ಡಿಜೆ ಅಬ್ಬರದಲ್ಲಿ ಕುಣಿದು ಕುಪ್ಪಳಿಸಿದ ಯುವಕರು: ಸಂಜೆವರೆಗೂ ಮುಂದುವರಿದ ಗಣೇಶ ವಿಸರ್ಜನೆ: ಜಯ ಧ್ವಜ ನ್ಯೂಸ್, ರಾಯಚೂರು, ಸೆ.23- ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ 9ನೇ ದಿನದ ವಿಸರ್ಜನೆ ಮೆರವಣಿಗೆ ಸಂಜೆವರೆಗೂ ಮುಂದುವರೆಯಿತು. ಮಳೆ ಹಿನ್ನೆಲೆಯಲ್ಲಿ ರಾತ್ರಿ ಬೆರಳೆಣಿಕೆ ಗಣೇಶ ಮೂರ್ತಿಗಳು ವಿಸರ್ಜನೆ ಗೊಂಡವು.
ಬೆಳಗಿನ ಜಾವ ಪ್ರತಿಷ್ಟಾಪಿತ ಪೆಂಡಾಲ್ ಗಳಿಂದ ಗಣೇಶ ಮೂರ್ತಿಗಳನ್ನು ವಿಸರ್ಜನೆಗೆ ಅಣಿ ಗೊಳಿಸಲಾಯಿತು. ರಾತ್ರಿ ಜಿಟಿ ಜಿಟಿ ಮಳೆಯಿಲ್ಲೆ ವಿಸರ್ಜನಾ ಮೆರವಣಿಗೆ ನೋಡಲು ಜನರು ಆಗಮಿಸಿದ್ದರು. ಬೆಳಿಗ್ಗೆ 10ಗಂಟೆಗೆ ತೀನ್ ಕಂದೀಲ್ ಬಳಿ ಗಣೇಶ ಮೂರ್ತಿಗಳು ಸಾಲುಗಟ್ಟಿದ್ದವು.
ಮಾವಿನ ಕೆರೆ ಬಳಿಯ ಖಾಸ ಬಾವಿ ಬಳಿ ಎರೆಡು ಬೃಹತ್ ಕ್ರೇನ್ ಗಳ ಮೂಲಕ ಸುಮಾರು ಇಪ್ಪತ್ತು ಅಡಿ ವರೆಗಿನ ಗಣೇಶ ಮೂರ್ತಿಗಳು ಖಾಸ ಬಾವಿಯಲ್ಲಿ ವಿಸರ್ಜನೆಗೊಂಡವು.
ಬಾವಿ ಸುತ್ತಲು ಜನ ಜಂಗುಳಿ ನೆರೆದು ಗಣೇಶ ಮೂರ್ತಿಗಳು ಬಾವಿಯಲ್ಲಿ ವಿಸರ್ಜನೆಗೊಳ್ಳುವುದನ್ನು ಕಣ್ತುಂಬಿಕೊಂಡರು.
ಯುವಕರು,ಮಕ್ಕಳು ಡಿಜೆ ಅಬ್ಬರದ ಸಂಗೀತದಲ್ಲಿ ತೇಲಿದರು. ಹಾಡುಗಳ ತಾಳಕ್ಕೆ ಹೆಜ್ಜೆ ಹಾಕಿದರು.
ಕಲ್ಲಾನೆ, ಮುನ್ನೂರುವಾಡಿ, ಸಿಯಾತಲಾಬ್, ಹರಿಜನವಾಡ ಬಿಗ್ ಡ್ಯಾಡಿ ಸೇರಿದಂತೆ ಅನೇಕ ಬೃಹತ ಗಣೇಶ ಮೂರ್ತಿಗಳು ಗಮನಸೆಳೆದವು.
ಸಹಸ್ರಾರು ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡು ಗಣೇಶ ವಿಸರ್ಜನೆಗೆ ಮೆರುಗು ತಂದರು. ಯುವಕರ ನಡುವೆ ಮಾರಾಮಾರಿ: ಖಾಸ ಬಾವಿ ಬಳಿ ಯುವಕರು ಪರಸ್ಪರ ಹೊಡೆದಾಡಿದರು ಸ್ಥಳದಲ್ಲಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇತರೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಗುಂಪನ್ನು ಚದುರಿಸಿ ಬುದ್ಧಿವಾದ ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.
ಸಣ್ಣಪುಟ್ಟ ಘಟನೆ ಹೊರತು ಪಡಿಸಿ ಗಣೇಶೋತ್ಸವ ವಿಸರ್ಜನೆ ಶಾಂತಿಯಿಂದ ನೆರವೇರಿತು. ಜಿಲ್ಲಾಡಳಿತ ,ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಜೆಸ್ಕಾಂ ಮುಂತಾದ ಇಲಾಖೆಗಳು ಸಹಕರಿಸಿದವು.








Comments
Post a Comment