ನವದೆಹಲಿ ಕನ್ನಡ ಭವನದಲ್ಲಿ ವಸಂತಕುಮಾರ್ ಕನ್ನಡ ರಾಜ್ಯೋತ್ಸವ ಆಚರಣೆ . 
                                                                                                                     ಜಯ ಧ್ವಜ ನ್ಯೂಸ್ , ರಾಯಚೂರು , ನ.1- ನವದೆಹಲಿಯಲ್ಲಿ  ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ ಅವರು ಕರ್ನಾಟಕ ಭವನದಲ್ಲಿ ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


 ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುವ ರಾಷ್ಟ್ರಕವಿ ಕುವೆಂಪುರವರ ಘೋಷಣೆಯಂತೆ ದೆಹಲಿಯಲ್ಲಿ ಇದ್ದರೂ ಕನ್ನಡ ರಾಜ್ಯೋತ್ಸವ ದಲ್ಲಿ ಭಾಗವಹಿಸಿ ಕನ್ನಡ ಅಭಿಮಾನ ಮೆರೆದರು. ಕರ್ನಾಟಕ ರಾಜ್ಯವು ವಿವಿಧ ಜಾತಿ, ಜನಾಂಗ, ಧರ್ಮ, ಭಾಷೆ ಮತ್ತು ಸಂಸ್ಕ್ರತಿಯನ್ನು ಒಡಲಿನಲ್ಲಿ ಇಟ್ಟುಕೊಂಡು ಶಾಂತಿ ಮತ್ತು ಸಹೋದರತೆಯಿಂದ ಬಾಳುವ ಒಂದು ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದು ಹೇಳಿದರು.


ಎಲ್ಲಾ ಜಾತಿ ಧರ್ಮದವರು ಅನೋನ್ಯತೆಯಿಂದ ಬಾಳುವದೇ ನಿವಾದ ಕರ್ನಾಟಕದ ಮಾದರಿಯಾಗಿದೆ, ಇಲ್ಲಿ ವಾಸಿಸುವ ಪ್ರತಿಯೊಬ್ಬರು ಮಾತೃ ಭಾಷೆ ಏನೇ ಇದ್ದರೂ ಕನ್ನಡ ಭಾಷೆ ಮಾತನಾಡಿ ಭಾತೃತ್ವವನ್ನು ಬೆಳೆಸಬೇಕು ಎನ್ನುವದೇ ಕನ್ನಡ ರಾಜ್ಯೋತ್ಸವದ ಉದ್ದೇಶವಾಗಿದೆ.

ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಬ್ಲಾಕ್ ಅಧ್ಯಕ್ಷರುಗಳಾದ ಅಬ್ದುಲ್ ಗಫೂರ, ಶಿವಕುಮಾರ ಚುಕ್ಕಿ, ನಾಗೇಂದ್ರಪ್ಪ ಮಟಮಾರಿ, ಅಂಬಯ್ಯ,  ಎನ್.ಶ್ರಿನಿವಾಸರೆಡ್ಡಿ, ಅಂಜನೇಯ ಕುರುಬದೊಡ್ಡಿ, ಶರಣಗೌಡ, ವಿರೇಶ ನಾಯಕ, ಗೋವಿಂದ ನಾಯಕ , ಶಿವಶಂಕರಗೌಡ, ಹನುಮಂತಪ್ಪ, ಮುದ್ದಾಪುರ, ಖಾಜಿ ಮಲಿಕ, ಲಿಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Comments

Popular posts from this blog