ಯರಗೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ: ಅಧ್ಯಕ್ಷರಾಗಿ ಮೊಹಮ್ಮದ್ ನಿಜಾಮುದ್ದೀನ್, ಉಪಾಧ್ಯಕ್ಷರಾಗಿ ವೆಂಕಟೇಶ್ ನಾಯಕ್ ಅವಿರೋಧ ಆಯ್ಕೆ
ಜಯ ಧ್ವಜ ನ್ಯೂಸ್ ,ರಾಯಚೂರು,ಅ.17- ಯರಗೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯು ಸಂಘದ ಕಾರ್ಯಲಯದಲ್ಲಿ ಜರುಗಿತು. ಇಂದಿನ ಅಧ್ಯಕ್ಷರ ಸ್ಥಾನದ ಚುನಾವಣೆಗೆ ಮಹ್ಮದ್ ನಿಜಾಮುದ್ದೀನ್ ಇವರು ಏಕ ಮಾತ್ರ ನಾಮಪತ್ರ ಸಲ್ಲಿಸಿದ್ದರು ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ವೆಂಕಟೇಶ ನಾಯಕ್ ಕಮಲಾಪುರ್ ಇವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅದರಂತೆ ನಿಯಮನುಸಾರ ರಿಟರ್ನಿಂಗ್ ಅಧಿಕಾರಿಯವರು ಸಭೆ ಪ್ರಾರಂಭ ಮಾಡಿ ಸಭೆಯಲ್ಲಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಹೆಸರು ಓದಿ ಅಧ್ಯಕ್ಷರು ಉಪಾಧ್ಯಕ್ಷರ ಸ್ಥಾನಗಳಿಗೆ ಸಲ್ಲಿಸಿದ ನಾಮಪತ್ರಗಳು ಕ್ರಮಬದ್ಧ ವಾಗಿದ್ದು ಸದರಿ ನಾಮಪತ್ರಗಳು
ಅಂಗೀಕರಿಸಲಾಗಿದೆ ಎಂದು ತಿಳಿಸಿ, ಆದ್ದರಿಂದ ಈ ಸಂಘದ ಅಧ್ಯಕ್ಷರ ಸ್ಥಾನಕ್ಕೆ ಮಹ್ಮದ್ ನಿಜಾಮುದ್ದೀನ್ ಇವರು 5 ವರ್ಷಗಳವರೆಗೆ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ ಎಂದು ಘೋಷಿಸದರು. ವೆಂಕಟೇಶ್ ನಾಯಕ್ ಕಮಲಾಪುರ್ ಇವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಯವರು ಘೋಷಿಸಿದರು. ಸದರಿ ಸಭೆಯಲ್ಲಿ ನಿರ್ದೇಶಕರಾದ ಮೊಹಮ್ಮದ್ ರಫಿ, ನಾಗೇಶ್ ಕುರುಬರು ದಂಡು, ಎ.ಶಿವಪ್ಪ ಸಾಹುಕಾರ, ಅಂಜಿನಮ್ಮ ಕಬ್ಬೆರು, ಫಕೀರಪ್ಪ , ನಾಗರಾಜ್, ಬಾಲರಾಜು, ತಾಯಮ್ಮ, ಈರಮ್ಮ, ಸೀಮಾನ್ ಉಪಸ್ಥಿತರಿದ್ದರು. ಮತ್ತು ತದನಂತರ ಸಭೆಯಲ್ಲಿ ರಾಯಚೂರು ಆರ್ ಡಿ ಸಿ ಸಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ವಿಜಯ ಕುಮಾರ್ ಪಾಟೀಲ್ ಮತ್ತು ಜಿಲ್ಲಾ ಸಹಕಾರ ಮಹಾ ಮಂಡಲ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಪಾಟೀಲ್ ಶಾವಂತಗೇರಿ ಉಪಸ್ಥಿತರಿದ್ದರು.
ಸಭೆಯಲ್ಲಿ ಮುಖ್ಯ್ ಕಾರ್ಯನಿರ್ವಾಣಾಧಿಕಾರಿ ಫಾರೂಕ್ ಹುಸೇನ್ ಮತ್ತು ಕ್ಷೇತ್ರಧಿಕಾರಿ ನಿತಿನ್ ಕುಮಾರ್ ಪಾಟೀಲ್ ಉಪಸ್ಥಿತರಿದ್ದರು.
ನಂತರ ಭಾರಿ ವಿಜಯೋತ್ಸವದಿಂದ ನೂತನ ಅಧ್ಯಕ್ಷರು,ಉಪಾಧ್ಯಕ್ಷರು ನಿರ್ದೇಶಕರು ಇವರಿಗೆ ಶುಭಾಶಯಗಳು ಕೋರಲಾಯಿತು. ಯೆರಗೇರಾ, ಕಮಲಾಪುರ್, ಅನವಾರ್, ಗೊನವಾರ್, ಮಂಜರ್ಲಾ ಮತ್ತು ತುಂಟಾಪುರ ಗ್ರಾಮಗಳ ರೈತ ಬಾಂಧವರು, ಮುಖಂಡರು ಭಾಗವಹಿಸಿದ್ದರು.
ಮಹ್ಮದ್ ನಿಜಾಮುದ್ದೀನ್ ಇವರು ಸತತ ನಾಲ್ಕನೇ(15 ವರ್ಷ ಅವಧಿ ಪೂರ್ಣಗೊಳಿಸಿ) ಅವಧಿಗೆ ಯೆರಗೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಯಭೇರಿ ಬಾರಿಸಿದಂತಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments
Post a Comment