ಎಂಎಲ್ಸಿ ಚುನಾವಣೆ: ವಿವಿಧ ಮತಗಟ್ಟೆ ಕೇಂದ್ರಗಳ ಬಳಿ ವಸಂತಕುಮಾರ್ ಭೇಟಿ.               
                                                                                             ಜಯ ಧ್ವಜ ನ್ಯೂಸ್, ರಾಯಚೂರು, ಅ.23- ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ‌ ಪರಿಷತ್ ಚುನಾಚಣೆ ಹಿನ್ನಲೆಯಲ್ಲಿ ಇಂದು ರಾಯಚೂರು ನಗರದ ವಿವಿಧ ಮತಗಟ್ಟೆ ಕೇಂದ್ರಗಳಿಗೆ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ, ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎ.ವಸಂತಕುಮಾರ ಅವರು ಭೇಟಿ ನೀಡಿ ಮತದಾನದ ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಿದರು.

ಮತಗಟ್ಟೆಗೆ ಬರುವ ಮತದಾರರನ್ನು  ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಕೋರಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಕೆಪಿಸಿಸಿ ವಕ್ತಾರ ಡಾ.ರಝಾಕ ಉಸ್ತಾದ, ರಾಮಕೃಷ್ಣ ನಾಯಕ, ಬಸವರಾಜ ದರೂರು, ಜಿ.ಶಿವಮೂರ್ತಿ,‌ಮೊಮ್ಮದ ರಫಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Comments

Popular posts from this blog