ಕೌಟುಂಬಿಕ ಕಲಹ ಒಂದೇ ಕುಟುಂಬದ ನಾಲ್ವರು ಸಾವು


ಜಯ ಧ್ವಜ ನ್ಯೂಸ್ , ರಾಯಚೂರು, ನ.1- ಕೌಟುಂಬಿಕ ಕಲಹ‌ ಹಿನ್ನೆಲೆ ತಾಯಿ ಸೇರಿದಂತೆ ಇಬ್ಬರು ಮಕ್ಕಳ    ಶವಗಳು ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.  ಇತ್ತ ರೈಲ್ವೇ ಹಳಿಗೆ ತಲೆಕೊಟ್ಟು ಪತಿ ಸಹ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಗರದಲ್ಲಿ ಜರುಗಿದೆ.  ಜಲಾಲ ನಗರದ  ಅರುಣ(40), ಪುತ್ರ ಶ್ಲೋಕ(10), ಪುತ್ರಿ ಖುಷಿ(4) ಮೃತ ದುರ್ದೈವಿಗಳಾಗಿದ್ದು ಘಟನೆ ಬಳಿಕ ಪತಿ ವಿಷ್ಣು ಯರಮರಸ್ ಬಳಿ ರೈಲ್ವೇ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಕೊಂಡಿರುವ ಬಗ್ಗೆ ಮಾಹಿತಿ ದೊರೆತಿದೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಈ ಬಗ್ಗೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Popular posts from this blog