Posts

ಸಂಭವನೀಯ ಸಚಿವರ ಪಟ್ಟಿಗೆ ಫೈನಲ್ ಟಚ್ ! : ಬೋಸರಾಜುರವರಿಗೆ ಒಲಿಯುವುದೇ ಮಂತ್ರಿ ಸ್ಥಾನ ?

Image
ಸಂಭವನೀಯ ಸಚಿವರ ಪಟ್ಟಿಗೆ ಫೈನಲ್ ಟಚ್ ! : ಬೋಸರಾಜುರವರಿಗೆ ಒಲಿಯುವುದೇ ಮಂತ್ರಿ ಸ್ಥಾನ ?        ರಾಯಚೂರು,ಮೇ.26- ಕಾಂಗ್ರೆಸ್ ಸರ್ಕಾರದ ಮೊದಲ ಸಂಪುಟ ವಿಸ್ತರಣೆಯಲ್ಲಿ ಎಐಸಿಸಿ ಕಾರ್ಯದರ್ಶಿ  ಎನ್.ಎಸ್.ಬೋಸರಾಜುಗೆ ಮಂತ್ರಿ ಸ್ಥಾನ ಒಲಿಯುವುದೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ.                    ಸಿಎಂ ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ಮುಖ್ಯ ಮಂತ್ರಿಗಳ ಪ್ರಮಾಣ ವಚನ ಸಂದರ್ಭದಲ್ಲಿ ಸಂಪುಟ ದರ್ಜೆ ಸಚಿವರಾಗಿ ಎಂಟು ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.                                                   ಇದೀಗ ಇನ್ನುಳಿದ ಶಾಸಕರನ್ನು  ಸಂಪುಟಕ್ಕೆ ಸೇರಿಸಿಕೊಳ್ಳುವ ಕಸರತ್ತು ತೀರ್ವಗೊಂಡಿದ್ದು ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಶಾಸಕ, ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ರವರನ್ನು ಮಂತ್ರಿ ಮಾಡಲು ಚಿಂತಿಸಲಾಗಿದೆ ಎನ್ನಲಾಗಿದ್ದು ಸಂಭವನೀಯ ಸಚಿವರ ಪಟ್ಟಿಯಲ್ಲಿ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.  ಚುನಾವಣೆಯಲ್ಲಿ ನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗ...

