡರಾದ ಪ್ರಸನ್ನ ಅಲಂಪಲ್ಲಿ ಅವರು ಶ್ರೀ ಜಗನ್ನಾಥದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಉದ್ಘಾಟಿಸಿ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಾಯಕರಾದ ಶ್ರೀ ಸುರೇಶ್ ಕಲ್ಲೂರ್ ಅವರು ಶ್ರೀ ಜಗನ್ನಾಥದಾಸರು ರಚಿಸಿದ ಕೀರ್ತನೆಯನ್ನು ಹಾಡಿ ಶುಭ ಕೋರಿದರು.
ಆಂಜನೇಯ ದೇವಸ್ಥಾನದ ಅರ್ಚಕರಾದ ಶ್ರೀಧರಾಚಾರ್ಯ ಮುಂಗಲಿ ಅವರು ಶ್ರೀ ಜಗನ್ನಾಥಸರ ಭಾವಚಿತ್ರಕ್ಕೆ ಮಂಗಳಾರತಿಯನ್ನು ಮಾಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಲವಾರು ಭಜನಾ ಮಂಡಳಿಗಳು ಉಪಸ್ಥಿತರಿದ್ದರು.





Comments
Post a Comment