ತುರುಕನಡೋಣಿಯಲ್ಲಿ ಶ್ರೀ ಮಾತಾ ಈದ್ಯಮ್ಮ ದೇವಿಯ ನೂತನ ಮೂರ್ತಿಯ ಭವ್ಯ ಮೆರವಣಿಗೆ
ಜಯ ಧ್ವಜ ನ್ಯೂಸ್ ,ರಾಯಚೂರು,ನ.13-
ತಾಲೂಕಿನ ತುರುಕನಡೋಣಿಯಲ್ಲಿ ಗ್ರಾಮ ದೇವತೆಯಾದ ಶ್ರೀಮಾತಾ ಈದ್ಯಮ್ಮ ದೇವಿಯನೂತನ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲಾಯಿತು.
ಇದೇ ನ.14ರಿಂದ 16ರವರಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ದೇವಸ್ಥಾನ ಹಾಗೂ ನೂತನ ವಿಗ್ರಹ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ ಹಿನ್ನೆಲೆಯಲ್ಲಿ ಇಂದು ಗ್ರಾಮಕ್ಕೆ ತರಲಾದ ಶ್ರೀ ಮಾತಾ ಈದ್ಯಮ್ಮ ದೇವಿಯ ಮೂರ್ತಿಯನ್ನು ಗ್ರಾಮದ ಮಹಿಳೆಯರು ಕುಂಬ ಕಳಸದೊಂದಿಗೆ ಶ್ರೀ ಮಾತೆಯನ್ನು ಸ್ವಾಗತಿಸಿ ಅದ್ಧೂರಿ ಮೆರವಣಿಗೆಯಲ್ಲಿ ದೇವಸ್ಥಾನದ ವರೆಗೆ ಸಾಗಲಾಯಿತು.
ಡೊಳ್ಳು ಬಾಜಿ ಭಜಂತ್ರಿಯೊಂದಿಗೆ ಮಾತೆಯ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.
ನಾಳೆಯಿಂದ ಮೂರು ದಿನಗಳ ಕಾಲ ದೇವಸ್ಥಾನದಲ್ಲಿ ಹೋಮ ಹವನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ನ.16 ರಂದು ಮಟಮಾರಿ ಬಿಚ್ಚಾಲಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀ ಜಿಗಳು, ಸೋಮವಾರಪೇಟೆ ಹಿರೇಮಠದ ಪೀಠಾಧಿಪತಿಗಳಾದ ಶ್ರೀ ರಾಚೋಟಿ ವೀರಶಿವಾಚಾರ್ಯರ ಸಾನ್ನಿಧ್ಯದಲ್ಲಿ ನೂತನ ದೇವಸ್ಥಾನ ಹಾಗೂ ಶ್ರೀ ಮಾತೆಯ ನೂತನಮೂರ್ತಿ ಪ್ರತಿಷ್ಠಾಪನೆ,ಗೋಪುರ ಕಳಸಾರೋಹಣ ನೆರವೇರಿಸಲಾಗುತ್ತದೆ.
ಈ ಮೆರವಣಿಗೆಯಲ್ಲಿ ಗ್ರಾಮದ ಹಿರಿಯರು, ಮುಖಂಡರು, ಮಹಿಳೆಯರು, ಯುವಕ ಯುವತಿಯರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.


Comments
Post a Comment