ವಿಧಾನ ಪರಿಷತ್ ಚುನಾವಣೆ:
ವಿವಿಧ ಶಾಲಾ ಕಾಲೇಜುಗಳಲ್ಲಿ  ವಸಂತ್ ಕುಮಾರ್ ರಿಂದ ಮಿತಿಯಾಚನೆ
  .                                           ಜಯ ಧ್ವಜ ನ್ಯೂಸ್  , ರಾಯಚೂರು, ಅ.17- ಈಶಾನ್ಯ ಶಿಕ್ಷಕರ‌ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಇಂದು ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳು, ಕೆಪಿಸಿಸಿ‌ ಕಾರ್ಯಾಧ್ಯಕ್ಷರು ಹಾಗೂ ವಿಧಾನ‌ ಪರಿಷತ್ ಸದಸ್ಯರಾದ ಎ.ವಸಂತಕುಮಾರ ಅವರು ನಗರದ ವಿವಿಧ‌ ಶಾಲಾ ಕಾಲೇಜುಗಳಿಗೆ ಭೇಟಿ ಕೊಟ್ಟು ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ‌ ನೀಡುವಂತೆ ಕೋರಿದರು.

ಇಂದು  ಜಿಲ್ಲೆಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರನ್ನು ಭೇಟಿಯಾಗಿ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರು ಪರವಾಗಿ ಮತದಾನ ಮಾಡುವಂತೆ ಹೇಳಿದರು, ಸರಕಾರವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ, ವಿಶೇಷವಾಗಿ ಅಲ್ಪಸಂಖ್ಯಾತ ಮಕ್ಕಳು‌ ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ‌ ಜರುಗಿಸಲಾಗುತ್ತಿದೆ, ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವದು ಎಂದು ಹೇಳಿದರು.


ಕಾಂಗ್ರೆಸ್ ಪಕ್ಷದ ಸರಕಾರವು ರಾಜ್ಯದಲ್ಲಿ ಶಿಕ್ಷಕರ‌ ಸಮಸ್ಯೆಗಳನ್ನು ಆಧ್ಯತೆಯ‌ ಮೇರೆಗೆ ಬಗೆಹರಿಸುತ್ತಿದೆ, ಒಪಿಎಸ್ ಜಾರಿಗೆ‌ ಈಗಾಗಲೇ ವರದಿ ಪಡೆಯಲಾಗಿದೆ ಮತ್ತು ಸರಕಾರ ಒಪಿಎಸ್ ಜಾರಿಗೆ ಬದ್ದವಾಗಿದೆ. ಶರಣಪ್ಪ ಮಟ್ಟೂರು ಅವರು ಒಂದು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದು, ಶಿಕ್ಷಕರ‌ ಹಾಗೂ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಶ್ರಮವಹಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಡಾ.ರಝಾಕ ಉಸ್ತಾದ, ಮಹಾನಗರ‌ ಪಾಲಿಕೆ ಮಾಜಿ ಸದಸ್ಯರಾದ ಬಸವರಾಜ ದರೂರು, ರಾಮಕೃಷ್ಣ ನಾಯಕ, ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳಾದ ಮೊಹಮ್ಮದ ಇಕ್ಬಾಲ್, ಅಬ್ದುಲ್ ಹೈ ಫೆರೋಜ್, ಮೊಹಮ್ಮದ ಇಕ್ಬಾಲ್ ಕೋಸಗಿ, ಅಬ್ದುಲ್ ಸಮದ್, ಮೊಹಮ್ಮದ‌ ಇಬ್ರಾಹಿಂ, ಸೈಯದ ಜುಬೇರ್, ಶೇಖ ಮಹಿಬೂಬ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Comments

Popular posts from this blog