ಡಾ. ಸ್ವಾಮಿ ರಾವ್ ಕುಲಕರ್ಣಿ ಅವರಿಗೆ "ಸಿರಿ ಗೋವಿಂದ ವಿಠ್ಠಲ" ಪ್ರಶಸ್ತಿ- ಶೇಷಗಿರಿ ದಾಸ್
ಜಯ ಧ್ವಜ ನ್ಯೂಸ್ , ರಾಯಚೂರು ,ಸೆ.24-ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ದಿನಾಂಕ 3 ಮತ್ತು 4 ಶನಿವಾರ ಆದಿವಾರದಂದು ಹಮ್ಮಿಕೊಂಡ ಶ್ರೀ ಅಸ್ಕಿ ಹಾಳ ಗೋವಿಂದ ದಾಸರ ಸ್ಮರಣೋತ್ಸವದ ಗೋವಿಂದಗಾನ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯ ಚಿಂತಕರು, ವಾಗ್ಮಿಗಳು, ಕನಕಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸ್ವಾಮಿರಾವ್ ಕುಲಕರ್ಣಿ ಕಲಬುರ್ಗಿಯವರಿಗೆ ಸಿರಿ ಗೋವಿಂದ ವಿಠ್ಠಲ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಗುವುದೆಂದು ಕಾರ್ಯಕ್ರಮದ ಆಯೋಜಕ ಹಾಗೂ ಖ್ಯಾತ ಗಾಯಕ ಡಾ. ರಾಯಚೂರು ಶೇಷಗಿರಿ ದಾಸ ಅವರು ತಿಳಿಸಿದ್ದಾರೆ
ಡಾ. ಸ್ವಾಮಿ ರಾವ್ ಕುಲಕರ್ಣಿಯವರು 71 ಕೃತಿಗಳ ಮೂಲಕ ದಾಸ ಸಾಹಿತ್ಯದ ಸೇವೆಯನ್ನು ಅನನ್ಯವಾಗಿ ಮಾಡಿದ್ದಾರೆ.
ವಿಶೇಷವಾಗಿ ಲಿಂಗದಹಳ್ಳಿಯ ರಾಮದಾಸರ ಕೀರ್ತನೆಗಳು ಬದುಕು, ಸಾಹಿತ್ಯ,ಸಮಗ್ರ ಕೀರ್ತನೆಗಳ ಕೃತಿಯು ಅತ್ಯಂತ ಮೌಲ್ಯಯುಕ್ತವಾಗಿದೆ.
ಕರ್ನಾಟಕ ಸರ್ಕಾರದಿಂದ ಕನಕಶ್ರೀ ಪ್ರಶಸ್ತಿ, ಮಂತ್ರಾಲಯ ಮಠದಿಂದ ವಿಜಯೇಂದ್ರ ಪ್ರಶಸ್ತಿ,ಟಿಟಿಡಿ ಯಿಂದ ಪುರಂದರ ದಾಸಾನುಗ್ರಹ ಪ್ರಶಸ್ತಿ, ಜಗನ್ನಾಥ ವಿಠ್ಠಲ ಪ್ರಶಸ್ತಿ, ಸದ್ಭಾವನಾ ಪ್ರಶಸ್ತಿ, ದಾಸ ಸಿರಿ ಪ್ರಶಸ್ತಿ,ಜ್ಞಾನ ಪ್ರಶಸ್ತಿ,ಮುಂತಾದ ಪ್ರಶಸ್ತಿಗಳ ಪುರಸ್ಕೃತರಾದ ಇವರಿಗೆ ದಿನಾಂಕ 3 ರಂದು ನಡೆಯುವ ಕಾರ್ಯಕ್ರಮದಲ್ಲಿ ' ಸಿರಿ ಗೋವಿಂದ ವಿಠ್ಠಲ' ಪ್ರಶಸ್ತಿಯನ್ನು ಪ್ರಶಸ್ತಿ ಫಲಕ ಮತ್ತು ಧನ ಪುರಸ್ಕಾರದೊಂದಿಗೆ ಸನ್ಮಾನಿಸಿ ಗೌರವಿಸಲಾಗುವುದೆಂದು
ಡಾ. ರಾಯಚೂರ ಶೇಷಗಿರಿ ದಾಸ್ ಅವರು ಪತ್ರಿಕಾ ಪ್ರಕಟಣೆ ಮುಖಾಂತರ ತಿಳಿಸಿದ್ದಾರೆ.

Comments
Post a Comment