ಎಂಎಲ್ಸಿ ಚುನಾವಣೆ ಶೇ.86 ರಷ್ಟು ಮತದಾನ:
    ಮತ ಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ.
                                                                                                                                         ಜಯ ಧ್ವಜ ನ್ಯೂಸ್ , ರಾಯಚೂರು ,ಅ.23- ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ   ಶಾಂತಿಯುತವಾಗಿ ನಡೆದಿದ್ದು ಶೆ.86ರಷ್ಟು ಮತದಾನವಾಗಿದೆ. ಬೆಳಿಗ್ಗೆ 8 ರಿಂದ ಮತದಾನ ಪ್ರಾರಂಭವಾಗಿ ಸಂಜೆ 4ಗಂಟೆ ರವರೆಗೆ ನೆರವೇರಿತು.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸ್ಥಾಪಿಸಲಾದ  ವಿವಿಧ  ಮತಗಟ್ಟೆ ಕೇಂದ್ರದಲ್ಲಿ ಮತದಾರರು ಮತದಾನಗೈದರು.

ಜಿಲ್ಲೆಯಲ್ಲಿ ಒಟ್ಟು  5402 ಅರ್ಹ ಮತದಾರರಿದ್ದು 3178 ಪುರುಷರು, 2224 ಮಹಿಳಾ ಮತದಾರರಿದ್ದು ಅದರಲ್ಲಿ 2787 ಪುರುಷರು,1860 ಮಹಿಳಾ ಮತದಾರರು ಒಟ್ಟು 4647 ಮತದಾರರು ಮತಚಲಾಯಿಸಿದ್ದಾರೆ. ಜಿಲ್ಲಾಧಿಕಾರಿಗಳಾದ ಪೂವಿತಾ .

ಎಸ್ ಹಾಗೂ ಜಿ.ಪಂ ಸಿಇಓ ಈಶ್ವರ ಕುಮಾರ್ ಕಾಂದೂ, ಎಸ್ಪಿ ಅರುಣಾಂಗ್ಶು ಗಿರಿ ಸೇರಿದಂತೆ ವಿವಿಧ ಅಧಿಕಾರಿಗಳು ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಮತಗಟ್ಟೆಗಳ ಬಳಿ ರಾಜಕೀಯ ಪಕ್ಷಗಳ ಮುಖಂಡರು ಭೇಟಿ: 

ನಗರದಲ್ಲಿ ಸ್ಥಾಪಿಸಲಾದ ವಿವಿಧ ಮತಗಟ್ಟೆ ಕೇಂದ್ರಗಳ ಬಳಿ ಮಾಜಿ ಸಚಿವರು ಹಾಗೂ ವಿಧಾನಪರಿಷತ್ ಸದಸ್ಯರಾದ,  ಎನ್.ಎಸ್.ಬೋಸರಾಜು,

ವಿಧಾನ ಪರಿಷತ್ ಸದಸ್ಯರಾದ ಎ. ವಸಂತಕುಮಾರ್, ಶಾಸಕರಾದ ದದ್ದಲ ಬಸನಗೌಡ,

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಶಾಂತಪ್ಪ,  ಮಾಜಿ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ,

ಮುಖಂಡರಾದ ರವಿ ಬೋಸರಾಜು, ಮೊಹಮ್ಮದ್ ಶಾಲಂ ಸೇರಿದಂತೆ ಅನೇಕ ಮುಖಂಡರು ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಪರ ಮತದಾನ ಮಾಡುವಂತೆ ಕೋರಿದರು.

ಇತ್ತ ಬಿಜೆಪಿ ಪಕ್ಷದ ಪರವಾಗಿ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಎಂಎಲ್ಸಿ  ಶಂಕ್ರಪ್ಪ ,

ಭಾರತ ಸರ್ಕಾರದ ಹೆಚ್ ಪಿಐಎಲ್ ಸ್ವತಂತ್ರ ನಿರ್ದೇಶಕರಾದ ಗಿರೀಶ್ ಕನಕವೀಡು, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಂ.ವಿರುಪಾಕ್ಷಿ  ಸೇರಿದಂತೆ  ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಭೇಟಿ ನೀಡಿ ತಮ್ಮ ಪಕ್ಷದ ಅಭ್ಯರ್ಥಿಯಾದ ಶಶೀಲ್ ನಮೋಶಿ ಪರ ಮತ ನೀಡುವಂತೆ ಮನವಿ ಮಾಡಿದರು. ಒಟ್ಟಾರೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣೆ ಮತದಾನ ಶಾಂತಿಯುತವಾಗಿ ನೆರವೇರಿತು. 

Comments

Popular posts from this blog