ಮಂತ್ರಮಾಂಗಲ್ಯ: ಸರಳ ವಿವಾಹವಾದ ಜೋಡಿ

Image
  ಮಂತ್ರಮಾಂಗಲ್ಯ: ಸರಳ ವಿವಾಹವಾದ ಜೋಡಿ ರಾಯಚೂರು,ಮೇ.25- ಸಿಂಧನೂರು ತಾಲೂಕಿನ ಗುಡದಮ್ಮ ಕ್ಯಾಂಪಿನ ಶಿವರಾಜ ಅಡವಿಭಾವಿ ಹಾಗೂ ಬಂಗಾರಿಕ್ಯಾಂಪನ ರತ್ನಾ ಅವರು ಕುವೆಂಪುರವರ ಕನಸಿನ ಮಂತ್ರಮಾಂಗಲ್ಯ ಸರಳ ವಿವಾಹ ಮಾದರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಗುಡದಮ್ಮ ಕ್ಯಾಂಪನ ವರನ ಸ್ವಗೃಹದಲ್ಲಿ ನಡೆದ ಮಂತ್ರ ಮಾಂಗಲ್ಯ ವಿವಾಹ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾರಟಗಿಯ ಉಪನ್ಯಾಸಕ ಡಾ. ಹನುಮಂತಪ್ಪ ಚಂದಲಾಪುರ ಇಂತಹ ರಚನಾತ್ಮಕ ನಿರ್ಧಾರಕ್ಕೆ ಕಾರಣೀಭೂತರಾದ ವಧು-ವರರು ಮತ್ತು ಅವರ ಕುಟುಂಬದವರನ್ನು ಅಭಿನಂದಿಸುತ್ತಾ, ಮಂತ್ರ ಮಾಂಗಲ್ಯದ ಉದ್ದೇಶ ಮತ್ತು ಪ್ರಯೋಜನಗಳು ಹಾಗೂ ಅನುಸರಿಸಬೇಕಾದ ಸರಳ ವಿಧಾನಗಳ ಕುರಿತು ಮಾತನಾಡಿದರು.ವಿವಾಹಗಳು ಯಾವತ್ತೂ ನಮ್ಮ ಶ್ರೀಮಂತಿಕೆಯ ಪ್ರದರ್ಶನದ ಅವಕಾಶಗಳಾಗಬಾರದು.  ಅತ್ಯಂತ ಕಡಿಮೆ ಖರ್ಚಿನಲ್ಲಿ ಶಿಸ್ತುಬದ್ಧವಾಗಿ ಈ ಮಂತ್ರಮಾಂಗಲ್ಯ ಮಾಡಿಕೊಳ್ಳಬಹುದು ಎಂದರು. ಪ್ರಧಾನ ಭಾಷಣ ಮಾಡಿದ ಪ್ರಗತಿಪರ ಚಿಂತಕರಾದ ಶ್ರೀ ಚಂದ್ರಶೇಖರ ಗೋರೆಬಾಳ ಅವರು ವಧುವರರಿಗೆ ದಾಂಪತ್ಯ ಜೀವನದಲ್ಲಿ ನಡೆದುಕೊಳ್ಳಲು ಅವಶ್ಯವಾದ ವೈಚಾರಿಕ ನಡೆನುಡಿಗಳ ಕುರಿತು ಮಾತನಾಡಿ ಕುವೆಂಪುರವರ ಆಶಯಗಳನ್ನು ನನಸುಮಾಡುವ ದಿಸೆಯಲ್ಲಿ ಸತಿಪತಿಗಳಿಬ್ಬರೂ ದಿಟ್ಟ ಹೆಜ್ಜೆ ಇಟ್ಟಿದ್ದೀರಿ.ನಿಮಗೆ ಅಭಿನಂದನೆಗಳು ಎಂದರು. ಕೊಪ್ಪಳ ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರತಿನಿಧಿ ಶ್ರೀ ದೇವೇಂದ್ರ ಜಿರ್ಲಿ ಅವರು ವಧುವರರ...

ರಾಘವೇಂದ್ರಸ್ವಾಮಿಗಳ ಮಠದಿಂದ ಸಾಮೂಹಿಕ ಉಪನಯನ: ಬ್ರಾಹ್ಮಣತ್ವವನ್ನು ಉಳಿಸಿಕೊಳ್ಳಲು ಉಪನಯನ ಅತ್ಯಗತ್ಯ- ಶ್ರೀಸುಬುಧೇಂದ್ರತೀರ್ಥರು

