ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಅ.23 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ  ಮತದಾನ: ಮತದಾರರು ನಿಗದಿತ ಸಮಯದಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿ - ಜಿಲ್ಲಾಧಿಕಾರಿ ಪೂವಿತಾ ಎಸ್.

ಜಯ ಧ್ವಜ ನ್ಯೂಸ್ ,ರಾಯಚೂರು, ಅ.22- ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ  ಅಕ್ಟೋಬರ್ 23ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4ಗಂಟೆವರೆಗೆ ಕ್ಷೇತ್ರದಾದ್ಯಂತ ಮತದಾನ ನಡೆಯಲಿದ್ದು, ಮತದಾರರು ನಿಗದಿತ ಸಮಯದಲ್ಲಿ ಮತಗಟ್ಟೆಗೆ ಆಗಮಿಸಿ, ಚುನಾವಣಾ ಆಯೋಗದ ಸೂಚನೆಗಳನ್ನು ಪಾಲಿಸುವ ಮೂಲಕ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಬೇಕೆಂದು ಕರ್ನಾಟಕ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ತಿಳಿಸಿದ್ದಾರೆ.

ಭಾರತ ಚುನಾವಣಾ ಆಯೋಗವು ದಿನಾಂಕ:22-09-2026 ರಂದು ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಧೈಯವಾರ್ಷಿಕ ಚುನಾವಣೆಯನ್ನು ಘೋಷಣೆ ಮಾಡಿದ್ದು, ಚುನಾವಣೆಯ ಚುನಾವಣಾ ಮಾದರಿ ನೀತಿ ಸಂಹಿತೆಯು ಕ್ಷೇತ್ರಾದ್ಯಾಂತ ಜಾರಿಯಲ್ಲಿರುತ್ತದೆ. ಕಲಬುರಗಿ ವಿಭಾಗದ ರಾಯಚೂರು ಜಿಲ್ಲೆಯು ಕರ್ನಾಟಕ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಈ ಚುನಾವಣೆಗೆ ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ ಕಲಬುರಗಿ ರವರು ಚುನಾವಣಾಧಿಕಾರಿ ಅಲ್ಲದೇ ಮತದಾರರ ನೋಂದಣಾಧಿಕಾರಿಗಳಾಗಿರುತ್ತಾರೆ, ಜಿಲ್ಲಾಧಿಕಾರಿ ರಾಯಚೂರು ಇವರು ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ.

ಅರ್ಹ ಮತದಾರರಿಗೆ ಸಹಾಯಕ್ಕಾಗಿ, ಸಹಾಯವಾಣಿ ಕೇಂದ್ರವನ್ನು ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈಗಾಗಲೇ ಸ್ಥಾಪಿಸಲಾಗಿದ್ದು, ಸಹಾಯವಾಣಿ ಕೇಂದ್ರದ ಸಂಖ್ಯೆ 08532-228551 ಇರುತ್ತದೆ. ಅರ್ಹ ಮತದಾರರು ಈ ಸಹಾಯವಾಣಿ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಚುನಾವಣೆಯ ಮತಗಟ್ಟೆ ಸಿಬ್ಬಂದಿಗಳ ನೇಮಕಾತಿ,  ಪ್ರಕ್ರಿಯೆಯನ್ನು ನಿಯಮಾನುಸಾರ ನೇಮಿಸಿ ದಿನಾಂಕ:12.10.2026ರAದು ಮೊದಲನೇ ಸುತ್ತಿನ ಹಾಗೂ 17.10.2026ರಂದು ಎರಡನೇ ಸುತ್ತಿನ ತರಬೇತಿಯನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಿ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಸದರಿ ಚುನಾವಣೆಯ ಮತದಾನವು ದಿನಾಂಕ23-10-2026 ರಂದು ಬೆಳಿಗ್ಗೆ 8 ಗಂಟೆಯಿAದ ಸಾಯಂಕಾಲ 4ಗಂಟೆಯ ವರೆಗೆ ಅರ್ಹ ಮತದಾರರಿಂದ ಮತದಾನ ನಡೆಯಲಿದೆ.

