ಸಾವಿರ ದೇವರ ಸಂಸ್ಥಾನ    ಕಿಲ್ಲೇಬೃಹನ್ಮಠದಲ್ಲಿ ಶರನ್ನವರಾತ್ರಿ ಅಂಗವಾಗಿ ಶ್ರೀದೇವಿ ಮಹಾಪುರಾಣ ಪ್ರವಚನಕ್ಕೆ  ಚಾಲನೆ:
          ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗೆ ನವರಾತ್ರಿ ಆಚರಣೆ - ಕರೆಮ್ಮ ನಾಯಕ     
                                       ಜಯಧ್ವಜ ನ್ಯೂಸ್  ,ರಾಯಚೂರು,ಅ.12-  ಇಂದಿನ ದಿನ ಮಾನಗಳಲ್ಲಿ ಮಕ್ಕಳಿಗೆ ಶಿಕ್ಷಣ ಸಂಸ್ಕೃತಿ, ಸಂಸ್ಕಾರದಲ್ಲಿ ಒಳಿತನ್ನು ಕಲಿಸಿ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆ ಪಡೆಯಲು ಮಹಿಳೆಯರು ಮು‌ಂದಾಗಲು ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಕರೆ ನೀಡಿದರು. ಬಾನುವಾರ ರಾತ್ರಿ      ನಗರದ ಶ್ರೀ108 ಸಾವಿರ ದೇವರ ಸಂಸ್ಥಾನ ಕಿಲ್ಲೇಬೃಹನ್ಮಠದಲ್ಲಿ ನಾಡಹಬ್ಬ ದಸರಾ  ಹಬ್ಬದ ಅಂಗವಾಗಿ  88 ನೇ ವರ್ಷದ ಶ್ರೀದೇವಿ ಮಹಾಪುರಾಣ ಪ್ರವಚನದ ಉದ್ಘಾಟನಾ ಸಮಾರಂಭ ದಲ್ಲಿ ಬಾಗವಹಿಸಿ ಮಾತಾನಾ ಡಿದರು. ಶಾಂತಿ ಸೌಹಾರ್ದಕೆ  ವೇದಿಕೆಯಾಗಿ ಒಂಬತ್ತು ಮಹಿ ಳೆಯರಿಂದ  ಶರವನ್ನವ ರಾತ್ರಿ ಉತ್ಸವಗಳಿಗೆ ಮುಖ್ಯವಾಗಿ ಮಹಿಳಾ ತಂಡದ ಸದಸ್ಯರು ಜ್ಯೋತಿ ಪ್ರಜ್ವಲಿಸುವಂತೆ ಮಾಡಿರುವ ಸ್ವಾಮೀಜಿಯವರ ಶ್ರಮಕೆ ಸದಾಋಣಿಯಾಗಿ ಇರುತ್ತವೆ ಎಂದರು.

