ಜಿಲ್ಲಾಡಳಿತ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ:
ಯುವಕರು ವಾಲ್ಮೀಕಿ ಜೀವನ ಚರಿತ್ರೆಯಿಂದ ಸ್ಫೂರ್ತಿ ಪಡೆಯಬೇಕು- ಎಸ್ಪಿ ಅರುಣಾಂಗ್ಷು ಗಿರಿ

ಜಯ ಧ್ವಜ ನ್ಯೂಸ್ ,ರಾಯಚೂರು,ಅ. 26-  ಯುವ ಜನಾಂಗವು ದುಶ್ಚಟಗಳಿಂದ ದೂರ ಇರುವ ಮೂಲಕ ಮಹರ್ಷಿ ವಾಲ್ಮೀಕಿಯವರ ಜೀವನ ಚರಿತ್ರೆಯಿಂದ ಪ್ರತಿಯೊಬ್ಬರೂ ಸ್ಫೂರ್ತಿ ಪಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ ಅವರು ಹೇಳಿದರು.

ಅವರಿಂದು  ನಗರದ ಆಶಾಪೂರ ರಸ್ತೆಯ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.


ವಾಲ್ಮೀಕಿಯವರು ಹಲವಾರು ವರ್ಷಗಳ ಕಾಲ ತಪಸ್ಸು  ಮಾಡುವಾಗ ನಾರದ ಮುನಿಯವರು ಬಂದು ಅವರಿಗೆ ದರ್ಶನ ನೀಡಿದರು. ಬಳಿಕ ಅವರು ಮರಾ ಎಂಬ ಮಂತ್ರವನ್ನು ಜಪಿಸುತ್ತಾ 'ರಾಮ' ನಾಮವನ್ನು ಸಿದ್ಧಿಸಿಕೊಳ್ಳುವ ಮೂಲಕ ಮಹಾಕಾವ್ಯವಾದ ರಾಮಾಯಣವನ್ನು ರಚಿಸಿದರು.24,000 ಶ್ಲೋಕಗಳನ್ನು 7 ಭಾಗಗಳಲ್ಲಿ ರಚಿಸಿರುವ ರಾಮಾಯಣವು ನಮ್ಮ ಭಾರತ ವರ್ಷದ ಅತಿ ಪವಿತ್ರವಾದ ಗ್ರಂಥವಾಗಿದೆ ಎಂದರು.


ಇಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ.

ಜಿಲ್ಲೆಯಲ್ಲಿ ಇಂದಿನ ಯುವ ಜನತೆಯಲ್ಲಿ  ಕುಡಿತ ಹಾಗೂ ಡ್ರಗ್ಸ್ ಸೇವನೆ ಅತಿ ಹೆಚ್ಚಾಗುತ್ತಿದ್ದು, ಇವುಗಳ ಸೇವನೆಯಿಂದ ದೈಹಿಕ ಹಲ್ಲೆ ಹಾಗೂ ಗುಂಪು ಘರ್ಷಣೆಗಳಂತಹ ಅಹಿತಕರ ಘಟನೆಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಯುವಕರು ದಯಮಾಡಿ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ವಾಲ್ಮೀಕಿ ಮಹರ್ಷಿಗಳು ತಮ್ಮ ವನವಾಸದಲ್ಲಿ ಧನುರ್ವಿದ್ಯೆ ಕ್ರೀಡೆಯನ್ನು ಅಭಿವೃದ್ಧಿಪಡಿಸಿಕೊಂಡಂತೆ, ಯುವಕರೂ ಯಾವುದಾದರೂ ಒಂದು ಕ್ರೀಡೆಯಲ್ಲಿ  ನಿರತರಾಗಿ ದುಶ್ಚಟಗಳಿಂದ ದೂರವಿರಬೇಕು. ಅಲ್ಲದೆ ರಾಯಚೂರು ಜಿಲ್ಲೆಯಲ್ಲಿ  ಹೆಲ್ಮೆಟ್ ಧರಿಸುವವರ ಸಂಖ್ಯೆ ಕಡಿಮೆಯಿದ್ದು, ಹೆಲ್ಮೆಟ್ ಧರಿಸದೆ ಸಂಚರಿಸಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.


ಹೆಲ್ಮೆಟ್ ಕಡ್ಡಾಯವಾಗಿ ಧರಿಸುವುದು ಹಾಗೂ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ವಿದ್ಯೆ ಕಲಿತು, ಆರ್ಥಿಕ, ಸಾಮಾಜಿಕ ಹಾಗೂ ಸರ್ಕಾರಿ ಚಟುವಟಿಕೆಗಳಲ್ಲಿ ಯಶಸ್ಸು ಸಾಧಿಸಿ ದೇಶದ ಅಭಿವೃದ್ಧಿಗೆ ಯುವಕರು ಶ್ರಮಿಸಬೇಕು ಎಂದರು.

