Posts

ಜಿಲ್ಲಾಡಳಿತದಿಂದ ಸರಳ ರೀತಿಯಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ

Image
  ಜಿಲ್ಲಾಡಳಿತದಿಂದ ಸರಳ ರೀತಿಯಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ ರಾಯಚೂರು,ಮೇ.12- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶಂಕರಾಚಾರ್ಯ ಜಯಂತಿಯನ್ನು ಇಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮoದಿರದಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಶಂಕರಾಚಾರ್ಯ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಹಿನ್ನಲೆಯಲ್ಲಿ ಶಂಕರಾಚಾರ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಇಸ್ಮಾಯಿಲ್, ವಿನೋದ ಕುಮಾರ, ಸಮಾಜದ ಮುಖಂಡರಾದ ಕೃಷ್ಣಮೂರ್ತಿ ಹೆಬಸೂರು, ವೇಣುಗೋಪಾಲ, ವಸಂತರತಾವ್, ಹನುಮಂತರಾವ್, ಶ್ರೀಪಾದ ದೇಸಾಯಿ, ಹೇಮಚಂದ್ರ, ಸುಬ್ರಮಣ್ಯ, ಸದಾನಂದ,  ರಮಾಕಾಂತ, ಗುರುರಾಜ್, ನಂದೀಶ, ಸತೀಶ, ಗೋಪಾಲ ಜೋಶಿ, ರಮೇಶ ಜೋಶಿ, ಶ್ರೀಧರ, ಮುರುಳಿಧರ ಕುಲಕರ್ಣಿ, ದಂಡಪ್ಪ ಬಿರಾದಾರ, ಗಾಯತ್ರಿ, ಅರುಣಾ, ಜ್ಯೋತಿ, ಸಿಂಧು, ಅಂಜನಾ, ಚೇತನಾ, ಗೌರಿ, ಅಮೃತವಲ್ಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು .

ಕವಿಪ್ರನಿನಿ: ತಪ್ಪಿತಸ್ಥ ನೌಕರರ ಅಮಾನತ್ತಿಗೆ ಅಂಬಾಜಿರಾವ ಒತ್ತಾಯ

Image
  ಕವಿಪ್ರನಿನಿ: ತಪ್ಪಿತಸ್ಥ ನೌಕರರ ಅಮಾನತ್ತಿಗೆ ಅಂಬಾಜಿರಾವ ಒತ್ತಾಯ  ರಾಯಚೂರು,ಮೇ.9- ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿರ್ದೇಶಕರು ಆಡಳಿತ ಮತ್ತು ಮಾ. ಸಂ. ಹಾಗೂ ಶಿಸ್ತು ಪ್ರಾಧಿಕಾರ ದಿಂದ ದಿನಾಂಕ 30 ಏಪ್ರಿಲ್ 2024 ರಂದು ಕವಿಪ್ರನಿನಿ ಯ 44 ಅಧಿಕಾರಿ /ನೌಕರರ ವಿರುದ್ಧ ಇಲಾಖೆ ವಿಚಾರಣೆ ದಾಖಲಾಗಿದೆ, 10 ದಿನ ದೊಳಗೆ ರಕ್ಷಣಾತ್ಮಕ ಹೇಳಿಕೆ ನೀಡಲು ಅವಕಾಶ ಕೊಟ್ಟಿರುತ್ತಾರೆ ಆದರೇ ಆರೋಪ ಪಟ್ಟಿಯಲ್ಲಿ 2,28,06,760 ರೂ. ಗಳ ನಷ್ಟ ವುಂಟು ಮಾಡಿದ್ದಾರೆ ಎಂದು ಆರೋಪ ಮೇಲ್ನೋಟಕ್ಕೆ ಸಾಭಿತಾಗಿದ್ದು ಎದ್ದು ಕಾಣುತ್ತಿದ್ದರೂ ಈ 44 ಜನರಿಗೆ ಅಮಾನತ್ತು ಮಾಡದೆ ಇಲಾಖೆ ವಿಚಾರಣೆ ಮಾಡಿದರೆ ಸಾಭಿತು ಆಗಲೂ ಹೇಗೆ ಸಾಧ್ಯ? ಹಾಗಾಗಿ ಈ ಕೂಡಲೇ ಅಮಾನತ್ತು ಗೊಳಿಸಿ ಮುಂದಿನ ವಿಚಾರಣೆ ನಡೆಸಬೇಕು ಹಾಗಾದರೆ ನಿಷ್ಪಕ್ಷಪಾತವಾಗಿ ವಿಚಾರಣೆ ಆಗುತ್ತೆ ಇಲ್ಲಾ ವಾದಲ್ಲಿ ಈ 44 ಜನರಿಗೆ ಅಮಾನತ್ತು ಮಾಡದೆ ವಿಚಾರಣೆ ನಡೆಸಿದರೆ ದಾಖಲೆಗಳು ತಿರುಚುವ ಸಂಭವ ತುಂಬಾ ಯಿರುತ್ತದೆ ಎಂದು ಸಮಾಜ ಸೇವಕ ಅಂಬಾಜಿರಾವ ಮೈದರಕರ್ ತಿಳಿಸಿದ್ದಾರೆ.

