ಬಿಜೆಪಿ ಸೇವಾ ಜ್ಯೋತಿ ಯಾತ್ರೆ ವಿಕಸಿತ ಭಾರತ ಸಂಕಲ್ಪ ಸಭೆ ಉದ್ಘಾಟನೆ                                                            


ಜಯ ಧ್ವಜ ನ್ಯೂಸ್ , ರಾಯಚೂರು,ಅ.7- ಗುಜರಾತ್ ಮುಖ್ಯ ಮಂತ್ರಿಯಾಗಿ , ದೇಶದ ಪ್ರಧಾನ ಮಂತ್ರಿಯಾಗಿ ನಿರಂತರವಾಗಿ ಅಧಿಕಾರದಲ್ಲಿರುವ ನರೇಂದ್ರ ಮೋದಿವರು 25 ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಇಂದು ಬೆಳಿಗ್ಗೆ ನಗರದ ಮಾ ಆಶಾಪೂರಿ ಫಂಕ್ಷನ್ ಹಾಲ್ ನಲ್ಲಿ ಬಿಜೆಪಿ ಜಿಲ್ಲಾ ಘಟಕ ಆಯೋಜಿಸಿದ್ದ ಸೇವಾ ಜ್ಯೋತಿ ವಿಕಸಿತ ಭಾರತ ಸಂಕಲ್ಪ ಸಭೆಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಬಿಜೆಪಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬೃಹತ್ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ ಕಾರ್ಯಕರ್ತರು ಮೋದಿಯವರ ಅಧ್ಬುತ ಮಾತುಗಳು ಸ್ಪೂರ್ತಿ ತುಂಬಿದಂತಿತ್ತು. 2047 ರ ವಿಕಸಿತ ಭಾರತದ ಕಲ್ಪನೆ , ಮೇಡ್ ಇನ್ ಇಂಡಿಯಾ ಜಗತ್ತಿನ ಶಕ್ತಿಯಾಗುತ್ತದೆ. ಆಡಿಕೊಳ್ಳುವವರ ಮಾತುಗಳಿಗೆ ನಮ್ಮ ಕೆಲಸಗಳು ಉತ್ತರಿಸುತ್ತವೆ. 2021 ರಲ್ಲಿ ಗುಜರಾತ್ ಮುಖ್ಯ ಮಂತ್ರಿ ಆದಾಗ ಸಂಕಲ್ಪಗಳೊಂದಿಗೆ ಹೆಜ್ಜೆ ಇಟ್ಟೆ ಕಷ್ಟಗಳನ್ನು ಮೆಟ್ಟಿಲಾಗಿಸಿಕೊಂಡೆ , ಇಚ್ಛಾಶಕ್ತಿ ಹಿಂದೆ ಜನರ ಆಶೀರ್ವಾದ ಗಟ್ಟಿಯಾಗಿತ್ತು ಹೀಗಾಗಿ ಗುಜರಾತ್ ಬದಲಾವಣೆ ಕಂಡಿತು. ಈಗ 140 ಕೋಟಿ ಭಾರತೀಯರ ಸೇವೆ ಮಾಡುವ ಸೇವಕ ನಾನು ಕರ್ಮಗಳನ್ನು ಹೊತ್ತು ಸಾಗುತ್ತಿದ್ದೇನೆ ಅವೇ ಸಾಕಾರಗೊಳಿಸುತ್ತಿವೆ. 100 ವರ್ಷದ ಹಿಂದೆ ಭಾರತ 40 ಕೋಟಿ ಜನಸಂಖ್ಯೆ ಇರಬಹುದು ಆದರೆ ನಮ್ಮ ಸಂಪತ್ತು ಲೂಟಿ ಮಾಡಿದರು ಚರಕದ ಆಶಯ ಮುರಿದು ಹಾಕಿದರು ಆದರೂ ಭಾರತವನ್ನು ಅಂಗಲಾಚುವ ದೇಶ ಮಾಡಿದರು ಆದರೆ ಇಂದು ಭಾರತ 140 ಕೋಟಿ ಜನಸಂಖ್ಯೆ ಇದೆ ವಿಶ್ವದಲ್ಲಿ ಬಲಿಷ್ಠ ಭಾರತವನ್ನು ಮಾಡುತ್ತಿದ್ದೇವೆ ಹೀಗೆ ಹತ್ತು ಹಲವು ಮೋದಿಯವರು ಲೈವ್ ನಲ್ಲಿ ಆಡಿದ ಮಾತುಗಳು ಅಕ್ಷರಶಃ ಕಾರ್ಯಕರ್ತರಿಗೆ ಶಕ್ತಿ ತುಂಬಿತು .   


