ಉಡುಪಿ ಪಾಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥರ ಆಶೀರ್ವಾದ ಪಡೆದ ಎನ್‌.ಎಸ್‌. ಬೋಸರಾಜು



ಜಯ ಧ್ವಜ ನ್ಯೂಸ್ ,ರಾಯಚೂರು, ನ.4- ಮಾನ್ವಿ ಪಟ್ಟಣಕ್ಕೆ ಆಗಮಿಸಿದ ಉಡುಪಿಯ ಶ್ರೀ ಪಾಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರ ಆಶೀರ್ವಾದವನ್ನು ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎನ್‌.ಎಸ್‌. ಬೋಸರಾಜು ಅವರು ಪಡೆದರು. ಮಾನ್ವಿ ಪಟ್ಟಣದ ವಾಣಿಜ್ಯೋದ್ಯಮಿ ಹಾಗೂ ಎಪಿಎಂಸಿ ಮಾಜಿ ಸದಸ್ಯ ಆರ್. ಶಿವಯ್ಯ ಶೆಟ್ಟಿ ಅವರ ನಿವಾಸಕ್ಕೆ ಶ್ರೀಪಾದಂಗಳವರು ಆಗಮಿಸಿದ ವೇಳೆ ಅವರು ಮಠಾಧೀಶರ ದರ್ಶನಾಶೀರ್ವಾದ  ಪಡೆದರು.


ಈ ಸಂದರ್ಭದಲ್ಲಿ ರೌಡೂರು ಮಹಾಂತೇಶ ಸ್ವಾಮಿ, ರಾಮಾಂಜನೇಯ ಶೆಟ್ಟಿ, ಡಿ. ರಾಘವೇಂದ್ರ ಶೆಟ್ಟಿ, ಮನಸಾಲಿ ವೆಂಕಯ್ಯ ಶೆಟ್ಟಿ, ವಿಜಯರಾವ್ ಕುಪನೇಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments

Popular posts from this blog