ಯುವಜನರ ವಿಶಿಷ್ಟ ಶಕ್ತಿ ಗುರುತಿಸುವ ಕೆಲಸವಾಗಲಿ ಅಯ್ಯಪ್ಪಯ್ಯಾ ಹುಡಾ
ಜಯ ಧ್ವಜ ನ್ಯೂಸ್ ರಾಯಚೂರು, ಅ.29- ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಸಿ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು. ಅವರಲ್ಲಿ ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹುಟ್ಟಿಸುವಂತೆ ಮಾಡಲು ಸರ್ಕಾರಗಳು ನಡೆಸುವ ಯುವಜನೋತ್ಸವಗಳು ಜಾನಪದ ಸಂಸ್ಕೃತಿಯ ಜೀವಂತಿಕೆಗೆ ಪೂರಕವಾಗಿವೆ ಎಂದು ಸಾಹಿತಿಗಳಾದ ಅಯ್ಯಪ್ಪಯ್ಯಾ ಹುಡಾರವರು ತಿಳಿಸಿದರು.
ನಗರದ ವೇದಾಂತ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಯಚೂರು ಹಾಗೂ ವೇದಾಂತ ಪದವಿ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದವರು ಮಕ್ಕಳಲ್ಲಿ ಹಾಗೂ ಯುವಜನರಲ್ಲಿ ವಿಶಿಷ್ಟ ಶಕ್ತಿಯಿದೆ. ಆ ಶಕ್ತಿಯನ್ನು ಗುರುತಿಸುವ ಕಾರ್ಯವಾಗಬೇಕು. ಸಂಗೀತ, ಕಲೆ, ಸಾಂಸ್ಕೃತಿಕ ಚಟುವಟಿಕೆ, ಸಾಹಿತ್ಯಗಳಿಂದ ಯುವಪೀಳಿಗೆಯು ವಿಮುಖರಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶವನ್ನು ಯುವಜನೋತ್ಸವ ಹೊಂದಿದೆ ಎಂದರು.
ಗಾಯಕರಾದ ಶರಣಪ್ಪ ಗೋನಾಳ್ ರವರು ಮಾತನಾಡಿ ಯುವಕರು ಸಕಾರಾತ್ಮಕ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಯುವಜನೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ತಮಗೆ ಸಿಕ್ಕಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಪ್ರಕಾಶ್ ನಂದಿಯವರು ಮಾತನಾಡಿ ಕಲಾವಿದರು ಬೆಳೆಯಲು ಇಂತಹ ವೇದಿಕೆಗಳು ಸಹಾಯಕವಾಗಲಿವೆ , ಪ್ರತಿಯೊಬ್ಬರಲ್ಲಿಯೂ ಒಂದೊಂದು ವಿಶೇಷ ಆಸಕ್ತಿ,ಅದರಲ್ಲಿ ಪ್ರತಿಭೆ ಇರುತ್ತದೆ.ಅದು ಹೊರಬರಲು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು.ಯಾವುದೇ ಸ್ಪರ್ಧೆಗಳಲ್ಲಿ ಎಲ್ಲರೂ ಗೆಲ್ಲಲಿಕ್ಕೆ ಆಗುವುದಿಲ್ಲ. ಸೋಲು-ಗೆಲುವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸ್ಪರ್ಧಾತ್ಮಕ ಮನೋಭಾವನೆಯಿಂದ ಭಾಗವಹಿಸಬೇಕು. ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಬೇಕು ಎಂದರು.
ಯುವಜನ ಮತ್ತು ಕ್ರೀಡಾ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರಾದ ಈರೇಶ್ ನಾಯಕ್ ರವರು ಮಾತನಾಡಿ ಜಿಲ್ಲೆಯ ಪ್ರತಿಭೆಗಳು ಈ ವೇದಿಕೆಯನ್ನು ಸೂಕ್ತವಾಗಿ ಬಳಸಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲಿ ಇದಕ್ಕೆ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ದೊರಯಲಿದೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದವರ ವಿವರ ಈ ಕೆಳಗಿನಂತಿದೆ:
ಜನಪದ ನೃತ್ಯ (ತಂಡ):ಪ್ರಥಮಸ್ಥಾನ : ಶ್ರೀ ವಿನೋದ್ & ತಂಡ, ಸಿಂಧನೂರು. ದ್ವಿತೀಯಸ್ಥಾನ : ಟಾಗೋರ್ ಕಾಲೇಜು, ರಾಯಚೂರು.
ಜನಪದ ಗೀತೆ (ತಂಡ): ಪ್ರಥಮಸ್ಥಾನ : ಸೂಗೂರೇಶ್ವರ ಯುವಕ ಮಂಡಳಿ, ದೇವಸುಗೂರು. ದ್ವಿತೀಯಸ್ಥಾನ : ಕಲಾಶ್ರೀ & ತಂಡ, ಕೃಷಿ ವಿಶ್ವ ವಿದ್ಯಾಲಯ, ರಾಯಚೂರು.
* *ಚಿತ್ರಕಲೆ (ವೈಯಕ್ತಿಕ):*
ಪ್ರಥಮಸ್ಥಾನ : ಆನಂದ ಸದಾಶಿವ, ಕೃಷಿ ವಿಶ್ವ ವಿದ್ಯಾಲಯ, ರಾಯಚೂರು.
ದ್ವಿತೀಯ ಸ್ಥಾನ : ಸುಮಯ್ಯ, ಮಹಿಳಾ ಸ.ಪ್ರ. ದ ಕಾಲೇಜು, ರಾಯಚೂರು.
ತೃತೀಯಸ್ಥಾನ : ಮಂಜುಳಾ, ಸೇವಾ ಕಾಲೇಜು, ರಾಯಚೂರು.
*ಕವಿತೆ ಬರೆಯುವುದು (ವೈಯಕ್ತಿಕ):*
ಪ್ರಥಮಸ್ಥಾನ : ದೀಪಾ ಎ. ಶಿಂಧೆ
ದ್ವಿತೀಯ ಸ್ಥಾನ : ಪ್ರಿಯಾಂಕ ಕರಿಯಪ್ಪ, ಕುದರಿ.
ತೃತೀಯಸ್ಥಾನ : ಉಮೇಶ್ ಎಮ್ ಜಗಲ್, – ತೃತೀಯ
*ನೂಕ್ಕಾಡ್ ನಾಟಕ* :ಪ್ರಥಮ ಸ್ಥಾನ: ಎಸ್.ಎಸ್.ಎಮ್. ಪದವಿ ಕಾಲೇಜು (ಟ್ಯಾಗೋರ್) , ರಾಯಚೂರು.
ದ್ವಿತೀಯ ಸ್ಥಾನವನ್ನು : ವೇದಾಂತ ಪದವಿ ಕಾಲೇಜು, ರಾಯಚೂರು.
ವಿಜೇತ ಸ್ಪರ್ಧಿಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಈರೇಶ ನಾಯಕ ಬಹುಮಾನವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ವೇದಾಂತ ಪದವಿ ಮಹಾವಿದ್ಯಾಲಯದ ಆಡಳಿತಾಧಿಕಾರಿಗಳಾದ ರಾಕೇಶ್ ರಾಜಲಬಂಡಿ , ಪ್ರಾಂಶುಪಾಲರಾದ ತಿಮ್ಮಯ್ಯಶೆಟ್ಟಿ ಇಲ್ಲೂರು ಸೇರಿದಂತೆ ವಿವಿಧ ಕಲಾವಿದರು ಉಪಸ್ಥಿತರಿದ್ದರು.


Comments
Post a Comment