ಮಠಗಳು ಜನರಿಗೆ ಸಂಸ್ಕಾರ, ಸಂಸ್ಕೃತಿ. ಆಚಾರ ವಿಚಾರ. ಸನಾತನ ಸಂಪ್ರದಾಯವನ್ನು ಕಲಿಸುವಿಕೆ ಅವಕಾಶವನ್ನು ಕಲ್ಪಿಸಿ ಕೊಡುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ ನಗರದ ಶಾಸಕರಾದ ಶಿವರಾಜ್ ಪಾಟೀಲ್ ಮಾತಾನಾಡುತ್ತ ರಾಯಚೂರಿನಲ್ಲಿ ಮೈಸೂರು ದಸರಾ ಮಾದರಿ ರೀತಿಯಲ್ಲಿ  ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ನೆರ ವೆರಸುತ್ತಿರುವುದು ಶ್ಲಾಘಿಸಿದ ರು. ಭಕ್ತರು ಅದರ ಸದುಪ ಯೋಗ ಪಡೆದುಕೊಂಡರೆ ಜೀವನ ಶೈಲಿಯನ್ನು ರೂಪಿಸಿಕೊಂಡಂತಾಗುತ್ತದೆ ಎಂದರು. ಸಾನಿಧ್ಯವನ್ನು ಶ್ರೀ ಮಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ದೇವದುರ್ಗ ಶಿಖರಮಠದ ಶ್ರೀ ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಸಮಾರಂಭ ಉದ್ದೇಶಿಸಿ ನಿರ್ಮಲಾ ಬೆಣ್ಣೆ. ವಿಜಯಲಕ್ಷ್ಮಿ ಪಾಟೀಲ್. ಎನ್. ಶಂಕರಪ್ಪನವರು ಹರೀಶ ನಾಡಗೌಡರು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಪಕ್ಷದ  ಮಹಿಳಾ ಘಟಕ ಅಧ್ಯಕ್ಷೆ ನಿರ್ಮಲ ಬೆಣ್ಣೆ, ಬಿಜೆಪಿ ಪಕ್ಷದ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷ ವಿಜಯ ರಾಜೇಶ್ವರಿ ಗೋಪಿಶೆಟ್ಟಿ. ದೇವದುರ್ಗ ತಾಲೂಕಿನ ಜನತಾದಳ  ಪಕ್ಷದ ತಾಲೂಕ ಮಹಿಳಾ ಘಟಕ ಅದ್ಯಕ್ಷೆ ರೇಣುಕಾಸ್ವಾಮಿ, ಜಿಲ್ಲಾ ಅರೋಗ್ಯ ‌ಕುಟುಂಬ ಕಲ್ಯಾಣಾಧಿಕಾರಿ ಡಾ.ನಂದಿತ, ಮಹಾನಗರ ಪಾಲಿಕೆ ಆಡಳಿತ ಅಧಿಕಾರಿ ಸಂತೋಷ ರಾಣಿ, ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಅನಿತಾ ಹಿರೇಮನಿ, ಮಾನ್ವಿ ಭೂ ಮಾಪಕ ದಾಖಲೆಗಳ ಸಹಾಯಕ ನಿರ್ದೇಶಕಿ ತಾರಕೇಶ್ವರಿ, ಅಖಿಲ ಕರ್ನಾಟಕ ಮಹಿಳಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ್, ನಗರ ಸಭೆಯ ಮಾಜೀ ಸದಸ್ಯೆ ರತ್ನಪ್ರಶಾಂತಿ, ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಶಂಕರಪ್ಪ, ನ್ಯಾಯವಾದಿಗಳ ಸಂಘದ ಜಿಲ್ಲಾಧ್ಯಕ್ಷ ಶಿವ ಶಂಕರ್ ವಕೀಲರು, ಮಹಾನಗರ ಪಾಲಿಕೆ  ಮಾಜಿ ಸದಸ್ಯರಾದ ದರೂರು ಬಸವನಗೌಡ, ಹರೀಶನಾಡ ಗೌಡ, ನರಸಪ್ಪ ಯಕ್ಲಾಸಪುರ, ಬಾಲಮಾರಮ್ಮ ದೇವಸ್ಥಾನ ಅಧ್ಯಕ್ಷ ಕೆ.ಟಿ. ನರಸಣ್ಣ, ಪೂರ್ಣಿಮಾ ಚಿತ್ರಮಂದಿರ ಮಾಲೀಕರಾದ ಕೇಶವ ರೆಡ್ಡಿ, ಹಿರಿಯ ವೈದ್ಯರಾದ ಡಾ.ನಿಜಗುಣ ಶಿವಯೋಗಪ್ಪ ಜವಳಿ, ಮಹೇಶ್ ಪಾಟೀಲ್, ಸತೀಶ ಕುಮಾರ್ ಭಾಗವ ಹಿಸಿದ್ದರು. ಶ್ರೀ ದೇವಿ ಪುರಾಣ ಪ್ರವಚನಕಾರ ವೇದ ಮೂರ್ತಿ ಶರಭಯ್ಯ ಶಾಸ್ತ್ರಿಗಳು ಕಂಬಾಳಿ ಮಠ ಬಳಗಾನೂರು, ತಬಲಸಾತಿ ಬ್ರಹ್ಮೇಂದ್ರ ಮಂಜರ್ಲ, ಗುರುಪಾದಯ್ಯ ಸ್ವಾಮಿ, ರೇಣುಕಾ ಸ್ವಾಮಿ, ವೀರೇಶ, ಕೇಶವಮೂರ್ತಿ ಭಾಗವಹಿಸಿದ್ದರು
.

Comments

Popular posts from this blog