ಮತದಾನ ಕೇಂದ್ರಗಳು: ರಾಯಚೂರಿನ ಎಪಿಎಮ್‌ಸಿ ಕಟ್ಟಡ, ಶ್ರೀಶಾರದ ಶಾಲೆ, ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ತಾಲೂಕು ಪಂಚಾಯತ್ ಕಟ್ಟಡ, ಜಿಹೆಚ್‌ಪಿಎಸ್ ಯರಮರಸ್ ಕ್ಯಾಂಪ್, ಮಾನವಿಯ ಟಿಎಮ್‌ಸಿ ಕಚೇರಿ, ಸಿರವಾರದ ಸರ್ಕಾರಿ ಪಿಯು ಕಾಲೇಜ್, ದೇವದುರ್ಗದ ತಹಶೀಲ್ದಾರ್ ಕಚೇರಿ, ಗಬ್ಬೂರು ಗ್ರಾಮ ಪಂಚಾಯತ್, ಜಾಲಹಳ್ಳಿ ಗ್ರಾಮ ಪಂಚಾಯತ್, ಅರಕೇರಾ ಗ್ರಾಮ ಪಂಚಾಯತ್, ಲಿಂಗಸುಗೂರಿನ ತಹಶೀಲ್ದಾರ್ ಕಚೇರಿ ಹಾಗೂ ಹಟ್ಟಿ ಜೂನಿಯರ್ ಕಾಲೇಜ್, ಸಿಂಧನೂರಿನ ತಹಶೀಲ್ದಾರ್ ಕಚೇರಿ, ಮಸ್ಕಿಯ ಮುನ್ಸಿಪಾಲ್ ಕಚೇರಿ ಸೇರಿದಂತೆ ರಾಯಚೂರು ಜಿಲ್ಲೆಯ ಒಟ್ಟು 16 ಮತಗಟ್ಟೆಗಳಲ್ಲಿ ಒಟ್ಟು 5402 ಮತದಾರರ ಪೈಕಿ 3178 ಪುರಷರು ಹಾಗೂ 2224 ಸ್ತ್ರೀಯರು ಮತ ಚಲಾವಣೆ ಮಾಡಲಿದ್ದಾರೆ.

ಈ ಮೇಲಿನಂತೆ ಅರ್ಹ ಮತದಾರರು ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅನುಕ್ರಮವಾಗಿ ಆಯೋಗದಿಂದ ನೀಡಲಾಗಿರುವ ನೆರಳ ಬಣ್ಣದಪೆನ್ನಿನ ಮುಖಾಂತರ ಮಾತ್ರ ಪ್ರಾಶಸ್ತ ಮತವನ್ನು ಚಲಾಯಿಸತಕ್ಕದ್ದು. ಕ್ರಮ ಸಂಖ್ಯೆ ಕೈ ಬಿಟ್ಟು ಮತ ಚಲಾಯಿಸಲಾದ ನಂತರದ ಮತಗಳು ಅಮಾನ್ಯಗೊಳ್ಳಲಿವೆ. ಹಾಗೂ ಬೇರೆ ಇತರೆ ಬಣ್ಣದ ಪೆನ್ನಿನಿಂದ ಮತ ಚಲಾಯಿಸದಲ್ಲಿ ಹಾಗೂ ಗುರುತುಗಳನ್ನೊಳಗೊಂಡ ಚಲಾಯಿಸಲಾದ ಮತಗಳು ಸಹ ಅಮಾನ್ಯಗೊಳ್ಳಲಿವೆ.

