ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ: ಪತ್ರಕರ್ತರು ಹಾಗೂ ವಿವಿಧ ಇಲಾಖೆಗಳ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಗೆ ಡಿಸಿ ಪೂವಿತಾ ಎಸ್ ಚಾಲನೆ
ಜಯ ಧ್ವಜ ನ್ಯೂಸ್ ,ರಾಯಚೂರು,ಸೆ.26- ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವದ ಅಂಗವಾಗಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬಂದಿಗಳ ಸೌಹಾರ್ದ ಕ್ರಿಕೆಟ್ ಟೂರ್ನಮೆಂಟ್ ಗೆ ಜಿಲ್ಲಾಧಿಕಾರಿ ಪೂವಿತಾ ಎಸ್ ಅವರು ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು.
ಅವರಿಂದು ಪೋಲೀಸ್ ಪರೇಡ್ ಮೈದಾನದಲ್ಲಿ ರಿಪೋರ್ಟ್ ರ್ಸ್ ಗಿಲ್ಡ್ ಹಾಗೂ ಪೋಲಿಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು, ಸಿಬಂದಿ , ಮಾಧ್ಯಮ ನಡುವೆ ಈ ರೀತಿ ಕ್ರೀಡಾ ಸ್ಪೂರ್ತಿಯ ವಾತಾವರಣ ಇರಬೇಕು ಎಂದರು.
ಇಂತಹ ಕ್ರೀಡಾಕೂಟಗಳ ಮೂಲಕ ಮಾಹಿತಿ ಹಂಚಿಕೆಗೆ ಸೌಹಾರ್ದತೆ ಬೆಳೆಯಲಿದೆ ಎಂದರು. ಕ್ರೀಡೆಗಳಲ್ಲಿ ತೋಡಗಿಕೊಳ್ಳುವುದರಿಂದ ಆರೋಗ್ಯಕರ ಸೌಹಾರ್ದ ಭಾವನೆ ಉಂಟಾಗುತ್ತದೆ, ದೈಹಿಕ ಫಿಟ್ನೆಸ್‌ಗೆ ಅನುಕೂಲ ಆಗಲಿದೆ ಎಂದರು.
ಕರ್ನಾಟಕ ಮಾಹಿತಿ ಆಯೋಗದ ಕಲಬುರ್ಗಿ ಪೀಠದ ಆಯುಕ್ತ ಬಿ.ವೆಂಕಟ ಸಿಂಗ್ ರವರು ಮಾತನಾಡಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್ 25 ವರ್ಷಗಳಿಂದ ನಗರದಲ್ಲಿ ಪತ್ರಕರ್ತರಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತ ಬರುತ್ತಿದೆ. ಇಂದು ಬೆಳ್ಳಿ ಮಹೋತ್ಸವದ ಅಂಗವಾಗಿ ಕ್ರೀಡಾಕೂಟ ಆಯೋಜಿಸಿದ್ದು ಉತ್ತಮವಾಗಿದೆ.
ಆಗ ನಗರಸಭೆ ನೀಡಿದ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದು ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಯಾಗಿ ಗಿಲ್ಡ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಕೆಲಸ ಮಾಡುತ್ತಿದೆ ಎಂದರು.ಅಧಿಕಾರಿಗಳು, ಜನಪ್ರತಿನಿಧಿಗಳು ಸಹಾಯ ಸಹಕಾರ ಮಾಡಿದ್ದಾರೆ.
ಜಂಟಿಯಾಗಿ ಸೌಹಾರ್ದಯುತವಾಗಿ ಆಟ ವೃತ್ತಿ ಪ್ರೌಢಿಮೆ ಬೆಳೆಸುತ್ತಿದೆ. ವೃತ್ತಿ ಜೀವನದಲ್ಲಿ ಒತ್ತಡದಿಂದ ಹೊರ ಬರಲು ಕ್ರೀಡಾಕೂಟ ಸಹಕಾರಿ ಯಾಗಿದೆ ಎಂದರು.
ಎಸ್ ಪಿ ಅರುಣಾಂಗ್ಷು ಗಿರಿ ಮಾತನಾಡಿ, 25 ವರ್ಷದ ಸಂಭ್ರಮದ ವಾತಾವರಣದಲ್ಲಿ ನಮ್ಮೆಲ್ಲರನ್ನು ಪಾಲ್ಗೊಳ್ಳುವಂತೆ ಮಾಡಿದ್ದು ಶ್ಲಾಘನೀಯ ಎಂದರು.
