ಗಿರಿ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶರಣ ಚಿಂತನ ಶಿವಾನುಭವ ಗೋಷ್ಟಿ ಉಧ್ಘಾಟನೆ : ಹೆಣ್ಣು ಸಂಸಾರದ ಕಣ್ಣು - ಅನಿತಾ ಹಿರೇಮನಿ
ಜಯ ಧ್ವಜ ನ್ಯೂಸ್, ರಾಯಚೂರು, ಅ.14- ನಗರದ ಮಾರುತಿ ನಗರ ಬಡಾವಣೆಯ ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಮಂದಿರದಲ್ಲಿ ನಡೆದ 59 ಶರಣ ಚಿಂತನ ಶಿವಾನುಭವ ಗೋಷ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾರಗೃಹ ಅಧಿಕ್ಷಕರಾದ ಅನಿತಾ ಹಿರೇಮನಿಯವರು 12ನೇ ಶತಮಾನದಲ್ಲಿ ಬಸವಣ್ಣನವರು ಮಾನವ ತತ್ವವನ್ನು ಸಾರಿದ ಮಹಾ ಮಾನವತಾವಾದಿ ಕಾಯಕಯೋಗಿ ಕ್ರಾಂತಿಯೋಗಿ ಬಸವಣ್ಣನವರು ಕಾಯಕ ತತ್ವದಿಂದ ದಾಸೋಹವನ್ನು, ಕಾಯಕದ ಕುರಿತು ಅನುಭವ ಮಂಟಪದಲ್ಲಿ ಶರಣರು ಚಿಂತನೆಗಳನ್ನು ಮಾಡಿ ವಚನಗಳ ಮೂಲಕ ಸಮಾಜಕ್ಕೆ ಸಾರಿದ ಮಹಾನ್ ಸಾಧಕರು ಶರಣರು , ಬಟ್ಟೆಯು ಮಾಸಿದುಡೆ ಮಡಿವಾಳ ಬಟ್ಟೆ ಶುಭ್ರ ಮಾಡುವನು ಮನವು ಮಾಸಿದೊಡೆ ಏನು ಮಾಡುವೆ? ಎನ್ನುವ ಪ್ರಶ್ನೆ ಬಂದಾಗ ಇಂತಹ ಶರಣ ಚಿಂತನ ಗೋಷ್ಠಿಗಳಿಂದ ವೈಚಾರಿಕತೆ ಜ್ಞಾನದ ನುಡಿಗಳಿಂದ ಮಾಸಿದ ಮನವನ್ನು ತೊಳೆಯಬಹುದಾಗಿದೆ ಎಂಬ ಅರಿವನ್ನು ಇಟ್ಟುಕೊಂಡು ಶ್ರೀ ಗಿರಿ ಅಭಯಂಜನೇಯ ಸ್ವಾಮಿ ಸೇವಾ ಸಮಿತಿ ಶರಣರ ಚಿಂತನ ಶಿವಾನುಭವ ಗೋಷ್ಠಿಯನ್ನು ಹಮ್ಮಿಕೊಂಡು ಇಂದಿನ ಆಧುನಿಕ ಬದುಕಿನಲ್ಲಿ ಸುಂದರ ಪರಿಸರದ ವಾತಾವರಣದಲ್ಲಿ ತಮ್ಮೆಲ್ಲರನ್ನು ಒಟ್ಟಿಗೆ ಸೇರಿಸಿ ಮನುಷ್ಯನರ ಜೀವನದಲ್ಲಿ ಪ್ರಶಾಂತತೆಯನ್ನು ಮಾನಸಿಕ ನೆಮ್ಮದಿಯನ್ನು ತರುವ ವಾತಾವರಣ ಇದಾಗಿದ್ದು ಇಂತಹ ನಗರ ಪ್ರದೇಶದಲ್ಲಿ ಎಲ್ಲರನ್ನ ಸೇರಿಸಿ ಜೀವನದ ಬದುಕಿನಲ್ಲಿ ನಮ್ಮ ಪಾತ್ರವೇನು? ನಾನು ಯಾರು ಎನ್ನುವ ಪ್ರಶ್ನೆಗಳಿಗೆ ಉಪನ್ಯಾಸಗಳಿಂದ ಉತ್ತರ ನೀಡುತ್ತಾ ನೈತಿಕ ಜೀವನ ಸಾಗಿಸುವ ಮಾರ್ಗವನ್ನು ತೋರುವ ಮಾರ್ಗ ಅತ್ಯದ್ಭುತವಾಗಿದೆ ಎಂದು ತಿಳಿಸುತ್ತಾ ಅಂದಿನ ಅನುಭವ ಮಂಟಪ ಇಂದಿನ ಸಂವಿಧಾನವಾಗಿದೆ ಅನುಭವ ಮಂಟಪದಲ್ಲಿ ಎಲ್ಲ ಶರಣರು ತಮ್ಮ ತಮ್ಮ ಕಾಯಕ ಮಾಡುತ್ತಾ ಒಂದು ಕಡೆ ಸೇರಿ ಚರ್ಚೆಯ ಮೂಲಕ ವಚನಗಳನ್ನು ಬರೆದರು. ಇಂದಿನ ದಿನಮಾನಗಳಲ್ಲಿ ಕೌಟುಂಬಿಕ ಕಲಹಗಳು ಜಾಸ್ತಿಯಾಗಿ ನ್ಯಾಯಾಲದ ಮೆಟ್ಟಿಲು ಹತ್ತಿ ಆರ್ಥಿಕವಾಗಿ ಮಾನಸಿಕವಾಗಿ ತುಂಬಾ ನೋವುಗಳನ್ನು ಅನುಭವಿಸಬೇಕಾಗುತ್ತದೆ. ಕುಟುಂಬದ ಹಿರಿಯರನ್ನು ಅತ್ತೆ ಮಾವಂದಿರನ್ನು ಚನ್ನಾಗಿ ನೋಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿ ಉತ್ತಮ ಪ್ರಜೆಗಳನ್ನು ಮಾಡಿ ಸಮಾಜಕ್ಕೆ ನೀಡುವ ಕೆಲಸ ಹೆಣ್ಣು ಮಕ್ಕಳು ಮಾಡಬೇಕದದ್ದು ಹೆಣ್ಣು ಮಕ್ಕಳ ಜವಾಬ್ದಾರಿಯಾಗಿದೆ ಹೆಣ್ಣು ಸಂಸಾರದ ಕಣ್ಣು ಯಂದು ಮಾರ್ಮಿಕವಾಗಿ ಮಹಿಳೆಯರಿಗೆ ಕರೆ ನೀಡಿದರು.
ಶರಣ ಹಡಪದ ಅಪ್ಪಣ್ಣ ಇವರ ಜೀವನ ಮೌಲ್ಯಗಳು ವಿಷಯ ಕುರಿತು ವೇದಾತ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ ತಿಮ್ಮಯ್ಯ ಶೆಟ್ಟಿ ಇಲ್ಲೂರು ಇವರು ಉಪನ್ಯಾಸ ನೀಡುತ್ತಾ ಹನ್ನೆರಡನೇ ಶತಮಾನದ ಬಸವಾದಿ ಶರಣರಲ್ಲಿ ಒಬ್ಬರಾದ ಹಡಪದ ಅಪ್ಪಣ್ಣನವರ ವಚನಗಳಲ್ಲಿ ಒಂದಾದ "ವೇಷ ನೋಡಿ ಭಕ್ತನೆನಬೇಡ, ಭಾಷೆ ನೋಡಿ ಜ್ಞಾನಿಯನಬೇಡ, ಆಸೆ ನೋಡಿ ಆಸಕ್ತನೆನಬೇಡ, ನಮ್ಮ ಬಸವ ಪ್ರಿಯ ಕೂಡಲ ಚೆನ್ನಬಸವಣ್ಣ ಶರಣರ ನಡೆ ನೋಡಿ ನುಡಿ ನೋಡಿ ನಂಬಬೇಕು ನಿಜವಾದ ಶರಣ ನನ್ನು ಹೇಗೆ ಗುರುತಿಸಬೇಕು" ಎಂದು ಈ ವಚನದಲ್ಲಿ ಕಾಣುತ್ತೆವೆ, ಮಾತು, ಆಚರಣೆ, ಸತ್ಯ ಮಾರ್ಗದಿಂದ ಬದುಕಿದಾಗ ಜೀವನವು ಅತ್ಯಂತ ಮೌಲ್ಯತವಾಗುತ್ತದೆ ಎಂಬ ಸಂದೇಶ ಇವರದಾಗಿದೆ ಶರಣರ ಆಶಯದಂತೆ ಮಾಸಿಕ ಶರಣರ ಚಿಂತನೆಗಳನ್ನು ಹಮ್ಮಿಕೊಂಡು ದಾಸೋಹ ನಡೆಸಿಕೊಂಡು ಬರುತ್ತಿರುವುದು ಮಾತ್ರವಲ್ಲ ಶ್ರೀ ಗಿರಿ ಅಭಯ ಆಂಜನೇಯ ಸ್ವಾಮಿ ಸೇವಾ ಟ್ರಸ್ಟ್ ನವರು ಅದ್ಭುತ ಅನುಭವ ಮಂಟಪ ನಿರ್ಮಾಣ ಮಾಡುತ್ತಿರುವುದು ನನಗೆ ತುಂಬ ಹರ್ಷವನ್ನು ತಂದಿದೆ ಮತ್ತು ಪ್ರತಿ ಶರಣ ಚಿಂತನ ಗೋಷ್ಠಿಯಲ್ಲೂ ಅನ್ನ ದಾಸೋಹ ನಡೆಸಿಕೊಂಡು ಬರುತ್ತಿರುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರಾಸ್ತಾವಿಕವಾಗಿ ಶ್ರೀ ಬಿ ಬಸವರಾಜ್ ಸೇವಾ ಸಮಿತಿ ಅಧ್ಯಕ್ಷರು ಮಾತನಾಡುತ್ತಾ ಕಳೆದ 58 ತಿಂಗಳಿಂದ ಶರಣ ಚಿಂತನೆ ಗೋಷ್ಠಿ ಜೊತೆಗೆ ಅನ್ನದಾಸೋಹ ಹಮ್ಮಿಕೊಂಡು ಅನೇಕ ಹಿರಿಯ ಉಪನ್ಯಾಸಕರನ್ನು ಹಾಗೂ ವಿವಿಧ ಮಠಗಳ ಸ್ವಾಮೀಜಿಯವರನ್ನು ಕರೆಹಿಸಿ ನಮ್ಮ ಮಾಸಿದ ಮನದ ಮೈಲಿಗೆಯನ್ನು ತೊಳೆಯುವ ಕೆಲಸ ಮಾಡುತ್ತಾ ಬಂದಿದ್ದೇವೆ.ಇಂಥ ವಿಚಾರಗಳಿಂದ ಸಮಾಜದಲ್ಲಿ ಮತ್ತು ಕುಟುಂಬಗಳಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ ನಮ್ಮ ನಮ್ಮ ಕಾಯಕದಿಂದ ಬಂದ ಹಣದಲ್ಲಿ ದಾಸೋಹ ಮಾಡುತ್ತ ಬಂದಿರುವುದು ಮತ್ತು ದಾಸೋಹದಲ್ಲಿ ಮತ್ತು ಅನುಭವ ಮಂಟಪ ನಿರ್ಮಾಣದಲ್ಲಿ ಶರಣ ಭಕ್ತರು,ಚಿಂತಕರು, ಹಿತೈಸಿಗಳು, ನಮ್ಮ ಜೊತೆ ಕೈ ಜೋಡಿಸಿರುವುದು ತುಂಬಾ ಶ್ಲಾಘನೀಯವಾಗಿದೆ. ಅಂದಿನ ಅನುಭವ ಮಂಟಪದ ಮಾದರಿಯಲ್ಲಿ ನಮ್ಮ ಮಂದಿರದಲ್ಲಿ ಅನುಭವ ಮಂಟಪದ ಅಭಿವೃದ್ಧಿ ಕಾರ್ಯವನ್ನು ನಡೆಸಿದ್ದೇವೆ . ಈ ಅನುಭವ ಮಂಟಪದಲ್ಲಿ ಮುಂದಿನ ದಿನಗಳಲ್ಲಿ ನಾಟಕ ಕಲೆ ಸಂಗೀತ ಸಾಹಿತ್ಯ ಶರಣರ ಚಿಂತನೆಗಳು ಸಾಮಾಜಿಕ ಇನ್ನಿತರ ಕಾರ್ಯಕ್ರಮಗಳಿಗೆ ಸಭೆ ಸಮಾರಂಭಗಳಿಗೆ ಈ ಅನುಭವ ಮಂಟಪವನ್ನು ಮುಕ್ತವಾಗಿ ಮೀಸಲು ಇಡುತ್ತೇವೆ. ಶರಣರ ಸಂತರ ವಿಚಾರಗಳನ್ನು ರಾಯಚೂರು ನಗರದ ಪ್ರತಿ ಮನೆ.. ಮನೆಗೆ. ಮನ.. ಮನಕ್ಕೆ ಮುಟ್ಟಿಸುವ ಕೆಲಸ ಮಾಡುತ್ತೇವೆ. ಇದಕ್ಕೆ ಸೂರ್ಯೋದಯ ವಾಕಿಂಗ್ ಕ್ಲಬ್, ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿ, ಮಾರುತಿ ನಗರ ಬಡಾವಣೆಯ ಎಲ್ಲರ ಸಹಕಾರ ಹಾಗೂ ರಾಯಚೂರು ನಾಗರಿಕರ ಸಹಕಾರ ಇರುವ ಕಾರಣದಿಂದ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು. ವೇದಿಕೆ ಮೇಲೆ ಬಿಜೆಪಿ ಪ್ರದಾನ ಕಾರ್ಯದರ್ಶಿ ರವೀಂದ್ರ ಜಲ್ದಾರ್, ಹಡಪದ ಸಮಾಜದ ಮುಖಂಡರಾದ ಧನಂಜಯ, ಸೋಮಶೆಟ್ಟಿ ಶ್ರೀನಿವಾಸ, ಅನ್ನ ದಾಸೋಹಿಗಳ ಸಂಯೋಜಕರಾದ ಡಿ. ಬಿ. ಕಟ್ಟಿಮನಿ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಶೇಷ ಸನ್ಮಾನವನ್ನು ಹಮ್ಮಿಕೊಂಡು ನೂತನ ಎಲೆಕ್ಟ್ರಿಕಲ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀನಿವಾಸ ರೆಡ್ಡಿ ಇವರನ್ನು, ನೂತನ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಮು ಗಾಣದಾಳ್ ಇವರನ್ನು, ಜಿಲ್ಲಾ ಪ್ರಾಥಮಿಕ ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮೇಶ ಇವರನ್ನು,ರಾಜ್ಯ ಶಿಕ್ಷಕರ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಸುಮಾ ಮೇಡಂ ಇವರನ್ನು,ಕೃಷ್ಣ ಜಲ ಭಾಗ್ಯ ನಿಗಮದ ನಿವೃತ್ತ ಎ ಇ ಇ ಗುರುಲಿಂಗಪ್ಪ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇಂದಿನ ಅಮಾವಾಸ್ಯೆ ಯ ಅನ್ನ ದಾಸೋಹಿಗಳನ್ನು ಸನ್ಮಾಸಿ ಗೌರವಸಲಾಯಿತು.
ಆರಂಭದಲ್ಲಿ ಕೆ ಕರಿಯಪ್ಪಇವರು ಪ್ರಾರ್ಥನೆ ಮಾಡಿದರು, ಭೀಮಣ್ಣ ಗಂಗವಾರ ಕಾರ್ಯಕ್ರಮ ನಿರೂಪಣೆ ಮಾಡಿದರು. ಸ್ವಾಗತವನ್ನು ಷಣ್ಮುಖಪ್ಪ ವಲ್ಕಮ್ ದಿನ್ನಿ ಮಾಡಿದರು ಕೊನೆಯಲ್ಲಿ ಚಂದ್ರಶೇಖರ್ ಯಾಕ್ಲಾಸಪುರ ಇವರು ವಂದಿಸಿದರು.ಈ ಕಾರ್ಯಕ್ರಮದಲ್ಲಿ ಸೂರ್ಯೋದಯ ವಾಕಿಂಗ್ ಕ್ಲಬ್ ನ ಪದಾಧಿಕಾರಿಗಳು,ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿಯ ಪದಾಧಿಕಾರಿಗಳು, ಮಹಿಳಾ ಮಂಡಳಿ ಪದಾಧಿಕಾರಿಗಳು, ಯುವ ಗಜಾನನ ಸಮಿತಿ ಯುವಕರು ಭಾಗವಹಿಸಿದ್ದರು.

Comments
Post a Comment