ದಾಖಲಾತಿಗಳು: ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್,ಭಾರತೀಯ ಪಾಸ್‌ಪೋರ್ಟ್,ರಾಜ್ಯ/ಕೇಂದ್ರ ಸರ್ಕಾರ, ಸಾರ್ವಜನಿಕ ವಲಯದ ಉದ್ಯಮಗಳು, ಸ್ಥಳೀಯ ಸಂಸ್ಥೆಗಳು ಅಥವಾ ಇತರ ಖಾಸಗಿ ಕೈಗಾರಿಕಾ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ನೀಡಿರುವ ಸೇವಾ ಗುರುತಿನ ಚೀಟಿ, ಸಂಸದರು /ಶಾಸಕರು /ವಿಧಾನ ಪರಿಷತ್ ಸದಸ್ಯರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು, ಶಿಕ್ಷಕರ/ಪದವೀಧರರ ಕ್ಷೇತ್ರಕ್ಕೆ ಸಂಬAಧಿಸಿದ ಮತದಾರರು ಉದ್ಯೋಗಿಗಳಾಗಿರುವ ಶಿಕ್ಷಣ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿ, ವಿಶ್ವವಿದ್ಯಾನಿಲಯವು ನೀಡಿರುವ ಪದವಿ/ಡಿಪ್ಲೊಮಾ ಪ್ರಮಾಣಪತ್ರ (ಮೂಲ ಪ್ರತಿ), ಸಕ್ಷಮ ಪ್ರಾಧಿಕಾರವು ನೀಡಿರುವ ದೈಹಿಕ ಅಂಗವೈಕಲ್ಯ ಪ್ರಮಾಣಪತ್ರ (ಮೂಲ ಪ್ರತಿ), ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನೀಡುವ ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿಗಳಲ್ಲಿ ಯಾವುದಾದರೊಂದು ಗುರುತಿನ ಚೀಟಿಯನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ.

ಚುನಾವಣೆಯ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯಗಳ ಸಂದರ್ಭದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ದಿನಾಂಕ: 23-10-2026ರಂದು ನಡೆಯುವ ಮತದಾನಕ್ಕೆ ಸಂಬಂಧಿಸಿದಂತೆ ಪ್ರತಿ ಮತಗಟ್ಟೆಯಲ್ಲಿಯೂ ಭದ್ರತೆಗಾಗಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತಪೆಟ್ಟಿಗೆಗಳ ಸಾಗಣೆಗೂ ಅಗತ್ಯ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಮತದಾನ ಕೇಂದ್ರಗಳ ಸುತ್ತಮುತ್ತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ನಿಯಮಾನುಸಾರ ದಿನಾಂಕ: 21-10-2026 ರಂದು ಸಂಜೆ 4 ಗಂಟೆಯಿAದ ದಿನಾಂಕ: 23-10-2026 ರಂದು ಸಂಜೆ 6 ಗಂಟೆಯವರೆಗೆ ಮದ್ಯ ಮಾರಾಟ ಮತ್ತು ಮದ್ಯಪಾನ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ದಿನಾಂಕ:23-10-2026ರAದು ನಡೆಯುವ ಮತದಾನಕ್ಕೆ ಸಂಬಂಧಿಸಿದಂತೆ ದಿನಾಂಕ:22-10-2026ರAದು ಆಯಾ ತಾಲ್ಲೂಕಿನ ತಹಶೀಲ್ದಾರರ ಕಚೇರಿಯಲ್ಲಿ ಮಸ್ಟರಿಂಗ್ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಹಾಗೂ ಡಿ-ಮಸ್ಮರಿಂಗ್ ಕಾರ್ಯವನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ ರಾಯಚೂರಿನಲ್ಲಿ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ.                  ಅ. 27 ರಂದು ಮತ ಎಣಿಕೆ : ಮತ ಎಣಿಕೆಯು ಅಕ್ಟೋಬರ್ 27ರ ಬೆಳಿಗ್ಗೆ 8ಗಂಟೆಯಿಂದ ಕಲಬುರಗಿ ವಿಶ್ವವಿದ್ಯಾಲಯದ ಗಣಿತ ವಿಭಾಗದ ಕಟ್ಟಡದಲ್ಲಿರುವ ಭಾಸ್ಕರ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Comments

Popular posts from this blog