Image
  ಶ್ರೀ ರಾಘವೇಂದ್ರಸ್ವಾಮಿಗಳ ಮಠದಿಂದ ಸಾಮೂಹಿಕ ಉಪನಯನ: ಬ್ರಾಹ್ಮಣತ್ವವನ್ನು ಉಳಿಸಿಕೊಳ್ಳಲು ಉಪನಯನ ಅತ್ಯಗತ್ಯ-ಶ್ರೀಸುಬುಧೇಂದ್ರತೀರ್ಥರು ರಾಯಚೂರು,ಮೇ.೨೫-ಬ್ರಾಹ್ಮಣತ್ವವನ್ನು ಉಳಿಸಿಕೊಳ್ಳಲು ಉಪನಯನ ಅತ್ಯಗತ್ಯವೆಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿದರು. ಅವರಿಂದು ನಗರದ ಜವಾಹರ ನಗರ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀ ಮಠದಿಂದ ಆಯೋಜಿಸಲಾದ ಉಚಿತ ಸಾಮೂಹಿಕ ಉಪನಯನದಲ್ಲಿ ೨೯ ವಟುಗಳಿಗೆ  ಮಂತ್ರೋಪದೇಶ ನೆರವೇರಿಸಿ ಆಶೀರ್ವಚನ ನೀಡಿದರು. ಇಡಿ ಜಗತ್ತಿಗೆ ಬ್ರಾಹ್ಮಣ ಸಮಾಜ ಸನ್ಮಾರ್ಗ ತೋರಿಸುತ್ತ ಒಳಿತನ್ನು ಬಯಸುತ್ತ ಬಂದಿರುವ ಸಮಾಜವಾಗಿದೆ ಸನಾತನ ಹಿಂದೂ ಸಮಾಜವನ್ನು ರಕ್ಷಣೆ ಮಾಡಲು ನಾವೆಲ್ಲರೂ ನಮ್ಮ ಧರ್ಮಾಚರಣೆ ಮಾಡಬೇಕು ಸಂಸ್ಕಾರ ಹೀನನಾದರೆ ನಮ್ಮನ್ನು ನಾವೇ ಹಿಂಸಿಸಿಕೊ0ಡ0ತೆ ಎಂದ ಅವರು ವಿಪ್ರ ಸಮುದಾಯದ ಮಕ್ಕಳಿಗೆ ಬ್ರಹ್ಮೋಪದೇಶ ಮಾಡಲು ಶ್ರೀ ಮಠದಿಂದ ಮಾಡುವ ಉದ್ದೇಶ ಮಕ್ಕಳಲ್ಲಿ ಸಂಸ್ಕಾರ ನೀಡುವುದಾಗಿದೆ ಎಂದರು. ನಾವೆಲ್ಲ ಪುರಾಣದಲ್ಲಿ ಓದಿದಂತೆ ನಮ್ಮ ಋಷಿ, ಮುನಿಗಳು ಮಂತ್ರದಿ0ದ ಒಣಗಿದ ಒನಕೆಯನ್ನೆ ಚಿಗಿರಿಸಿದ್ದಾರೆ ನಮ್ಮಲ್ಲಿ ಅಂತಶಕ್ತಿ ಇದ್ದಾಗ ಏನನ್ನಾದರು ಸಾಧಿಸಬಹುದೆಂದರು. ವಿದ್ಯುತ್ ಬಲ್ಬ್ನಲ್ಲಿ ವಿದ್ಯುತ್ ಪ್ರವಹಿಸದೆ ಹೇಗೆ ವಿದ್ಯುತ್ ಬೆಳಗಲು ಸಾಧ್ಯವಿಲ್ಲವೆ ಅದೇ ರೀತಿ ನಮ್ಮಲ್ಲಿ ಅಂತಸತ್ವ ಇಲ್ಲದೆ ನಾವು ಬೆ...

ಬಿಸಿಲು ಹೆಚ್ಚಳ: ಬಾವಿ, ಕೆರೆ, ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಈಜಾಡುತ್ತಿರುವ ಮಕ್ಕಳು.

Image
  ಬಿಸಿಲು ಹೆಚ್ಚಳ : ಬಾವಿ, ಕೆರೆ, ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಈಜಾಡುತ್ತಿರುವ ಮಕ್ಕಳು.                      ರಾಯಚೂರು,ಮೇ.23- ಬಿಸಿಲಿನ ತಾಪ ಕಳೆದುಕೊಳ್ಳಲು   ಮಕ್ಕಳು ಬಾವಿ, ಕೆರೆ , ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಈಜಾಡುತ್ತಿದ್ದಾರೆ.           ಬಿರು ಬೇಸಿಗೆ  ಮುಗಿಯುತ್ತಾ ಬಂದರೂ ಇನ್ನು ಬಿಸಿಲಿನ ಪ್ರಖರತೆ ತಗ್ಗುತ್ತಿಲ್ಲ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶ ಎಂದು ಹವಾಮಾನ ಇಲಾಖೆ ಹೇಳಿದೆ .                  ಬೇಸಿಗೆ ಮಧ್ಯದ ದಿನಗಳಲ್ಲಿ ಮಳೆಯಾಗಿ ತಾಪಮಾನ ಕೊಂಚ ತಗ್ಗಿತ್ತು ಇದೀಗ ಕಳೆದ ಹದಿನೈದು ದಿನಗಳಲ್ಲಿ ಬಿಸಿ ಗಾಳಿ ಮತ್ತು ಬಿಸಿಲಿನಿಂದ ಜನ ಜಾನುವಾರುಗಳು ಬಸವಳಿಯುತ್ತಿದ್ದಾರೆ.                              ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಮಕ್ಕಳು ಭಾವಿ , ಕೆರೆಗಳಲ್ಲಿ ಈಜಾಡುತ್ತಿದ್ದಾರೆ.            ನಗರ ಪ್ರದೇಶದಲ್ಲಿ ಮಕ್ಕಳು ಪಾಲಕರೊಂದಿಗೆ ಈಜುಕೊಳದತ್ತ ಮುಖ ಮಾಡಿದ್ದಾರೆ.                      ...