ಭದ್ರತಾ ಕೊಠಡಿ ಸೇರಿದ ಮತಯಂತ್ರಗಳು: ಭದ್ರತೆಗಾಗಿ ಸೇನಾ ಪಡೆ ನಿಯೋಜನೆ

Image
ಭದ್ರತಾ ಕೊಠಡಿ ಸೇರಿದ ಮತಯಂತ್ರಗಳು : ಭದ್ರತೆಗಾಗಿ ಸೇನಾ ಪಡೆ ನಿಯೋಜನೆ ರಾಯಚೂರು,ಮೇ.7-ರಾಯಚೂರು ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಮತದಾನ ಪ್ರಕ್ರಿಯೆಯು ಮೇ.೭ರಂದು ನಡೆದಿದ್ದು, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ.೬೪.೧೦ ರಷ್ಟು ಮತದಾನವಾಗಿದೆ. ಈ ನಿಟ್ಟಿನಲ್ಲಿ ಮತದಾನವಾದ ಮತಯಂತ್ರಗಳನ್ನು ರಾಯಚೂರು ನಗರದ ಎಸ್‌ಆರ್‌ಪಿಎಸ್ ಪಿಯು ಕಾಲೇಜಿನ ಭದ್ರತಾ ಕೊಠಡಿಯಲ್ಲಿ(ಸ್ಟಾಂಗ್ ರೂಮ್) ಭದ್ರಪಡಿಸಲಾಗಿದೆ. ಮೇ.೭ರಂದು ಮತದಾನವಾದ ನಂತರ ವಿವಿಧ ಮತಗಟ್ಟೆಗಳಿಂದ ಮತಯಂತ್ರಗಳನ್ನು ಆಯಾ ಮತದಾನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಟಾçಂಗ್ ರೂಮ್‌ಗಳಿಗೆ ತಂದು ಶೇಖರಿಸಿದ್ದಾರೆ. ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಿದ ನಂತರ ಕೊಠಡಿಯ ಬಾಗಿಲನ್ನು ಭದ್ರಪಡಿಸಲಾಗಿದೆ ಮತ್ತು ಭದ್ರತೆಗಾಗಿ ಸೇನಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.  ಭದ್ರತಾ ಕೊಠಡಿಗಳ ಸುತ್ತಲೂ ಕಲಂ ೧೪೪ ನಿಷೇದಾಜ್ಞೆ ಜಾರಿ: ಮೇ.೭ರ ಸಂಜೆ ೬:೦೦ ಗಂಟೆಯಿoದ ಮತದಾನ ಎಣಿಕೆ ಕಾರ್ಯ ಮುಕ್ತಾಯವಾಗುವವರೆಗೆ ಸುತ್ತಮುತ್ತಲು ೨೦೦ ಮೀಟರ್ ಸುತ್ತುವರೆದ ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ಅಹತಕರ ಘಟನೆಗಳಿಗೆ ಆಸ್ಪದವಾಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಮುಂಜಾಗೃತಾ ಕ್ರಮವಾಗಿ ದಂಡ ಪ್ರಕ್ರಿಯೆ ಸಂಹಿತೆ ೧೯೭೩ರ ಕಲಂ ೧೪೪ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಆದೇಶ ಹೊರಡಿಸಿದ್ದಾರೆ.

ಶಾಂತಿಯುತವಾಗಿ ಜರುಗಿದ ರಾಯಚೂರು ಲೋಕಸಭಾ ಕ್ಷೇತ್ರದ ಮತದಾನ: ಅಂದಾಜು ಶೇ.62.00 ರಷ್ಟು ಮತದಾನ

Image
  ಶಾಂತಿಯುತವಾಗಿ ಜರುಗಿದ ರಾಯಚೂರು ಲೋಕಸಭಾ ಕ್ಷೇತ್ರದ ಮತದಾನ:                          ಅಂದಾಜು ಶೇ.62.00 ರಷ್ಟು ಮತದಾನ ರಾಯಚೂರು,ಮೇ.07-ರಾಯಚೂರು ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ.7ರಂದು ರಾಯಚೂರು ಲೋಕಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಜರುಗಿತು. ಜಿಲ್ಲೆಯ 5 ಹಾಗೂ ಯಾದಗಿರಿ ಜಿಲ್ಲೆಯ 3 ಕ್ಷೇತ್ರಗಳ ಒಟ್ಟು 2203 ಮತಗಟ್ಟೆಗಳು ಮೇ.7 ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಅಂದಾಜು ಶೇ.62.00 ರಷ್ಟು ಮತದಾನವಾಗಿದೆ. ಬೆಳಿಗ್ಗೆ 7:00 ಗಂಟೆಯಿoದ ಆರಂಭಗೊoಡ ಮತದಾನವು ಬೆಳಿಗ್ಗೆ 9:00 ಗಂಟೆಯ ವೇಳೆಗೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಶೇ.8.83 ರಷ್ಟು ಮತದಾನವಾಗಿದೆ. ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.9.25, ರಾಯಚೂರು ನಗರ ಪ್ರದೇಶದಲ್ಲಿ ಶೇ.9.63, ಮಾನವಿಯಲ್ಲಿ ಶೇ.7.72, ದೇವದುರ್ಗ ಶೇ.6.68, ಲಿಂಗಸುಗೂರು 7.06, ಶೋರಾಪುರ ಶೇ.9.64, ಶಹಾಪುರ ಶೇ.8.84 ಹಾಗೂ ಯಾದಗಿರಿ ಕ್ಷೇತ್ರದಲ್ಲಿ ಶೇ.7.30ರಷ್ಟು ಶೇಖಡವಾರು ಮತದಾನವಾಗಿದೆ. ಬೆಳಿಗ್ಗೆ 11:00ರ ಹೊತ್ತಿಗೆ ರಾಯಚೂರು ಗ್ರಾಮೀಣ ಭಾಗದಲ್ಲಿ ಶೇ.24.81, ರಾಯಚೂರು ನಗರ ಪ್ರದೇಶದಲ್ಲಿ ಶೇ.20.18, ಮಾನವಿಯಲ್ಲಿ ಶೇ.22.41, ದೇವದುರ್ಗ ಶೇ.21.56, ಲಿಂಗಸುಗೂರು ಶೇ.20.51, ಶೋರಾಪುರ ಶೇ.24.35, ಶಹಾಪುರ ಶೇ.22.02 ಹಾಗೂ ಯಾದಗಿ...

ವಿವಿಧ ಮತಗಟ್ಟೆಗಳಲ್ಲಿ ಗಣ್ಯರಿಂದ ಮತದಾನ.

Image
  ವಿವಿಧ ಮತಗಟ್ಟೆಗಳಲ್ಲಿ ಗಣ್ಯರಿಂದ ಮತದಾನ.                              ರಾಯಚೂರು,ಮೇ.7- ಲೋಕಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ರಾಜಕೀಯ ಗಣ್ಯರು ಮತದಾನ ಮಾಡಿದರು. ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು , ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಸಂಸದ ಅಮರೇಶ್ವರ ನಾಯಕ,ನಗರ ಶಾಸಕ ಡಾ.ಶಿವರಾಜ ಪಾಟೀಲ್, ಕುಟುಂಬ ಸಮೇತರಾಗಿ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದರು. 

ವಾರ್ಡ್ ನಂ 17: ಮತದಾನ ಕೇಂದ್ರಕ್ಕೆ ಶಾಸಕ ಡಾ.ಶಿವರಾಜ ಪಾಟೀಲ್ ಭೇಟಿ : ಬಿಸಿಲಿನ ತಾಪಕ್ಕೆ ಮತದಾರರು ಹೈರಾಣ

Image
  ವಾರ್ಡ್ ನಂ 17: ಮತದಾನ ಕೇಂದ್ರಕ್ಕೆ ಶಾಸಕ ಡಾ.ಶಿವರಾಜ ಪಾಟೀಲ್ ಭೇಟಿ :                            ಬಿಸಿಲಿನ ತಾಪಕ್ಕೆ ಮತದಾರರು ಹೈರಾಣ                                            ರಾಯಚೂರು ,ಮೇ.7- ನಗರದ ವಾರ್ಡ್ ನಂ.17 ದಲ್ಲಿರುವ ದುಧಿಬೆನ್ ಟಾಕರ್ಸಿ ಮತಗಟ್ಟೆಗೆ ಶಾಸಕ ಡಾ.ಶಿವರಾಜ ಪಾಟೀಲ್ ಭೇಟಿ ನೀಡಿದರು.     ಸರತಿ ಸಾಲಿನಲ್ಲಿ ಮತದಾರರು ಮತದಾನ ಮಾಡುವುದನ್ನು ವೀಕ್ಷಿಸಿದರು ಶಾಸಕರೊಂದಿಗೆ ಭಾವಚಿತ್ರ ತೆಗೆಸಿಕೊಳ್ಳಲು ಯುವಕರು ಮುಂದಾದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.                  ಸರದಿ ಸಾಲಿನಲ್ಲಿ ನಿಂತು  ಮತದಾನ: ಬಿಸಿಲು ಏರುತ್ತಿದ್ದಂತೆ ಮಂದ ಗತಿಯಲ್ಲಿ ಮತದಾನ ಸಾಗಿದ್ದರು ಕೆಲ ಮತಗಟ್ಟೆಯಲ್ಲಿ ಜನ ಜಂಗುಳಿ ನೆರೆದಿತ್ತು ಬೆಳಿಗ್ಗೆ ಆಗಮಿಸಿದ ಮತದಾರರು ಸರದಿ ಸಾಲಿನಲ್ಲಿ ನಿಂತಿದ್ದರೂ ತಮಗೆ ಇನ್ನು ಮತದಾನ ಮಾಡಲು ವಿಳಂಬವಾಗುತ್ತಿರುವ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ ಅವರು ಎರೆಡು ಸಾಲು ಮಾಡುವಂತೆ ಮತಗಟ್ಟೆ ಅಧಿಕಾರಿಗಳಿಗೆ ಮನವಿ ಮಾಡಿದರು. ಕೆಲ ಮತಗಟ್ಟೆಗ...

ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗಳಿಗೆ ತೆರಳಿದ ಮತದಾನ ಕೇಂದ್ರದ ಸಿಬ್ಬಂದಿ: ಮೇ.7ರ ಮತದಾನಕ್ಕೆ ಸಕಲ ಸಿದ್ದತೆ

Image
ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗಳಿಗೆ ತೆರಳಿದ ಮತದಾನ ಕೇಂದ್ರದ ಸಿಬ್ಬಂದಿ:                    ಮೇ.7ರ ಮತದಾನಕ್ಕೆ ಸಕಲ ಸಿದ್ದತೆ ರಾಯಚೂರು,ಮೇ.೦6- ರಾಯಚೂರು ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ.7ರಂದು ಮತದಾನ ಪ್ರಕ್ರಿಯೆ ಜರುಗಲಿದ್ದು, ಇದಕ್ಕಾಗಿ ಇಂದು ಜಿಲ್ಲೆಯ ವಿವಿಧ ಮಸ್ಟರಿಂಗ್ ಕೇಂದ್ರಗಳಿ0ದ ವಿವಿಧ ಮತಗಟ್ಟೆಗಳಿಗೆ ಒಟ್ಟು ೮೪೬೪ ಮತಗಟ್ಟೆ ಸಿಬ್ಬಂದಿ ಮತದಾನದ ಸಾಮಾಗ್ರಿಗಳೊಂದಿಗೆ ತೆರಳಿದರು.  ನಗರದ ಎಸ್‌ಆರ್‌ಪಿಎಸ್ ಪಿಯು ಕಾಲೇಜು ಆವರಣದಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಾಗೂ ರಾಯಚೂರು ನಗರದ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ತೆರಳುವ ಮತಗಟ್ಟೆ ಸಿಬ್ಬಂದಿಗೆ ಮತಯಂತ್ರಗಳನ್ನು ಹಾಗೂ ಮತದಾನ ಸಾಮಾಗ್ರಿಗಳನ್ನು ನೀಡಲಾಯಿತು. ರಾಯಚೂರು ಗ್ರಾಮೀಣ ಕ್ಷೇತ್ರದ ೨೭೫ ಹಾಗೂ ರಾಯಚೂರು ನಗರ ಕ್ಷೇತ್ರದ ೨೫೦ ಮತಗಟ್ಟೆಗಳಿಗೆ ನಿಯೋಜಿಸಿದ್ದ ಮತಗಟ್ಟೆ ಸಿಬ್ಬಂದಿ ಬೆಳಿಗ್ಗೆಯಿಂದಲೇ ತಮಗೆ ನೀಡಲಾದ ಮತಗಟ್ಟೆಗಳ ವಿವರಗಳನ್ನು ಪಡೆದು ಮತದಾನ ಕಾರ್ಯಕ್ಕೆ ತೆರಳಿದರು. ಉಳಿದಂತೆ ಮಾನವಿ ವಿಧಾನ ಸಭಾ ಕ್ಷೇತ್ರದ ೨೭೫, ದೇವದುರ್ಗ ವಿಧಾನಸಭಾ ಕ್ಷೇತ್ರದ ೨೬೭, ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ೨೮೫ ಮತಗಟ್ಟೆಗಳಿಗೆ  ಶೋರಾಪುರ ಕ್ಷೇತ್ರದ ೩೧೭, ಶಹಪುರ ಕ್ಷೇತ್ರದ ೨೬೫ ಹಾಗೂ ಯಾದಗಿರಿ ಕ್ಷೇತ್ರದ ೨೬೮ ಮತಗಟ್ಟೆಗಳಿಗೆ ಆಯಾ ವಿಧಾನಸಭಾ ...