ಈ ವೇಳೆ ಉಪನ್ಯಾಸಕರಾಗಿ ಡಾ.ಬಸವರಾಜ ಮಾತನಾಡಿ, ರಾಯಚೂರು ವಿಶ್ವವಿದ್ಯಾನಿಲಯವನ್ನು ಮಹರ್ಷಿ ವಾಲ್ಮೀಕಿ 

ವಿಶ್ವವಿದ್ಯಾನಿಲಯ ಅಂತಹ ನಾಮಕರಣ ಆಯಿತು, ಅದರ ಒಳಗೆ ವಾಲ್ಮೀಕಿ ಅಧ್ಯಯನ ಪೀಠವನ್ನು ಸ್ಥಾಪಿಸಬೇಕು. ವಾಲ್ಮೀಕಿ ಪೀಠ 

ಅಧ್ಯಯನದ ಅಗತ್ಯಹಿನ್ನೆಲೆಯಲ್ಲಿಯೇ ನಾವು ವಾಲ್ಮೀಕಿ ಸಮುದಾಯದ ಅಧ್ಯಯನವನ್ನು ಮಾಡುವಂತಹ ಅವಕಾಶಗಳು ಸಿಗುತ್ತವೆ ಎಂದರು.


ಮಹರ್ಷಿ ವಾಲ್ಮೀಕಿಯು ಮಾನವತಾ ವಾದವನ್ನು ಹೇಳಿದ್ದಾರೆ.

ಮನುಷ್ಯತ್ವವನ್ನು ಪ್ರತಿಪಾದನೆ ಮಾಡಿದ್ದಾರೆ, ಕರುಣೆಯನ್ನು ಪ್ರತಿಪಾದನೆ ಮಾಡಿದ್ದಾರೆ. ವಾಲ್ಮೀಕಿ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರಕಾರ ತರಬೇತಿ ನೀಡುವ ವ್ಯವಸ್ಥೆಇದೆ. ವಿದ್ಯಾರ್ಥಿಗಳಿಗೆ ಸರಕಾರದಿಂದ ಪ್ರೋತ್ಸಾಹ ಧನ ಸಿಗ್ತಾ ಇದೆ. ಮತ್ತು ಸರಳ ವಿವಾಹಗಳಿಗೆ ಪ್ರೋತ್ಸಾಹಧನ ಇದೆ. ಉದ್ಯಮ ಆರಂಭ ಮಾಡಲಿಕ್ಕೆ ಸಾಲ 

ಸೌಲಭ್ಯಗಳು ಕೂಡ ಇದೆ ಅರಣ್ಯ ಹಕ್ಕುಕಾಯ್ದೆ ಅಡಿಯಲ್ಲಿ ಭೂಮಿ ಇಲ್ಲದೆ ಇರುವಂತವರಿಗೆ ಭೂಮಿಯನ್ನು ಪಡೆದುಕೊಳ್ಳುವ ಅವಕಾಶಗಳು ಇವೆ. ಇವುಗಳನ್ನು ಸಮಾಜದವರು ಸದ್ಬಳಿಕೆ ಮಾಡಿಕೊಳ್ಳಬೇಕೆಂದರು.


ಈ ವೇಳೆ ಸಮಾಜದ ಪ್ರತಿಭಾವಂತ ಹತ್ತನೇ ತರಗತಿ, ಪಿಯುಸಿ, ಪದವಿ,  ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ, ರಾಯಚೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತ ಮುರಳೀಧರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸುನೀತಾ, ದೇವದುರ್ಗ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಿ.ವೈ.ವಾಲ್ಮೀಕಿ, ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವೆಂಕಟೇಶ, ಸಮಾಜದ ಮುಖಂಡರಾದ ಪಾಂಡುರಂಗ ನಾಯಕ ವಕೀಲರು, ರಘವೀರ್ ನಾಯಕ ಸೇರಿದಂತೆ  ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಸಮಾಜದವರು ಇದ್ದರು. 


                                        
ಶ್ರೀ ಮಹರ್ಷಿ ವಾಲ್ಮೀಕಿ  ಭಾವಚಿತ್ರದ ಮೆರವಣಿಗೆ: ಬೆಳಿಗ್ಗೆ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಜಿಲ್ಲಾಡಳಿತದಿಂದ ಪೂಜೆ ನೆರವೇರಿಸಲಾಯಿತು ನಂತರ ಅಲಂಕೃತ ರಥದಲ್ಲಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಿತು. ಜಿಲ್ಲಾಧಿಕಾರಿ ಪೂವಿತ.ಎಸ್, ಜಿ.ಪಂ ಸಿಇಓ ಈಶ್ವರ ಕುಮಾರ ಕಾಂದೂ , ಎಸ್ಪಿ ಅರುಣಾಂಗ್ಷುಗಿರಿ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಗಣ್ಯರು, ಮಹಿಳೆಯರು , ಮಕ್ಕಳು ಭಾಗವಹಿಸಿದ್ದರು.

Comments

Popular posts from this blog