ರಾಯಚೂರು ವಿಶ್ವವಿದ್ಯಾಲಯದಲ್ಲಿ ಕಸಾಸಂ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ

Image
  ರಾಯಚೂರು ವಿಶ್ವವಿದ್ಯಾಲಯದಲ್ಲಿ ಕಸಾಸಂ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ ರಾಯಚೂರು, ಮೇ 23: ಇತ್ತೀಚೆಗೆ ರಾಯಚೂರು ವಿಶ್ವವಿದ್ಯಾಲಯದ ಕೃಷ್ಣತುಂಗ ಸಭಾಂಗಣದಲ್ಲಿ ಕನ್ನಡ ಅಧ್ಯಯನ ವಿಭಾಗದಿಂದ ಕನ್ನಡ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್  ಕುಮಾರ್.ಎಸ್.ಹೊಸಮನಿಯವರು   ಮಾತನಾಡಿ, ಮೊಬೈಲ್ ಹಾಗೂ ಕಂಪ್ಯೂಟರ್ ಇಂಟರ್ನೆಟ್ ಹೆಚ್ಚಾಗಿ ಬಳಕೆಯಲ್ಲಿರುವ ಇಂದಿನ ಡಿಜಿಟಲ್ ಯುಗದಲ್ಲಿ ಜನರಲ್ಲಿ ಪುಸ್ತಕಗಳನ್ನು ಓದುವ ಪ್ರವೃತ್ತಿ ಕಡಿಮೆಯಾಗುತ್ತಿದ್ದು, ಇದನ್ನು ಗಮನಿಸಿ ಜನರ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಡಿಜಿಟಲೀಕರಣ(ಇ-ಬುಕ್ಸ್) ಮಾಡುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಒಟ್ಟು 2 ಕೋಟಿಗೂ ಅಧಿಕ ಗ್ರಂಥಗಳನ್ನು ಡಿಜಿಟಲ್ ಮಾಡುವ ಕೆಲಸವನ್ನು ಮಾಡಲಾಗಿದ್ದು, ಸದ್ಯ 3.42 ಕೋಟಿಗೂ ಅಧಿಕ ಓದುಗರು ನೋಂದಣಿ ಮಾಡಿಕೊಂಡಿರುವುದು ಇಲಾಖೆಯ ಹೆಮ್ಮೆಯಾಗಿದೆ. ಅತ್ಯಂತ ವೇಗವಾಗಿ ಗಮನಾರ್ಹ ಪ್ರಮಾಣದ ಓದುಗರನ್ನು ಸಂಪಾದಿಸಿದಕ್ಕಾಗಿ ವರ್ಡ್ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್'ನಲ್ಲಿ ತಮ್ಮ ಸಾಧನೆ ದಾಖಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಜ್ಞಾನವೇ ಶಕ್ತಿ...

ನೂತನ ಶಾಸಕ ಡಾ.ಶಿವರಾಜ ಪಾಟೀಲ್ ಪ್ರಮಾಣ ವಚನ ಸ್ವೀಕಾರ.

Image
  ನೂತನ  ಶಾಸಕ ಡಾ.ಶಿವರಾಜ ಪಾಟೀಲ್   ಪ್ರಮಾಣ ವಚನ ಸ್ವೀಕಾರ.                                ರಾಯಚೂರು,ಮೇ.22- ನೂತನವಾಗಿ ಶಾಸಕರಾಗಿ ಚುನಾಯಿತರಾದ ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ್ ವಿಧಾನಸೌಧದಲ್ಲಿ ಇಂದು  ಪ್ರಮಾಣ ವಚನ ಸ್ವೀಕರಿಸಿದರು.                                                 16 ನೇ ವಿಧಾನ ಸಭೆ ಸದಸ್ಯರಾಗಿ ಆಯ್ಕೆಯಾದ ಎಲ್ಲಾ 223 (ಸ್ಪೀಕರ್ ಹೊರತುಪಡಿಸಿ) ಆಡಳಿತ ಮತ್ತು ವಿರೋಧ ಪಕ್ಷ ಮತ್ತು ಎಲ್ಲ ಪಕ್ಷಗಳಿಂದ, ಪಕ್ಷೇತರರಾಗಿ ಆಯ್ಕೆಯಾದ ಎಲ್ಲ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಆರ್‌.ವಿ.ದೇಶಪಾಂಡೆಯವರು ಹಂಗಾಮಿ ಸಭಾಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದು ಅವರಿಗೆ ಗೌರವಾನ್ವಿತ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.

