ದಾಸ ಪರಂಪರೆಯಲ್ಲಿ ಪ್ರಖ್ಯಾತ ಹರಿದಾಸರು ಶ್ರೀಪ್ರಾಣೇಶ ದಾಸರು- ಮುರಳಿಧರ ಕುಲಕರ್ಣಿ.
ಜಯ ಧ್ವಜ ನ್ಯೂಸ್ , ರಾಯಚೂರು , ಅ.17- ದಾಸ ಸಾಹಿತ್ಯದ ಎರಡನೇ ಘಟ್ಟದ ಪರಂಪರೆ ಪ್ರಾರಂಭವಾಗುವುದು ಅಪರೋಕ್ಷ ಜ್ಞಾನಿಗಳಾದ ಶ್ರೀ ವಿಜಯದಾಸರಿಂದ ಇಂತಹ ಪರಂಪರೆಯಲ್ಲಿ ಅತ್ಯಂತ ಪ್ರಖ್ಯಾತ ಹರಿದಾಸರೆಂದರೆ ಪ್ರಾಣೇಶ ದಾಸರು ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಯವರು ಹೇಳಿದರು.
ಶನಿವಾರ ಸಂಜೆ ನಗರದ ಜವಾಹರ ನಗರ ಬಯಲು ಆಂಜನೇಯ ದೇವಸ್ಥಾನದಲ್ಲಿ ಜರಗಿದ ಶ್ರೀ ಪ್ರಾಣೇಶ ದಾಸರ 245ನೇ ಆರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
17 ಶತಮಾನದಲ್ಲಿ ಶ್ರೀ ಪ್ರಾಣೇಶ ದಾಸರ , ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನಲ್ಲಿ ಜನಿಸಿದ ಇವರು ದಾಸ ಶ್ರೇಷ್ಠರಾದ ಶ್ರೀ ಜಗನ್ನಾಥದಾಸರಿಂದ ಅನುಗ್ರಹಿತಗೊಂಡು ಪ್ರಾಣೇಶ ವಿಠಲ ಅಂಕಿತವನ್ನು ಪಡೆದು ಹಲವಾರು ಸಂಕೀರ್ತನೆಗಳನ್ನು, ಸುಳಾದಿಗಳನ್ನು, ಉಗಾಭೋಗಗಳನ್ನು, ಬಯಲಾಟಗಳನ್ನು ರಚಿಸಿದರು.
ಇವುಗಳಲ್ಲಿ ಬಿಂಬ ಧ್ಯಾನ ಸುಳಾಧಿ, ಪಂಚ ಭೇದ, ತಂತ್ರ ಸಾರೋಕ್ತ ಕೇಶವಾದಿ, ಬುಡ್ಡಿ ಬ್ರಹ್ಮನ ಕಥ, ಪ್ರಹ್ಲಾದ ಚರಿತೆ ಗೋಪಿಕಾ ವಿಲಾಸ, ಮುಂತಾದ ಪ್ರಸಿದ್ಧ ಕೃತಿಗಳು ಮೌಲಿಕ ಕೃತಿಗಳಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರ್ ಅವರು ಮಾತನಾಡಿ ಪ್ರಾಣೇಶ ದಾಸರು ದಾಸ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಹೇಳಿದ ಅವರು ಮುರಳಿಧರ ಕುಲಕರ್ಣಿ ಅವರ ನೇತೃತ್ವದಲ್ಲಿ ಪ್ರತಿ ಹರಿದಾಸರ ಆರಾಧನೆಯನ್ನು ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ನಡೆಸುವುದರ ಮೂಲಕ ದಾಸ ಸಾಹಿತ್ಯದ ಪ್ರಚಾರವನ್ನು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು .
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯರಾದ ವೆಂಕಟರಾವ್ ಕುಲಕರ್ಣಿ, ಬ್ರಾಹ್ಮಣ ಸಮಾಜದ ಮುಖಂಡರಾದ ಪ್ರಸನ್ನ ಅಲಂಪಲ್ಲಿ ಇವರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಬ್ರಾಹ್ಮಣ ಸಮಾಜದ ಮುಖಂಡರಾದ ಹನುಮೇಶ್ ಸರಾಫ್, ಹರಿದಾಸ ಬೌದ್ಧಿಕ ಮಂಟಪದ ಅಧ್ಯಕ್ಷರಾದ ಶ್ರೀ ಸುರೇಶ್ ಕುಲಕರ್ಣಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು.
ಶ್ರೀ ಪ್ರಾಣೇಶ ದಾಸರ ಭಾವಚಿತ್ರಕ್ಕೆ ಅರ್ಚಕರಾದ ಶ್ರೀಧರಾಚಾರ್ಯ ಮುಂಗಲಿಯವರು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಕೇಶ್ ಕುಲಕರ್ಣಿ, ವಾಸುಕಿ ಕರಣಂ, ಅದಿತಿ ಕರಣಂ ಅವರಿಂದ ದಾಸವಾಣಿ ಜರುಗಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಜಾಗೀದಾರ, ಪ್ರವೀಣ್ ಕುಮಾರ್,ಪ್ರಾಣೇಶ ಶೆಟ್ಟಿ, ಪ್ರಕಾಶ್ ಹುಣಸಿಗಿ, ಶಿಕ್ಷಕಿಯರಾದ ಕೃಷ್ಣವೇಣಿ, ಕೆ ನಾಗರತ್ನ, ಹಲವಾರು ಭಜನಾ ಮಂಡಳಿಯ ಸದಸ್ಯರುಗಳು
ಭಾಗವಹಿಸಿದ್ದರು.






Comments
Post a Comment