ವಾಲ್ಮೀಕಿ ವಿವಿಯಲ್ಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆ ಕುರಿತು ವಿಶೇಷ ಉಪನ್ಯಾಸ:

ಮನೆ ಮತ್ತು ಸಮಾಜ ಬದಲಿಸುವ ಶಕ್ತಿ  ಸ್ತ್ರೀಯಲ್ಲಿದೆ - ಪ್ರೊ.ವಿರುಪಾಕ್ಷಯ್ಯ ಡಿ.ಬಿ.ಎಂ

ಜಯ ಧ್ವಜ ನ್ಯೂಸ್  ರಾಯಚೂರು,ನ.೨೩-

ಮಹಿಳೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಇರದೆ ಎಲ್ಲಾ ಕ್ಷೇತ್ರಗಳಲ್ಲೂ ದಾಪುಗಲ್ಲು ಇಡುತ್ತಿದ್ದಾಳೆ, ಮಹಿಳೆ ಶಕ್ತಿಶಾಲಿ ಹಾಗಾಗಿ ಮನೆ ಮತ್ತು ಸಮಾಜ ಬದಲಿಸುವ ಶಕ್ತಿ ಸ್ತಿçÃಯರಲ್ಲಿದೆ. ಅವರಿಗೆ ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯಲು ಅವಕಾಶ ಕಲ್ಪಿಸಿಕೊಟ್ಟು ಸಮಾನ ಬದುಕನ್ನೂ ರೂಪಿಸಿಕೊಳ್ಳುವಂತೆ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಫಲಿತಾಂಶಗಳಲ್ಲಿ ಮಹಿಳೆಯರು ಮೊದಲ ಸ್ಥಾನಗಳಿಸಿರುವುದು ಮತ್ತು ನಾವು ಕಾಣುತ್ತೇವೆ. ಮಹಿಳೆಯರು ಉನ್ನತ ಹುದ್ದಗಳನ್ನೇರಿರುವುದು ನಾವು ಕಾಣುತ್ತೇವೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಸಚಿವರು (ಮೌಲ್ಯಮಾಪನ) ಪ್ರೊ.ವಿರುಪಾಕ್ಷಯ್ಯ ಡಿ.ಬಿ.ಎಂ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಸೋಮವಾರದಂದು ಮಹಿಳಾ ಅಧ್ಯಯನ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್.ಲತಾ ಅವರು ಮಾತನಾಡಿ, ಜ್ಞಾನ ಕೌಶಲ್ಯ ತಂತ್ರಜ್ಞಾನ ಮತ್ತು ಸಾಮರ್ಥ್ಯದಿಂದ ಕೂಡಿದ ಜಗತ್ತಾಗಿದ್ದು, ಶಿಕ್ಷಣದ ಸ್ಪರ್ಧಾತ್ಮ ಜಗತ್ತಿನಲ್ಲಿ ಮಹಿಳೆ ಬಹುಮುಖ್ಯ ಪಾತ್ರ ವಹಿಸುತ್ತಾಳೆ, ಶಿಕ್ಷಣ ಮಹಿಳೆಗೆ ಆತ್ಮವಿಶ್ವಾಸ ಮತ್ತು ಆರ್ಥಿಕ ಸ್ವಾವಲಂಬನೆ ನೀಡುತ್ತದೆ. ಸಾವಿತ್ರಿಬಾಯಿ ಪುಲೆ ಅವರನ್ನು ಈ ಸಂದರ್ಭದಲ್ಲಿ ನೆನೆಯಲೇಬೇಕು ಶಿಕ್ಷಣಕ್ಕಾಗಿ ಹೋರಾಟಮಾಡಿದ ದಿಟ್ಟ ಮಹಿಳೆ. ಪ್ರಸ್ತುತ ಮಹಿಳೆ ಉದ್ಯೋಗಿಯಷ್ಟೇ ಅಲ್ಲ ಸಣ್ಣ ಉದ್ಯಮದಿಂದ ದೊಡ್ಡ ವ್ಯಾಪಾರದವರೆಗೂ ಕಠಿಣ ಪರಿಶ್ರಮದಿಂದ ಯಶಸ್ಸುಗಳಿಸಿದ್ದಾಳೆ. ಮಹಿಳೆಗೆ ಸಮಾಜದಲ್ಲಿ ಅವಕಾಶಗಳು ಹೆಚ್ಚಾದಂತೆ ಸವಾಲುಗಳನ್ನು ಹೆದರಿಸುತ್ತಿರುವುದು ನಾವು ಕಾಣುತ್ತೇವೆ, ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳ ಜ್ಞಾನಕ್ಕೆ ಸೀಮಿತವಾಗಿರದೆ ವಿವಿಧ ಕೌಶಲ್ಯ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅವರು ಹೇಳಿದರು.