ಶರಣರ ಚಿಂತನೆಗಳಲ್ಲಿ ಚಿರಂತನ ಮೌಲ್ಯ- ಸ್ಮಿತಾ ಅಕ್ಕ

Image
ಶರಣರ ಚಿಂತನೆಗಳಲ್ಲಿ ಚಿರಂತನ ಮೌಲ್ಯ- ಸ್ಮಿತಾ ಅಕ್ಕ ರಾಯಚೂರು, ಮೇ 22- ಮಹಾತ್ಮರು, ಶರಣರು ಅಯಾ ಕಾಲಘಟ್ಟದಲ್ಲಿ ನೀಡಿರುವ ಶ್ರೇಷ್ಠ ಸಂದೇಶಗಳ ಚಿರಂತನ ಮೌಲ್ಯಗಳೇ ಮಾನವ ಕುಲಕ್ಕೆ ಇಂದಿಗೂ ಮಾರ್ಗದರ್ಶನವನ್ನು ನೀಡುತ್ತ ಬಂದಿವೆ ಎಂದು‌ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ರಾಜಯೋಗಿನಿ ಸ್ಮಿತಾ ಅಕ್ಕನವರು  ನುಡಿದರು.        ಸ್ಥಳೀಯ ಕರ್ನಾಟಕ ಸಂಘದಲ್ಲಿ ಹಮ್ಮಿಕೊಂಡಿರುವ ‘ಶರಣ ಚಿಂತನ; ವಚನ ಮಂಥನ’ 3ನೇ  ಮಾಸಿಕ ಮಾಲಿಕೆಯಲ್ಲಿ ʼಅಕ್ಕಮಹಾದೇವಿ ಸಾಹಿತ್ಯʼ ಕುರಿತ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಎಷ್ಟೆಲ್ಲ ಸಾಧಕರ ಜೀವನ ಮತ್ತು ಅವರು ನೀಡಿರುವ ಅಲೊಚನೆಗಳನ್ನು ದೇಶದಲ್ಲಿ ಅಂದಂದೇ ಪಾಲಿಸುತ್ತ ಹೋಗಿದ್ದರೆ ನಾವು ಈಗ ಕಾಣುತ್ತಿರುವ ʼವಿಶ್ವಗುರುʼ ಕನಸು ಆಗಲೇ ನನಸಾಗಿರುವುದು ಎಂದು ಅವರು ಅಭಿಪ್ರಾಯ ಪಟ್ಟರು. ಇಲ್ಲಿನ ಶಾರದಾ ವಿದ್ಯಾ ನಿಕೇತನದ ಚಿತ್ರಕಲಾ ಶಿಕ್ಷಕಿ ಕುಮಾರಿ ನರಸಮ್ಮ ಅವರು ರಚಿಸಿದ ಅಕ್ಕಮಹಾದೇವಿ ಕಲಾಕೃತಿಯನ್ನು ಅನಾವರಣ ಮಾಡುವ ಮೂಲಕ ಅವರು ಮಾಲಿಕೆಯನ್ನು ಉದ್ಘಾಟಿಸಿದರು. ಎಸ್‌ ಎಸ್‌ ಆರ್‌ ಜಿ ಮಹಿಳಾ ಕಾಲೇಜಿನ ಉಪನ್ಯಾಸಕಿ ಡಾ. ರಾಜೇಶ್ವರಿ  ವಿರಕ್ತಮಠ ಅವರು ಅಕ್ಕಮಹಾದೇವಿ ಅವರ ಜೀವನ ಮತ್ತು ವಚನ ಸಾಹಿತ್ಯದ  ವೈಶಿಷ್ಟ್ಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ...