ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇರಿದಂತೆ ವಿವಿಧೆಡೆ ಜು.26 ರಿಂದ 28ರವರೆಗೆ ಡಾ.ಈ.ವಿ.ಸ್ವಾಮಿನಾಥನ್ ರವರಿಂದ ಉಪನ್ಯಾಸ ಕಾರ್ಯಕ್ರಮ -ಸ್ಮಿತಾ ಅಕ್ಕ. ಜಯ ಧ್ವಜ ನ್ಯೂಸ್, ರಾಯಚೂರು, ಜು.24- ಪ್ರಸಿದ್ಧ ಉಪನ್ಯಾಸಕಾರ ರಾದ ಡಾ.ಈ.ವಿ.ಸ್ವಾಮಿನಾಥನ್ ಮುಂಬೈ ಅವರಿಂದ ಜು.26 ರಿಂದ 28 ವರೆಗೆ ಈಶ್ವರೀಯ ವಿಶ್ವವಿದ್ಯಾಲಯ ಸೇರಿದಂತೆ ನಗರದ ವಿವಿಧೆಡೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಮಿತಾ ಅಕ್ಕ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜು.26 ರಂದು ರಿಮ್ಸ್ ಆಸ್ಪತ್ರೆಯಲ್ಲಿ ಮಾನಸಿಕ ಮತ್ತು ಭಾವನಾತ್ಮಕ ವಿಷಯ ಕುರಿತು ಬೆಳಿಗ್ಗೆ 9.30 ರಿಂದ 11.30ರವರೆಗೆ ಉಪನ್ಯಾಸ ನಂತರ ರಂಗಮಂದಿರದಲ್ಲಿ ಶಿಕ್ಷಕರು ಮತ್ತು ಅಧ್ಯಾಪಕರಿಗೆ ಪರಿಣಾಮಕಾರಿ ಬೋಧನೆ ಬಗ್ಗೆ ಉಪನ್ಯಾಸ ನಂತ...