ಜಿ ಪಂ ಸಿಇಓ ಈಶ್ವರ ಕುಮಾರ ಕಾಂದೂ ಮಾತನಾಡಿ, ಇಂತಹ ಕ್ರೀಡಾಕೂಟಗಳ ಮೂಲಕ ಉಭಯ ವರ್ಗದವರ ರಿಕ್ರಿಯೇಷನ್ ಜೊತೆಗೆ ಒತ್ತಡ ತಗ್ಗಿಸಬಹುದು. ಮಾಧ್ಯಮದವರು ದೈಹಿಕ ಮಾನಸಿಕ ಆರೋಗ್ಯದ ಕಡೆಗೆ ಗಮನಹರಿಸಲು ಸಲಹೆ ಮಾಡಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮೊಹಪಾತ್ರ ಮಾತನಾಡಿ, ಆಡಳಿತ ವಿಚಾರದಲ್ಲಿ ಮಾಧ್ಯಮ ಪ್ರಮುಖ ಪಾತ್ರ ವಹಿಸಲಿದೆ. ಆಡಳಿತದಲ್ಲಿ ಉತ್ತಮ ಕೆಲಸಕ್ಕೆ ಎಲ್ಲರಿಂದಲೂ ಸಹಕಾರ ಸಿಕ್ಕರೆ ಜನರಿಗೆ ಸೌಲಭ್ಯ ಕೊಡಲು ಅನುಕೂಲ ಆಗಲಿದೆ. ಆಟವನ್ನು ಖುಷಿಯಿಂದ ಕ್ರೀಡಾಸ್ಪೂರ್ತಿಯಿಂದ ಆಡಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್ ಗುರುನಾಥ್ ಮಾತನಾಡಿ, 25 ವರ್ಷ ಅನೇಕ ಚಟುವಟಿಕೆಗಳನ್ನು ಮಾಡುತ್ತ ಬಂದಿದೆ. ಸುದ್ದಿಯ ಜಂಜಾಟದಲ್ಲಿರುವ ನಾವು ಎಲ್ಲಾ ಪತ್ರಕರ್ತರು ಆಟದಲ್ಲಿ ತೊಡಗಿಸಿಕೊಂಡು ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಿಪೋರ್ಟ್ ರ್ಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಮಾತನಾಡಿ, ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ನಾನಾ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ರಾಜ್ಯ ಮಟ್ಟದ ಕಥೆ ಕವನ ಸ್ಪರ್ಧೆ, ಜಿಲ್ಲೆಯ ಹೋರಾಟಗಳ ಕುರಿತು ಪುಸ್ತಕ ರೂಪದಲ್ಲಿ ಹೊರತರುತ್ತಿದ್ದೇವೆ. ಅದರ ಮುಂದುವರಿದ ಭಾಗವಾಗಿ ಇಂದು ಸೌಹಾರ್ದ ಪಂದ್ಯ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಕುಕನೂರು, ರಿಪೋರ್ಟರ್ಸ್ ಗಿಲ್ಡ್ ನಿಕಟಪೂರ್ವ ಅಧ್ಯಕ್ಷ ಚೆನ್ನಬಸವಣ್ಣ ಇದ್ದರು.
ಗಿಲ್ಡ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ ನಿರೂಪಿಸಿ ವಂದಿಸಿದರು. ಪೊಲೀಸ್ ಇಲಾಖೆಯ ಪರಮಾನಂದ ಘೋಡ್ಕೆ, ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಮಲ್ಲಿಕಾರ್ಜುನ, ಯುವಜನ ಕ್ರೀಡಾ ಇಲಾಖೆಯ ಈರೇಶ್ ನಾಯಕ, ಸರ್ಕಾರಿ ನೌಕರರ ಸಂಘದ ಕೃಷ್ಣ ಶಾವಂತಗೇರಾ ಸೇರಿದಂತೆ
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು, ಹಿರಿಯ ಕಿರಿಯ ಪತ್ರಕರ್ತರು , ಪತ್ರಿಕಾ ಛಾಯಾಗ್ರಹಕರು ಕ್ರೀಡಾಸಕ್ತರು ಪಾಲ್ಗೊಂಡಿದ್ದರು.













Comments
Post a Comment