ಶ್ರೀ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವ 'ಗೋವಿಂದ ಗಾನ' ಕರಪತ್ರ ಬಿಡುಗಡೆ.

ಜಯ ಧ್ವಜ ನ್ಯೂಸ್ , ರಾಯಚೂರು, ಸೆ.22- ಇದೆ ಅಕ್ಟೋಬರ್ 3 ಮತ್ತು 4 ಶನಿವಾರ ಮತ್ತು ಆದಿವಾರ ರಂದು ಸಂಜೆ ನಗರದ ರಂಗಮಂದಿರದಲ್ಲಿ ಶ್ರೀ ಅಸ್ಕಿ ಹಾಳ ಗೋವಿಂದ ದಾಸರ ಸ್ಮಣೋತ್ಸವದ ಅಂಗವಾಗಿ ಹಮ್ಮಿಕೊಂಡ ಗೋವಿಂದ ಗಾನ ಕಾರ್ಯಕ್ರಮದ ಕರಪತ್ರ ಗಳನ್ನು ಸೋಮವಾರ ಸಂಜೆ ಜವಾಹರ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಕರಪತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಬಿಡುಗಡೆಗೊಳಿಸಲಾಯಿತು. 


ಈ ಸಂದರ್ಭದಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಮುರಳಿಧರ ಕುಲಕರ್ಣಿ ಅವರು ಗೋವಿಂದ ಗಾನ ಕಾರ್ಯಕ್ರಮವು ಪ್ರತಿ ವರ್ಷ ಅತ್ಯಂತ


ವಿಜ್ರಂಭಣೆಯಿಂದ ವರ್ಣ ರಂಜಿತವಾಗಿ ಭಕ್ತಿ ಭಾವವನ್ನು ಸೃಷ್ಟಿಸುವ ಕಾರ್ಯಕ್ರಮ ನಗರದಲ್ಲಿ ಜರುಗುತ್ತಿದೆ ಈ ಕಾರ್ಯಕ್ರಮವು ನಾಡಿನ ಖ್ಯಾತ ಗಾಯಕರಾದ ಡಾ.ರಾಯಚೂರ ಶೇಷಗಿರಿ ದಾಸ್ ಅವರ ನೇತೃತ್ವದಲ್ಲಿ ಜರುಗುತ್ತಿದ್ದು ಈ ಕಾರ್ಯಕ್ರಮಕ್ಕೆ ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರು ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನವನ್ನು ನೀಡಲಿದ್ದಾರೆ. ನಾಡಿನ ಹೆಸರಾಂತ ಗಾಯಕರು ಪ್ರವಚನಕಾರರು ಭಾಗವಹಿಸಲಿದ್ದಾರೆ.


ಈ ಕಾರ್ಯಕ್ರಮಕ್ಕೆ  ಸರ್ವರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು. 

 ಕಾರ್ಯಕ್ರಮದಲ್ಲಿ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ರಾಮಾಚಾರ ಹಾಗೂ ಮಠಾಧಿಕಾರಿಗಳಾದ ಆನಂದ ಆಚಾರ ಅವರು ಕರಪತ್ರಗಳಿಗೆ ಪೂಜೆ ಸಲ್ಲಿಸಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.


 ಈ ಸಂದರ್ಭದಲ್ಲಿ ಸುರೇಶ್ ಕಲ್ಲೂರ್, ಪ್ರಸನ್ನ ಆಲಂಪಲ್ಲಿ, ರವೀಂದ್ರ ಕುಲಕರ್ಣಿ, ಜಯಕುಮಾರ ದೇಸಾಯಿ ಕಾಡ್ಲೂರು , ಗೋವಿಂದ ದಾಸ್, ವೇಣುಗೋಪಾಲ್ ವರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments

Popular posts from this blog