ನಗರದಲ್ಲಿ ಹಾಡು ಹಗಲೆ ಅಮಾಯಕ ವ್ಯಾಪಾರಸ್ಥನ ಕಗ್ಗೊಲೆ ಖಂಡಿಸಿ ಕನ್ನಡ ಪರ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ

 ಜಯ ಧ್ವಜ  ನ್ಯೂಸ್ ,ರಾಯಚೂರು, ಅ.27- ನಗರದಲ್ಲಿ ಹಾಡು ಹಗಲೆ ಅಮಾಯಕ ವ್ಯಾಪಾರಸ್ಥನ ಕಗ್ಗೊಲೆಯಾಗಿದೆ    ಅಸುರಕ್ಷಿತ ನಗರ, ಸಾರ್ವಜನಿಕರಲ್ಲಿ ಭಯದ ವಾತಾವರಣ ಖಂಡಿಸಿ  ರಾಯಚೂರುಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ, ಜಿಲ್ಲಾ ಕನ್ನಡ ಕ್ರಿಯಾ ಸಮಿತಿ, ಕನ್ನಡ ಮಿತ್ರ ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು .

ಜಿಲ್ಲೆಯಲ್ಲಿ ಈ ಹಿಂದೆ ದಲಿತ ಯುವಕರು, ಮಹಿಳೆಯರ ಅಮಾನುಷವಾಗಿ ಅತ್ಯಾಚಾರ ವೆಸಗಿ ಕೊಲೆಗಳ  ನೆನಪು ಮರೆಯುವದರಲ್ಲೆ, ಮತ್ತೊಂದು  ಹಾಡು-ಹಗಲೆ ಜನಸಂದಣಿಯಲ್ಲಿ ಅಮಾಯಕ ವ್ಯಾಪಾರಸ್ಥನನ್ನು ನಗರದಲ್ಲಿ  ಸಾಲವನ್ನು ನೀಡದ ಕ್ಷುಲ್ಲಕ ವಿಚಾರವಾಗಿ ಕೊಲೆ ನಡೆದಿದೆ ಅಮಾಕನನ್ನು  ನಂಬಿದ ಕುಟುಂಬದ ಬೆನ್ನೆಲುಬು ಆಗಿದ್ದ ವ್ಯಕ್ತಿಯ   ಕೊಲೆ ನಗರದ ನಿವಾಸಿಗಳ ಮೇಲೆ ಭಯದ ವಾತಾವರಣ ಉಂಟಾಗಿದೆ.


 ಇಂದು ಸಾರ್ವಜನಿಕರ ಮಧ್ಯದಲ್ಲಿಯೇ ಅಮಾನುಷವಾಗಿ, ಭಯ ಭೀತಿ ಇಲ್ಲದೆ ಇನ್ನೋಬ್ಬ ಯುವಕಅಮಾಯಕ ಯುವಕನನ್ನು ಕೊಲೆ ಮಾಡುತ್ತಾನೆ ಎಂದರೆ ಅವನು ಗಾಂಜಾ ಅಥವಾ ಆಫಿಮು ವ್ಯಸನಿಎಂಬುದನ್ನು ಸಂಶಯ ಪಡುವದರಲ್ಲಿ ಅನುಮಾನವೆ ಇಲ್ಲ. ನಗರದಲ್ಲಿ ಯುವಕರು ಗಾಂಜಾ ಇತ್ಯಾದಿಗಳಲ್ಲಿದುಶ್ಚಟಗಳಿಗೆ ಬಲಿಯಾಗಿದ್ದಾರೆ. ಇದನ್ನು ಕಾನೂನು ಸುವ್ಯವಸ್ಥೆ ಯಾವಾಗ ನಿಯಂತ್ರಿಸುತ್ತದೆ? ಅಮಾಯಕ

ಯುವಕನು ಬಲಿಯಾದ ಕೊಲೆಗಡುಕನಿಗೆ ಬಂಧಿಸಲಾಗಿದೆ ಆದರೆ, ಇಂತಹ ಘಟನೆಗಳು ಮರುಕಳಿಸಬಾರದೆಂದರೆ, ಜಿಲ್ಲಾಡಳಿತ ಮತ್ತು ಪೋಲಿಸ್ಇಲಾಖೆ ವಿಶೇಷವಾಗಿ, ಗಂಭೀರವಾಗಿ ದುಶ್ಚಟಗಳಿಗೆ ಯುವಕರು ಬಲಿಯಾಗುವದನ್ನು ಮತ್ತು ಗಾಂಜಾಇನ್ನಿತರ ಸಾರಾಬರಾಜು ಮಾಡುವವರನ್ನು ಶೋದಿಸಿ, ಬೇದಿಸಿ ಹೆಡೆಮುರಿ ಕಟ್ಟಿ ತಕ್ಷಣ ಸೂಕ್ತ ಕಾನೂನು

ಕ್ರಮ ಜರುಗಿಸಿ ಜಿಲ್ಲೆಯನ್ನು, ನಗರವನ್ನು ಸುಸ್ಥಿತಿಗೆ  ತರಬೇಕು.

 ಇಂದು ಜಂಟಿಯಾಗಿ ಮೂರು ಸಂಘಟನೆಗಳು ಸೇರಿ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸುತ್ತಿರುವುದು ಸಮಗ್ರವಾಗಿ ಜಿಲ್ಲೆಯಲ್ಲಿ ಪುನಃ ಈ ಘಟನೆಗಳು ಮರುಕಳಿಸದಂತೆ ತಾವು ತಮ್ಮ ಬೀಡುವಿಲ್ಲದ ಕರ್ತವ್ಯದಲ್ಲಿ ಸಮಯ ತೆಗೆದು ಪೋಲೀಸ್ ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ ಮಾಡಲು  ಆಗ್ರಹಿಸುತ್ತದೆ ಎಂದರು. ಈ ಸಂದರ್ಭದಲ್ಲಿ  ಅಶೋಕ ಕುಮಾರ್ ಸಿ.ಕೆ.ಜೈನ್,   ಜಿಲ್ಲಾಧ್ಯಕ್ಷರು ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಮಿತ್ರ ಕೂಟ  ಅಧ್ಯಕ್ಷ ರಫೀಕ್ ಆಹ್ಮದ್, ರಾಮಣ್ಣ ಮ್ಯಾದಾರ್ ಪ್ರಧಾನಿ ಕಾರ್ಯದರ್ಶಿ  ಜಿಲ್ಲಾ ಕನ್ನಡ ಕ್ರಿಯಾ ಸಮಿತಿ , ಇನ್ನಿತರರು ಉಪಸ್ಥಿತರಿದ್ದರು.







Comments

Popular posts from this blog