ಈ ಸಂದರ್ಭದಲ್ಲಿ  ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ವೀರನಗೌಡ ಲೆಕ್ಕಿಹಾಳ, ನಗರ ಶಾಸಕರಾದ ಡಾ.ಶಿವರಾಜ ಪಾಟೀಲ, ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ, ವಿಧಾನ ಪರಿಷತ್ತು ಸದಸ್ಯ ಎನ್. ರವಿಕುಮಾರ, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಎಂ ಎಲ್ ಸಿ  ಎನ್. ಶಂಕ್ರಪ್ಪ ವಕೀಲರು, ಮಾಜಿ ಶಾಸಕರುಗಳಾದ ಕೆ.ಶಿವನಗೌಡ ನಾಯಕ, ಬಸನಗೌಡ ಬ್ಯಾಗವಾಟ, ಕೆ. ಕರಿಯಪ್ಪ, ಪಕ್ಷದ ಮುಖಂಡರುಗಳಾದ ರಾಜಕುಮಾರ, ತ್ರಿವಿಕ್ರಮ ಜೋಶಿ, ಕೆ.ಎಂ. ಪಾಟೀಲ, ಊಟ್ಕೂರು ರಾಘವೇಂದ್ರ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ರಾಜಗುರು, ರವೀಂದ್ರ ಜಲ್ದಾರ್ , ಜಂಬಣ್ಣ ನಿಲೋಗಲ್, ಮತ್ತು ರಮಾನಂದ ಯಾದವ,ಬಿ.ಗೋವಿಂದ, ಟಿ.ಶ್ರೀನಿವಾಸ ರೆಡ್ಡಿ, ಕಡಗೋಲು ಆಂಜನೇಯ,  ಎನ್. ಶ್ರೀನಿವಾಸ ರೆಡ್ಡಿ, , ಮಹೇಂದ್ರ ರೆಡ್ಡಿ, ಪೋಗುಲ ಶ್ರೀನಿವಾಸ, ಡಾ. ನಾಗರಾಜ ಭಾಲ್ಕಿ,ಪಿ.ಯಲ್ಲಪ್ಪ, ವಿಷ್ಣು ರೆಡ್ಡಿ, ಯು. ನರಸರೆಡ್ಡಿ,   ನರಸಪ್ಪ ಯಕ್ಲಾಸಪೂರು,  ಶರಣಬಸವ ಪಾಟೀಲ ಜೋಳದಡಗಿ,ಶರಣ ಬಸವ ಸೊಪ್ಪಿ ಮಠ, ಬಂಡೇಶ ವಲ್ಕಂದಿನ್ನಿ,  ಕೊಟ್ರೇಶಪ್ಪ ಕೋರಿ, ತಿಮ್ಮಪ್ಪ ಫಿರಂಗಿ, ಮಹಾಂತೇಶ ಮಸ್ಕಿ, ಜೆ.ಎಂ.ಮೌನೇಶ, ಪ್ರದೀಪ ಸಾನಬಾಳ, ರಾಮಚಂದ್ರ ಕಡಗೋಲು,ಪಲುಗುಲ ನಾಗರಾಜ, ವಿಜ್ಞಾನ ವೆಂಕಟೇಶ, ಎನ್.ವಿನಾಯಕ ರಾವ್, ರೂಪಾ ನಾಯಕ, ಲಲಿತಾ ಕಡಗೋಲು,  ಶರಣಮ್ಮ ಕಾಮರೆಡ್ಡಿ ,ಸುಮಾ ಅಶೋಕ ಗಸ್ತಿ, ಸೀತಾ ನಾಯಕ, ಅಶ್ವಿನಿ ಸೇರಿದಂತೆ ಜಿಲ್ಲೆಯ ಎಲ್ಲಾ ಮಂಡಲ ಪ್ರಮುಖರು ಪಾಲ್ಗೊಂಡಿದ್ದರು. ನಂತರ ತೆರೆದ ವಾಹನದಲ್ಲಿ ಅಲಂಕೃತ ಗೊಂಡ ವಾಹನದಲ್ಲಿ ಜ್ಯೋತಿಯನ್ನು ಅಂಬೇಡ್ಕರ್ ವೃತ್ತದವರೆಗೆ ಮೆರವಣೆ ಕೊಂಡೊಯ್ಯಲಾಯಿತು
.

Comments

Popular posts from this blog