ಸಿಗರೇಟ್ ಉದ್ರಿ ಕೊಡದಿದ್ದಕ್ಕೆ ಎಲ್ ಬಿ ಎಸ್ ನಗರದಲ್ಲಿ ಅಂಗಡಿ ಮಾಲೀಕನ ಭೀಕರ ಹತ್ಯೆ:
ಕೊಲೆಗಡುಕರ ಬಂಧನಕ್ಕೆ ಆಗ್ರಹಿಸಿ ಆರ್ಯವೈಶ್ಯ ಸಮಾಜದಿಂದ ಮಿಂಚಿನ ಮುಷ್ಕರ.
ಜಯ ಧ್ವಜ ನ್ಯೂಸ್ , ರಾಯಚೂರು, ಅ.24- ನಗರದ ಎಲ್ ಬಿ ಎಸ್ ನಗರದಲ್ಲಿ ಸಿಗರೇಟ್ ಉದ್ರಿ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಕಿರಾಣಿ ಅಂಗಡಿ ಮಾಲೀಕ ಬಾಪೂರು ನರಸಿಂಹ ಎಂಬುವವರನ್ನು ಬರ್ಬರವಾಗಿ ಕೊಲೆಗೈದ ಘಟನೆ ಹಿನ್ನೆಲೆ ಕೊಲೆಗಡುಕರನ್ನು ಬಂಧಿಸುವಂತೆ ಆಗ್ರಹಿಸಿ ಆರ್ಯವೈಶ್ಯ ಸಮಾಜದಿಂದ ಎಸ್ಪಿ ಕಚೇರಿ ಬಳಿ ಮಿಂಚಿನ ಮುಷ್ಕರ ನಡೆಸಲಾಯಿತು.
ನಗರದ ವಿವಿಧ ಬಡಾವಣೆಯ ನೂರಾರು ಸಂಖ್ಯೆಯಲ್ಲಿ ಆರ್ಯವೈಶ್ಯ ಬಾಂಧವರು ಜಿಲ್ಲಾ ಎಸ್ ಪಿ ಕಚೇರಿಗೆ ಆಗಮಿಸಿ ಘಟನೆಯನ್ನು ಖಂಡಿಸಿ ತಕ್ಷಣ ಕೊಲೆಗಡುಕರನ್ನು ಬಂಧಿಸಲು ಆಗ್ರಹಿಸಿ ಮನವಿ ಪತ್ರವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸಲ್ಲಿಸಿದರು.
24 ಘಂಟೆಯಲ್ಲಿ ಪೋಲಿಸ್ ಇಲಾಖೆ ಕೊಲೆಗಡುಕರನ್ನು ಬಂಧಿಸಬೇಕು ಇಲ್ಲವಾದಲ್ಲಿ ಆರ್ಯವೈಶ್ಯ ಸಮಾಜದಿಂದ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಸಾವಿತ್ರಿ ಪುರುಷೋತ್ತಮ ಸೇರಿದಂತೆ ಆರ್ಯವೈಶ್ಯ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಮುಷ್ಕರದಲ್ಲಿ ಉಪಸ್ಥಿತರಿದ್ದರು.



Comments
Post a Comment