ಸರ್ಕಾರಿ ಪ್ರಥಮ ದರ್ಜೆ ಕಾಲೇಜನ ಪ್ರಾಧ್ಯಾಪಕರಾದ ಡಾ.ಶಿವರಾಜ ಕೊಪ್ಪರ ಅವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರು ತುಂಬಾ ಸವಾಲುಗಳನ್ನು ಎದುರಿಸುತ್ತಿದ್ದಾಳೆ, ಮಹಿಳಾ ಸಬಲೀಕರಣ ಎಂದರೆ ಮಹಿಳೆಗೆ ಅಧಿಕಾರ ಕೊಡುವಂತದ್ದು ಅಲ್ಲ ಆದರೆ ಎಲ್ಲಾ ಕ್ಷೇತ್ರಗಳಲ್ಲೂ ಆಕೆಗೆ ಅವಕಾಶಗಳನ್ನು ನೀಡಿ ಅವಳ ಸಾಮರ್ಥ್ಯ ಪ್ರತಿಭೆ ಶಕ್ತಿಯನ್ನು ಗುರುತಿಸಿ ಗೌರವಿಸುವುದು. ಪುರುಷರಂತೆ ಅವರಿಗೂ ಉತ್ತಮ ಮತ್ತು ಉನ್ನತ ಸ್ಥಾನಮಾನಗಳನ್ನು ನೀಡಬೇಕು. ಸಂವಿಧಾನ ಎಷ್ಟೇ ಸವಲತ್ತು ಕೊಟ್ಟಿದ್ದರು ಕಾನೂನು ಮಹಿಳೆಯರ ಪರವಾಗಿದ್ದರೂ ಅದನ್ನು ನೈಜವಾಗಿ ಸವಲತ್ತುಗಳನ್ನು ಬಳಸಿಕೊಂಡಿದ್ದಾರೆಯೇ ಎನ್ನುವುದು ಪ್ರಶ್ನೆಯಾಗುತ್ತದೆ. ಮಹಿಳೆಯರು ಸ್ವಾತಂತ್ರö್ಯದ ಹಕ್ಕನ್ನು ಸದುಪಯೋಗಬಡೆದುಕೊಳ್ಳಬೇಕು. ಮಹಿಳಾ ಸಬಲೀಕರಣ ಮೊದಲು ಮನೆಯಿಂದ ಪ್ರಾರಂಭವಾಗಬೇಕು, ವಿದ್ಯಾರ್ಥಿಗಳು ಓದುವುದರ ಕಡೆ ಗಮನಹರಿಸಿ, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಿ ಎಂದು ಅವರು ಹೇಳಿದರು.

ಸಮಾಜವಿಜ್ಞಾನ ನಿಕಾಯ ಡೀನರಾದ ಡಾ.ಕೆ.ವೆಂಕಟೇಶ್ ಮಾತನಾಡಿ, ಮಹಿಳಾ ಸಬಲೀಕರಣ ಕಾಲಕಾಲಕ್ಕೆ ತನ್ನದೇ ರೂಪರೇಷಗಳನ್ನು ಪಡೆದುಕೊಂಡಿದೆ. ಪುರುಷನಿಗಿಂತ ಮಹಿಳೆ ಹೆಚ್ಚು ದುಡಿಯುತ್ತಾಳೆ, ತಳಜಾತಿಯ ಮಹಿಳೆಯು ಅತೀ ಹೆಚ್ಚು ಶೋಷಣೆಯನ್ನು ಅನುಭವಿಸುತ್ತಾಳೆ. ಬದುಕಿನ ಎಲ್ಲಾ ಕ್ಷೇತ್ರಗಳÀಲ್ಲಿ ಮಹಿಳೆಯರಿಗೆ ಪುರುಷರಿಗೆ ಸಮಾನವಾದ ಸ್ಥಾನವನ್ನು ಕೊಡಬೇಕು ಈ ನಿಟ್ಟಿನಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಿಳಾ ಪರವಾದ ಆಲೋಚನೆಗಳು ಸ್ವಾಗತಾರ್ಹ ಹಾಗೇ ಸಮಾಜದಲ್ಲಿ ತೃತೀಯ ಲಿಂಗಿಗಳನ್ನೂ ಗೌರವಿಸಬೇಕು ಎಂದರು.

ಉಪ ಕುಲಸಚಿವರಾದ ಡಾ.ಜಿ.ಎಸ್.ಬಿರಾದಾರ, ವಿವಿಧ ನಿಕಾಯಗಳ ಡೀನರಾದ ಪ್ರೊ.ಪಾರ್ವತಿ ಸಿ.ಎಸ್., ಪ್ರೊ.ಪಿ.ಭಾಸ್ಕರ್, ಮಹಿಳಾ ವಿಭಾಗದ ಉಪನ್ಯಾಸಕರಾದ ಡಾ.ಶಾಂತದೇವಿ ಪಾಟೀಲ್, ಡಾ.ಅನಿಲಕುಮಾರ ಮಾಣಿಕ್ ಡಾ.ಅಶೋಕ ಬಬಲಾದ್, ಕು.ಪೂಜಾ ಮುರಾರಿ, ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪಧೆಗಳನ್ನು ಏರ್ಪಡಿಸಲಾಗಿ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.

ಮಹಿಳಾ ಅಧ್ಯಯನ ವಿಭಾಗದ ಸಂಯೋಜಕರಾದ ಡಾ.ಭೀಮೇಶ ಮಾಚನೂರು ಪ್ರಾಸ್ತಾವಿಕ ಮಾತನಾಡಿದರು, ವಿದ್ಯಾರ್ಥಿಗಳಾದ ಅಮರಮ್ಮ ಸಂಗಡಿಗರು ಪ್ರಾರ್ಥಿಸಿದರು, ಮಹೇಶ ನಿರೂಪಿಸಿ ವಂದಿಸಿದರು, ವಿರೇಶ ಸ್ಪರ್ಧೆಗಳ ಕಾರ್ಯಕ್ರಮ ನಿರೂಪಿಸಿದರು. 


Comments

Popular posts from this blog